Advertisement

ಪಡಿತರ ವಿತರಣೆ ಅಕ್ರಮ: ಕಾನೂನು ಕ್ರಮ

04:59 AM Jul 05, 2020 | Lakshmi GovindaRaj |

ಕೊಳ್ಳೇಗಾಲ: ಬಡವರಿಗೆ ನೀಡುವ ಪಡಿತರ ವಿತರಣೆಯಲ್ಲಿ ಕಳೆದ 2018ರಲ್ಲಿ 1.14 ಕೋಟಿ ರೂ. ದುರ್ಬಳಕೆ ತನಿಖೆ ನಡೆಸಿ ಒಂದು ವಾರ ದಲ್ಲಿ ಕಾನೂನು ಕ್ರಮ ಕೈಗೊಳ್ಳಲಿದ್ದಾರೆ ಎಂದು ಶಾಸಕ ಎನ್‌.ಮಹೇಶ್‌ ಹೇಳಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ಅಕ್ಕಿ 2261 ಕ್ವಿಂಟಲ್‌, ತೊಗರಿ ಬೇಳೆ 234.57 ಕ್ವಿಂಟಲ್‌, ಸಕ್ಕರೆ 530.17 ಕ್ವಿಂಟಲ್‌, ತಾಳೆ ಎಣ್ಣೆ 15835 ಲೀಟರ್‌ ಖರೀದಿಯಲ್ಲಿ ಅಕ್ರಮ ನಡೆದಿದ್ದು, ಜಿಲ್ಲಾ ಆಹಾರ ಉಪ ನಿರ್ದೇಶಕ ವಿಕ್ರಮ್‌ ರಾಜೇ  ಅರಸ್‌ ತನಿಖೆ ಚುರುಕುಗೊಳಿಸಿ ದ್ದು, ಒಂದು ವಾರದಲ್ಲಿ ಫ‌ಲಿತಾಂಶ ಹೊರ ಬೀಳಲಿದೆ ಎಂದರು.

ಸಂಸ್ಥೆಯಲ್ಲಿ 17 ನೌಕರರು ಕರ್ತವ್ಯ ನಿರ್ವಹಿ ಸುತ್ತಿದ್ದು, ಹಲವು ತಿಂಗಳಿಂದ ಸಂಬಳ ನೀಡಿಲ್ಲ. ಪಡಿತರ ಅಕ್ಕಿಯೂ ಸಮರ್ಪಕವಾಗಿ ವಿತರಿಸಿಲ್ಲ. ನನಗೆ ದೂರು ಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಹಣ ದುರ್ಬಳ ಕೆಯಾಗಿರುವುದು ಕಂಡು ಬಂದಿದೆ. ತನಿಖೆಯ ಬಳಿಕ ದುರ್ಬಳಕೆ ಮಾಡಿಕೊಂಡಿರುವ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಅಥವಾ  ಮಂಡಳಿ ಸೂಪರ್‌ಸೀಡ್‌ ಮಾಡಲಾ ಗುವುದು ಎಂದರು.

ಅಭಿನಂದನೆ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್‌ ಕುಮಾರ್‌ ಯಶಸ್ವಿಗೊಳಿಸಿದ್ದು, ಸಚಿವರಿಗೆ ಅಭಿನಂದನೆ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next