Advertisement

ಜಪಾನಂದ ಶ್ರೀಗಳ  ದಿನಸಿ ಕಿಟ್ ಹಾಗೂ ಟಾರ್ಪಲ್  ನೆರೆ ಸಂತ್ರಸ್ತರಿಗೆ ವಿತರಣೆ

05:35 PM Aug 19, 2022 | Team Udayavani |

ಕೊರಟಗೆರೆ: ತಾಲೂಕಿನಲ್ಲಿ ಅತಿ ಹೆಚ್ಚು ಮಳೆಯ ಅವಾಂತರದಿಂದ ಅನೇಕ ಮನೆಗಳಿಗೆ ನೀರು ನುಗ್ಗಿ ಅವಘಡ ಸೃಷ್ಟಿಯಾಗಿತ್ತು ಜತೆಗೆ ಎಷ್ಟೋ ಮನೆಗಳು ಬಿದ್ದು ಹೋಗಿದ್ದವು.ಇಂತಹ ಮನೆಗಳ ಕುಟುಂಬಸ್ಥರಿಗೆ ಪಾವಗಡದ ಶ್ರೀ ರಾಮಕೃಷ್ಣ ಆಶ್ರಮದ ಜಪಾನಂದ ಶ್ರೀಗಳು  ದಿನಸಿ ಕಿಟ್ ಟಾರ್ಪಲ್ ಸೇರಿದಂತೆ ಪ್ರತಿನಿತ್ಯ ಸಾರ್ವಜನಿಕರಿಗೆ ಬೇಕಾಗುವ ಕೆಲವು ಗೃಹಪಯೋಗಿ ವಸ್ತುಗಳನ್ನು ಗ್ರಾಮಗಳಿಗೆ ಭೇಟಿ ನೀಡಿ ಕುಟುಂಬಸ್ಥರಿಗೆ  ವಿತರಿಸಿದರು.

Advertisement

ನಂತರ ಉಳಿದ ಸಾಕಷ್ಟು ಹಳ್ಳಿಗಳಿಗೆ ತಲುಪಿಸಬೇಕಾದ ದಿನಸಿ ಕಿಟ್ ಗಳು ಹಾಗೂ ಗೃಹೋಪಯೋಗಿ ಕೆಲವು ವಸ್ತುಗಳನ್ನು ತಾಲೂಕು ದಂಡಾಧಿಕಾರಿ ನಾಹಿದಾ ಜಮ್ ಜಮ್  ಅವರಿಗೆ ನೀಡಿ ಎಲ್ಲಾ ನೆರೆ ಸಂತ್ರಸ್ತರಿಗೆ  ಆದಷ್ಟು ಬೇಗ ತಲುಪುವ ವ್ಯವಸ್ಥೆ ಮಾಡಲು ತಿಳಿಸಿದರು.

ತಹಶೀಲ್ದಾರ್ ನಾಹಿದಾ ಜಮ್ ಜಮ್, ಪತ್ರಕರ್ತರ ಸಹಕಾರದೊಂದಿಗೆ ಪತ್ರಕರ್ತರ ಭವನದಲ್ಲಿ ಶೇಖರಿಸಿಟ್ಟಿದ್ದ ದಿನಸಿ ಪದಾರ್ಥಗಳು ಹಾಗೂ ಗೃಹೋಪಯೋಗಿ ವಸ್ತುಗಳನ್ನು ಗ್ರಾಮದ ನೆರೆ ಸಂತ್ರಸ್ಥರಿಗೆ ವಿತರಿಸಲಾಯಿತು .ಈ ಸಂದರ್ಭದಲ್ಲಿ ತಾಲೂಕು ಕಚೇರಿಯ ಅಧಿಕಾರಿಗಳು ಹಾಗೂ ಪತ್ರಕರ್ತ ಸಂಘದ ಎಲ್ಲ ಪದಾಧಿಕಾರಿಗಳು ಭಾಗವಹಿಸಿದ್ದರು

ತಹಶೀಲ್ದಾರ್ ನಾಹಿದಾ ಜಮ್ ಜಮ್ ಮಾತನಾಡಿ ತಾಲೂಕಿನಲ್ಲಿ ಕಳೆದ ಒಂದು ತಿಂಗಳಿಂದ  ಸುರಿದ ಅತಿ ಹೆಚ್ಚು ಮಳೆಯಿಂದಾಗಿ ಅನೇಕ  ಜನರ ಮನೆಗಳು ಬಿದ್ದು ಹೋಗಿದ್ದವು ಇನ್ನು ಕೆಲವು ಮನೆಗಳ ಒಳಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು ಅಂತಹ ಕುಟುಂಬಗಳಿಗೆ  ಪಾವಗಡದ ಶ್ರೀರಾಮಕೃಷ್ಣ ಆಶ್ರಮದ ಶ್ರೀ ಜಪಾನಂದ ಶ್ರೀಗಳು  ದಿನಸಿ ಕಿಟ್ ಗಳು, ಟಾರ್ಪಲ್ ಇನ್ನಿತರ ಗೃಹೋಪಯೋಗಿ ವಸ್ತುಗಳನ್ನು ನೀಡಿದರು. ಅವುಗಳನ್ನು ಅರ್ಹ ನೆರೆ ಸಂತ್ರಸ್ತರಿಗೆ ವಿತರಿಸಲಾಯಿತು. ಜಪಾನಂದ ಶ್ರೀಗಳ ಅನೇಕ ಜನಪರ ಕೆಲಸಗಳು ನಮ್ಮ ತಾಲೂಕು ಸೇರಿದಂತೆ ಇಡೀ ರಾಜ್ಯದಲ್ಲಿ  ನಡೆಯುತ್ತಿದೆ. ಇವರ ಜನರ ಸೇವೆ ಹೀಗೆ ಮುಂದುವರೆಯಲಿ ಎಂದು ಆಶಿಸುತ್ತೇನೆ ಎಂದು ತಿಳಿಸಿದರು.

ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುರುಷೋತ್ತಮ್ ಮಾತನಾಡಿ, ಪಾವಗಡದ ಶ್ರೀ ರಾಮಕೃಷ್ಣ ಆಶ್ರಮದ ಶ್ರೀ ಜಪಾನಂದ ಶ್ರೀಗಳು ನಮ್ಮ ತಾಲ್ಲೂಕಿನ ಪತ್ರಕರ್ತರ ಮೇಲೆ ಇಟ್ಟಿರುವ ವಿಶ್ವಾಸವು  ಅಪಾರವಾಗಿದೆ. ಅವರು ನಮ್ಮ ತಾಲ್ಲೂಕಿಗೆ ಹಾಗೂ ಇಡೀ ರಾಜ್ಯದಲ್ಲಿ ಎಲ್ಲೇ ಜನರಿಗೆ ಸಮಸ್ಯೆಯಾಗಿದ್ದರೂ ಸಹ ಸ್ವತಃ ಅವರೇ ತೆರಳಿ ಅಲ್ಲಿನ ಜನರ ಸಮಸ್ಯೆಯನ್ನು ಆಲಿಸಿ ಅವರಿಗೆ ಬೇಕಾಗುವ ಸೂಕ್ತ ಸೌಲಭ್ಯಗಳನ್ನು ಒದಗಿಸುವಲ್ಲಿ ಜಪಾನಂದ ಶ್ರೀಗಳ ಕಾರ್ಯ ಬಹು ದೊಡ್ಡದಾಗಿದೆ ಅವರಿಗೆ ಸಹಕಾರ ನಡೆಸುವ ಇನ್ಫೋಸಿಸ್ ಹಾಗೂ ರೆಡ್ ಕ್ರಾಸ್ ಸಂಸ್ಥೆಯ ಮುಖ್ಯಸ್ಥರ ಕೊಡುಗೆಯೂ ಅಪಾರವಾಗಿದೆ. ಕೊಡುವ ಕೈಗಳು ಬಹಳಷ್ಟು ಇರುತ್ತದೆ. ಆದರೆ ಅದನ್ನು ಸಮರ್ಪಕವಾಗಿ ವಿತರಿಸುವ ಕೆಲಸ ಮಾಡುವುದು ಕೇವಲ ಬೆರಳೆಣಿಕೆಯಷ್ಟು ಜನರು ಮಾತ್ರ. ಅವರಲ್ಲಿ ಒಬ್ಬರಾದ ಜಪಾನಂದ ಶ್ರೀಗಳ ಕಾರ್ಯ ನಾವೆಲ್ಲರೂ ಮೆಚ್ಚಲೇಬೇಕು ಅವರ ಜೊತೆ ನಾವು ಸದಾ ಇರುತ್ತೇವೆ ಅವರ ಸೇವೆ ಹೀಗೆ ಮುಂದುವರೆಯಲಿ ಎಂದು ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next