Advertisement
ಶೂನ್ಯವೇಳೆಯಲ್ಲಿ ವಿಚಾರ ಪ್ರಸ್ತಾಪಿಸಿದ ವಿಪಕ್ಷ ಉಪನಾಯಕ ಯು.ಟಿ ಖಾದರ್ , ನಮ್ಮ ರಾಜ್ಯದ ಅಭಿವೃದ್ಧಿ ಆಗಬೇಕಾ್ದಾರೆ ಸಾಮರಸ್ಯ, ಸಹೋದರತೆ ಇರಬೇಕು. ಕೆಲ ಕ್ರೂರ ಮನಸ್ಸುಗಳು ಸಮಸ್ಯೆ ಸೃಷ್ಟಿಸ್ತಿದ್ದಾರೆ. ಬೀದಿ ಬದಿ ವ್ಯಾಪಾರಿಗಳು ಇಂತದ್ದೇ ಧರ್ಮ ಅಂತ ಅಲ್ಲದೆ ಜೀವನ ಸಾಗಿಸುತ್ತಿದ್ದಾರೆ.ಕೆಲವು ಕಡೆ ಧಾರ್ಮಿಕ ಕೇಂದ್ರದಲ್ಲಿ ಕೆಲವರು ಮುಸ್ಲಿಂ ಧರ್ಮದವರು ವ್ಯಾಪಾರ ಮಾಡದಂತೆ ಆಗ್ರಹಿಸುತ್ತಿದ್ದಾರೆ. ಅವರು ಕೆಟ್ಟ ಮನಸ್ಸಿನವರು, ಕ್ರೂರಿಗಳು, ಹೇಡಿಗಳು ಎಂದರು.
ಏನು ಮಾಡಿದ್ದೀರಿ ನೀವು ಎಂದು ಆಕ್ರೋಶ ಹೊರ ಹಾಕಿದರು.
Related Articles
Advertisement
ಮೋಸ, ಕಳ್ಳತನ ಮಾಡದೆ ಬದುಕುತ್ತಿದ್ದಾರೆ : ಖಾದರ್ ಮನವಿ
ಬೀದಿಬದಿ ವ್ಯಾಪಾರಿಗಳು ಸ್ವಾಭಿಮಾನದಿಂದ ಕೆಲಸ ಮಾಡುತ್ತಿದ್ದಾರೆ.ಮೋಸ, ಕಳ್ಳತನ ಮಾಡದೆ ಬದುಕುತ್ತಿದ್ದಾರೆ. ಎಲ್ಲಾ ಧರ್ಮದ ಜನ ವ್ಯಾಪಾರ ಮಾತ್ತಿದ್ದಾದ್ದಾರೆ, ಇದು ಓಪನ್ ಮಾರ್ಕೆಟ್. ಇದರ ನಡುವೆ ಕೆಲವರು ವೈಮನಸ್ಸು ಹುಟ್ಟಿಸುವ ಕೆಲಸ ಮಾಡುತ್ತಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಬ್ಯಾನರ್ ಹಾಕಿದ್ದಾರೆ.ಹೆಸರು ಹಾಕಿಲ್ಲ ಸಮಸ್ತ ಬಾಂದವರು ಅಂತ ಹಾಕಿದ್ದಾರೆ.ಹೆಸರು ಹಾಕಿದರೆ ಅವರ ಹೆಸರು ಉಲ್ಲೇಖ ಮಾಡಬಹುದು. ಈಗ ಮಾದ್ಯಮದಲ್ಲಿ ಪ್ರಚಾರ ಸಿಗುತ್ತಿದೆ ಎಂದರು.
ನಾವು ಮುಲ್ಕಿಯ ಹಿಂದೂ ಸಹೋದರರನ್ನಅಭಿನಂದಿಸುತ್ತೇನೆ. ಅವರೇ ಹೋಗಿ ಬೆದರಿಸಿ ತೆಗೆಸಿದ್ದಾರೆ. ಬುದ್ದಿವಾದ ಹೇಳಿದ್ದಕ್ಕೆ ಪೊಲೀಸರು ಮಾಡದ ಕೆಲಸ ಹಿಂದೂ ಸಹೋದರರು ಮಾಡುತ್ತಿದ್ದಾರೆ. ನಾವೆಲ್ಲರೂ ಸೇರಿ ಮಟ್ಟ ಹಾಕುವ ಕೆಲಸ ಮಾಡಬೇಕಿದೆ. ಶಿವಮೊಗ್ಗ, ನೆಲಮಂಗಲ, ಕರಾವಳಿ, ಶಿರಸಿಯಲ್ಲಿ ಬಿತ್ತಿ ಪತ್ರ ಹಾಕಿದ್ದಾರೆ. ಅಂತವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುವ ಕೆಲಸ ಆಗಬೇಕು. ಕೋಮುವಾದಿಗಳನ್ನು ನಾವು ನೋಡಿ ಆನಂದಿಸಬಾರದು. ಇದರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಖಾದರ್ ಮನವಿ ಮನವಿ ಮಾಡಿದರು.
ಮಾಧುಸ್ವಾಮಿ ಉತ್ತರ
ಯಾವ ಸರ್ಕಾರ ಅಥವಾ ಪ್ರೋತ್ಸಾಹ ಇದೆ ಅಂತ ಭಾವಿಸಬಾರದು. ಆಕಸ್ಮಿಕವಾಗಿ ನಡೆದ ಘಟನೆಗೆ ಎಲ್ಲಾ ಜವಾಬ್ದಾರಿ ಮಾಡಬಾರದು.ಇದು ಕನ್ಪ್ಯೂಸ್ ಅಗಿದೆ. 2012ರಲ್ಲಿ ರೂಲ್ಸ್ ಮಾಡುವಾಗ ಸಂಸ್ಥೆ ಜಮೀನು , ಸಮೀಪದ ಜಮೀನು, ಕಟ್ಟಡ ಅಥವಾ ನಿವೇಶನ ಸೇರಿದಂತೆ ಯಾವುದೇ ಸ್ವತ್ತನ್ನ ಹಿಂದೂಗಳಲ್ಲದವರಿಗೆ ಗುತ್ತಿಗೆ ನೀಡುವಂತಿಲ್ಲ.2002 ಹಿಂದೂ ಧಾರ್ಮಿಕ ಸಂಸ್ಥೆ, ಧರ್ಮದತ್ತಿ ನಿಯಮದಲ್ಲಿ ರೂಲ್ಸ್ ಮಾಡಿದ್ದಾರೆ. ಯಾವುದೇ ಧರ್ಮದವರಿಗೆ ಗುತ್ತಿಗೆ ಕೊಡುವಂತಿಲ್ಲ ಅಂತಿದೆ. ಈ ನಿಯಮ ನೋಡಿ ಬೋರ್ಡ್ ಹಾಕಿದ್ದಾರೆ ಎಂದು ರಘುಪತಿ ಭಟ್ ಹೇಳುತ್ತಿದ್ದಾರೆ. ದೇವಸ್ಥಾನ ಆವರಣದ ಒಳಗಡೆ ಇದ್ದರೆ ನೀವು ತಿದ್ದಿಕೊಳ್ಳಬೇಕಿದೆ, ಹೊರಗೆ ಇದ್ದಾರೆ ನಾವು ಕೇಳಲ್ಲ. ಹಿಂದೆ ಕಾಂಗ್ರೆಸ್ ಸರ್ಕಾರ ಇದ್ದಾಗಲೇ ಮಾಡಿದ್ದು. ಈಗ ನೀವೇ ಪ್ರಶ್ನೆ ಮಾಡುತ್ತಿದ್ದೀರಾ ಸಿದ್ದರಾಮಯ್ಯ ಅವರೇ. ಬೇರೆ ಆವರಣ, ಪ್ರದೇಶದಲ್ಲಿ ಆದರೆ ಸರ್ಕಾರ ಕ್ರಮ ಕೈಗೊಳ್ಳಲಿದೆ.ಬೇರೆ ಧರ್ಮದವರಿಗೆ ಅವಕಾಶ ಇಲ್ಲ ಅಂತಿದೆ, ಖಾದರ್ ಅವರೇ. ರೇಣುಕಾಚಾರ್ಯ ಅವರು ಸುಳ್ಳು ಸರ್ಟಿಫಿಕೇಟ್ ಕೊಟ್ಟಿದ್ದಾರೆ ಅಂತ ಹೇಳಿದ್ದಾರೆ. ಇದು ಕಡತಕ್ಕೆ ಹೋಗಲಿದೆ. ಅವರು ಈ ಸದನದ ಗೌರವ ಸದಸ್ಯರು. ನೀವೇ ವಿತ್ ಡ್ರಾ ಮಾಡಿ ಅಂತ ಯು.ಟಿ ಖಾದರ್‌ಗೆ ಸೂಚನೆ ನೀಡಿದರು.