Advertisement
ವಿನೋದ್ ಕುಮಾರ್ ಸ್ಪರ್ಧೆಗೆ ಹಾಗೂ ಕಂಚಿನ ಜಯಕ್ಕೆ ಇತರ ದೇಶಗಳ ಸ್ಪರ್ಧಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು. ವಿನೋದ್ ಎಫ್52 ವಿಭಾಗದಲ್ಲಿ ಸ್ಪರ್ಧಿಸುವ ಅರ್ಹತೆ ಹೊಂದಿಲ್ಲ ಎಂದು ವಾದಿಸಿದ್ದರು. ಹೀಗಾಗಿ ಫಲಿತಾಂಶವನ್ನು ಸೋಮವಾರ ಪ್ರಕಟಿಸಲು ಸಮಿತಿ ನಿರ್ಧರಿಸಲಾಗಿತ್ತು. ಅದರಂತೆ ವಿನೋದ್ ಕುಮಾರ್ ಸ್ಪರ್ಧೆಯನ್ನು ಅನೂರ್ಜಿತಗೊಳಿಸಿ ಪದಕವನ್ನು ವಾಪಸ್ ಪಡೆಯಲಾಗಿದೆ.
Related Articles
Advertisement
ಎಫ್52 ಎನ್ನುವುದು ದುರ್ಬಲಗೊಂಡ ಸ್ನಾಯು ಶಕ್ತಿ ಹೊಂದಿರುವ ಕ್ರೀಡಾಪಟುಗಳ ವಿಭಾಗವಾಗಿದೆ. ನಿರ್ಬಂಧಿತ ಚಲನೆ, ಅಂಗಗಳ ವೈಫಲ್ಯಅಥವಾ ಕಾಲಿನ ಉದ್ದ ವ್ಯತ್ಯಾಸ, ಬೆನ್ನುಹುರಿ ಗಾಯದಿಂದಾಗಿ ಸದಾಕಾಲ ಕುಳಿತುಕೊಂಡೇ ಇರುವ ವ್ಯಕ್ತಿಗಳು, ಅಂಗಚ್ಛೇದನ ಮತ್ತು ಕ್ರಿಯಾತ್ಮಕ ಅಸ್ವಸ್ಥತೆ ಇರುವರು ಎಫ್52 ವಿಭಾಗದಲ್ಲಿ ಸ್ಪರ್ಧಿಸಬಹುದಾಗಿದೆ. ಆದರೆ ವಿನೋದ್ ಕುಮಾರ್ ಈ ವರ್ಗಕ್ಕೆ ಸೇರುವುದಿಲ್ಲ ಎಂದು ಸಂಘಟಕರು ತೀರ್ಮಾನಿಸಿದ್ದಾರೆ.
ಮಾನದಂಡದಂತೆ ಆ. 22ರಂದು ವಿನೋದ್ ಅವರನ್ನು ಎಫ್52 ವಿಭಾಗಕ್ಕೆ ಸೇರಿಸಲಾಗಿತ್ತು. ಇದೀಗ ಸ್ಪರ್ಧೆಗೆ ಅವಕಾಶ ನೀಡಿದ್ದೇಕೆ, ಪದಕ ಗೆದ್ದೂ ಕಳೆದುಕೊಂಡವರ ಮನಸ್ಥಿತಿ ಹೇಗಿರಬೇಡ, ಪ್ಯಾರಾಲಿಂಪಿಕ್ಸ್‌ನಂಥ ವಿಶ್ವಮಟ್ಟದ ಕ್ರೀಡಾಕೂಟದಲ್ಲಿ ಇದೆಂಥ ಎಡವಟ್ಟು ಎಂಬೆಲ್ಲ ವಿಚಾರವಾಗಿ ಸಂಘಟಕರ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.