Advertisement

“ವಿದ್ಯಾರ್ಥಿಗಳಿಗೆ ಶಿಸ್ತು, ಹೊಂದಾಣಿಕೆ ಕಲಿಸಿ’

05:20 AM Jul 21, 2017 | Harsha Rao |

ದರ್ಬೆ : ವಸತಿ ನಿಲಯಗಳ ದಿನಚರಿ ವಿದ್ಯಾರ್ಥಿಗಳಿಗೆ ಶಿಸ್ತು ಮತ್ತು ಹೊಂದಾಣಿಕೆ ಕಲಿಸುವ ಮೂಲಕ ಮುಂದಿನ ಸ್ವತಂತ್ರ ಬದುಕಿಗೆ ಸಹಕಾರಿ ಯಾಗುತ್ತದೆ ಎಂದು ನ್ಯಾಯವಾದಿ ಸಿಲ್ವಿಯಾ ಡಿ’ಸೋಜಾ ಹೇಳಿದರು.

Advertisement

ಸಂತ ಫಿಲೋಮಿನಾ ಕಾಲೇಜಿನ ಮಹಿಳಾ ವಸತಿ ನಿಲಯದಲ್ಲಿ ಶೈಕ್ಷಣಿಕ ವರ್ಷದಲ್ಲಿ ಹೊಸತಾಗಿ ದಾಖಲಾತಿ ಹೊಂದಿದ ವಿದ್ಯಾರ್ಥಿಗಳನ್ನು ಸ್ವಾಗತಿಸುವ ಫ್ರೆಶರ್ ಡೇ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿದರು.

ವಿವಿಧ ಜಾತಿ, ಮತ, ಪ್ರದೇಶಗಳಿಂದ ಬಂದಿರುವ ವಿದ್ಯಾರ್ಥಿಗಳು ಒಂದೇ ಮನೆಯವರಂತೆ ವಸತಿ ನಿಲಯದಲ್ಲಿ ಅನ್ಯೋನ್ಯತೆಯಿಂದ ಬದುಕುವುದರಿಂದ ವಿದ್ಯಾರ್ಥಿಗಳಿಗೆ ಹೊಸ ಅನುಭವವನ್ನು ನೀಡುತ್ತದೆ. ಹಿರಿಯ ವಿದ್ಯಾರ್ಥಿಗಳು ಹೊಸತಾಗಿ ಸೇರ್ಪಡೆಗೊಂಡಿರುವ ವಿದ್ಯಾರ್ಥಿಗಳನ್ನು ಸಹೋದರತೆಯಿಂದ ಕಾಣುವ ಭಾವನೆಯನ್ನು ಹೊಂದಿರಬೇಕು ಎಂದು ಹೇಳಿದರು.

ಮಾದರಿಯಾಗಬೇಕು
ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ| ಲಿಯೊ ನೊರೊನ್ಹ ಮಾತನಾಡಿ, ವಿದ್ಯಾರ್ಥಿಗಳು ವಸತಿ ನಿಲಯದ ನೀತಿ ನಿಯಮಾವಳಿಗಳನ್ನು ಪಾಲಿಸಿಕೊಂಡು ತಮ್ಮ ಅಧ್ಯಯನದ ಕಡೆಗೆ ಗಮನಹರಿಸ ಬೇಕು. ಸಮಾಜದಲ್ಲಿರುವ ಇತರರಿಗೆ ಮಾದರಿಯಾಗುವ ಉತ್ತಮ ಗುಣ ನಡತೆಗಳನ್ನು ಹೊಂದಬೇಕು ಎಂದು ಅವರು ಹೇಳಿದರು.

ಕಾಲೇಜಿನ ಕ್ಯಾಂಪಸ್‌ ನಿರ್ದೇಶಕ ವಂ| ಡಾ| ಆ್ಯಂಟನಿ ಪ್ರಕಾಶ್‌ ಮೊಂತೆರೊ ಮಾತನಾಡಿ, ಮನೆ ಮತ್ತು ವಸತಿ ನಿಲಯಗಳ ವಾತಾವರಣ ಪರಸ್ಪರ ಭಿನ್ನವಾಗಿರುತ್ತದೆ. ಮನೆಯಲ್ಲಿ ಹೆತ್ತವರು ತಮ್ಮ ಮಕ್ಕಳಿಗೆ ಅಗತ್ಯವಿರುವ ಎಲ್ಲವನ್ನೂ ಪೂರೈಸುತ್ತಾರೆ. ಆದರೆ ವಸತಿನಿಲಯಗಳಲ್ಲಿ ಹೆಚ್ಚಿನ ಎಲ್ಲ  ಕೆಲಸಗಳನ್ನು ವಿದ್ಯಾರ್ಥಿಗಳೇ ಹೊಂದಿಸಿಕೊಳ್ಳಬೇಕಾಗುತ್ತದೆ ಎಂದರು.

Advertisement

ಬಿಚ್ಚು ಮನಸು ಬೇಕು
ಅಧ್ಯಕ್ಷತೆ ವಹಿಸಿದ ಕಾಲೇಜಿನ ಸಂಚಾಲಕ ವಂ| ಆಲ್ಫೆ†ಡ್‌ ಜೆ. ಪಿಂಟೊ ಮಾತನಾಡಿ, ವಸತಿನಿಲಯಗಳಲ್ಲಿ ಪಾಲಕರು ವಿದ್ಯಾರ್ಥಿಗಳ ಹೆತ್ತವರ ಪಾತ್ರವನ್ನು ನಿರ್ವಹಿಸುತ್ತಾರೆ. ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಸಮಸ್ಯೆಗಳು ಎದುರಾದಲ್ಲಿ ಬಿಚ್ಚು ಮನಸ್ಸಿನಿಂದ ಪಾಲಕರ ಗಮನಕ್ಕೆ ತರಬೇಕು. ಸಮಸ್ಯೆಗಳನ್ನು ಸೂಕ್ತ ಸಮಯದಲ್ಲಿ ನಿವಾರಣೆ ಮಾಡಿಕೊಳ್ಳುವು ದರಿಂದ ಜೀವನದಲ್ಲಿ ಯಶಸ್ಸನ್ನು ಗಳಿಸಬಹುದು ಎಂದು ಹೇಳಿದರು.

ವಸತಿ ನಿಲಯದ ವಾರ್ಡನ್‌ ಸಿ. ಫ್ಲೋರ ಮಚಾದೊ ಸ್ವಾಗತಿಸಿ, ಭೂಮಿಕಾ ವಂದಿಸಿದರು. ಯಕ್ಷಿತಾ ಕಾರ್ಯಕ್ರಮ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next