Advertisement
ಪ್ರಸ್ತುತ ಮಂಗಳೂರು ವಿಶ್ವವಿದ್ಯಾ ನಿಲಯ ಕಾಲೇಜಿನಲ್ಲಿ ನೂರಾರು ವರ್ಷಗಳ ಹಳೆಯ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ ಸಂಶೋಧನೆಗೆ ಯೋಗ್ಯ ವಾದ ಪುಸ್ತಕಗಳಿವೆ. ಆದರೆ ಇದು ಈವರೆಗೆ ಸಾರ್ವಜನಿಕರ ಬಳಕೆಗೆ ಲಭಿಸಿಲ್ಲ. ಆ ಕಾರಣಕ್ಕಾಗಿ ಪುಸ್ತಕಗಳ ಅಗತ್ಯ ಇರುವವರಿಗೆ ಇದನ್ನು ತಲುಪಿಸ ಬೇಕು ಎಂಬ ಉದ್ದೇಶದಿಂದ ಮಂಗಳೂರು ವಿಶ್ವವಿದ್ಯಾನಿಲಯವು ಗ್ರಂಥಾಲಯ ವನ್ನು ಡಿಜಿಟಲೀಕರಣ ಮಾಡಲು ಸಿದ್ಧತೆ ನಡೆಸಿದೆ. ವಿವಿ ಕಾಲೇಜಿನ ವೆಬ್‌ಸೈಟ್ ಮೂಲಕ ಪುಸ್ತಕಗಳ ಅಪ್‌ಲೋಡ್ ಮಾಡಲು ಯೋಜನೆ ರೂಪಿಸಲಾಗುತ್ತಿದೆ.
ಸಂಸ್ಕೃತ, ಸಾಹಿತ್ಯ ಇತರ ವಿಚಾರಗಳಿಗೆ ಸಂಬಂಧಿಸಿದಂತೆ ಪಿಎಚ್.ಡಿ., ಸಂಶೋಧನೆ ಮಾಡಲು ಹೊರಟ ಆಸಕ್ತರಿಗೆ ಅನುಕೂಲವಾಗುವಂತಹ ಅನೇಕ ಪುಸ್ತಕಗಳು ವಿವಿ ಕಾಲೇಜಿನ ಗ್ರಂಥಾಲಯದಲ್ಲಿವೆ. ಈವರೆಗೆ ಇಂತಹ ಪುಸ್ತಕಗಳಿಗಾಗಿ ಓದುಗರು ಕಲ್ಕತ್ತಾ, ಮದ್ರಸ್‌ಗಳ ಗ್ರಂಥಾಲಯದಿಂದ ಓದಬೇಕಿತ್ತು.
Related Articles
Advertisement
ಹಳೆ ಪುಸ್ತಕಗಳ ಸಂರಕ್ಷಣೆಗೆ ಡಿಜಿಟಲೀಕರಣವಿವಿ ಕಾಲೇಜು ಗ್ರಂಥಾಲಯದಲ್ಲಿ ನೂರಾರು ವರ್ಷಗಳ ಹಳೆಯ ಸಂಗ್ರಹ ಯೋಗ್ಯ ಪುಸ್ತಕಗಳಿವೆ. ಹಳೆಯ ಪುಸ್ತಕಗಳು ಧೂಳು, ಗೆದ್ದಲುಗಳಿಂದ ಶಿಥಿ ಲಾವಸ್ಥೆಯಲ್ಲಿವೆ. ಇದನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಗ್ರಂಥಾಲಯವನ್ನು ಡಿಜಿಟಲೀಕರಣ ಮಾಡಲು ಚಿಂತಿಸ ಲಾಗಿದೆ. ಎಲ್ಲ ಪುಸ್ತಗಳನ್ನು ಅಪ್‌ಲೋಡ್ ಮಾಡಲು ಸಾಧ್ಯವಿಲ್ಲದಿರುವುದರಿಂದ, ಎಲ್ಲೂ ಸಿಗದ ಹಳೆಯ ಪುಸ್ತಕಗಳನ್ನು ಮಾತ್ರ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಲಾಗುತ್ತದೆ. ಕೋ.ರೂ. ಅಂದಾಜು
ಪುಸ್ತಕಗಳನ್ನು ಡಿಜಿಟಿಲೀಕರಣ ಮಾಡಲು ಮಂಗಳೂರು ವಿವಿ ಕಾಲೇಜು ಆಡಳಿತ ಮಂಡಳಿ ಚಿಂತನೆ ನಡೆಸಿ ಕಾಲೇಜಿನ ಹಳೆ ವಿದ್ಯಾರ್ಥಿ, ಸಂಸದ ವೀರಪ್ಪ ಮೊಲಿ ಅವರೊಂದಿಗೆ ಈ ಬಗ್ಗೆ ಪ್ರಸಾವಿಸಿದಾಗ ಯೋಜನಾ ವರದಿ ತಯಾರಿಸಿ ನೀಡುವಂತೆ ತಿಳಿಸಿದ್ದರು. ಅದರಂತೆ ಕಾಲೇಜು ಸಿಬಂದಿ ಯೋಜನಾ ವರದಿ ಸಿದ್ಧಪಡಿಸುತ್ತಿದ್ದಾರೆ. ಅಪ್‌ಲೋಡ್ ಮಾಡಲಿರುವ ಪುಸ್ತಕ ಗಳನ್ನು ಸ್ಕ್ಯಾನ್ ಮಾಡಲು ಲಕ್ಷಾಂತರ ರೂ. ವೆಚ್ಚದ ಅಟೋ ಮ್ಯಾಟಿಕ್ ಸ್ಕಾನ್‌ಮಿಷನ್, ಆ ಮಿಷನ್‌ಗಾಗಿ ಎಸಿ ರೂಂ ಸೇರಿ ದಂತೆ ಇತರ ಖರ್ಚುಗಳು ಸೇರಿ ಸುಮಾರು ಒಂದು ಕೋಟಿ ರೂ.ಗಳ ವರೆಗೆ ಅನುದಾನ ಬೇಕಾಗುತ್ತದೆ. ಅದಕ್ಕೆ ಪೂರಕವಾಗಿ ವರದಿ ಗಳನ್ನು ಸಿದ್ಧಪಡಿಸಲಾಗುತ್ತದೆ ಎಂದು ವಿವಿ ಕಾಲೇಜಿನ ಗ್ರಂಥ ಪಾಲಕಿ ವನಜಾ ಹೇಳುತ್ತಾರೆ. ಯೋಜನಾ ವರದಿಗೆ ಸಿದ್ಧತೆ
ವಿವಿ ಕಾಲೇಜಿನ ಗ್ರಂಥಾಲಯದಲ್ಲಿ ಹಳೆಯ ಹಲವು ಉಪಯುಕ್ತ ಪುಸ್ತಕಗಳಿವೆ. ಅದು ಶಿಥಿಲಾವಸ್ಥೆಯಲ್ಲಿದೆ. ಅದನ್ನು ಸಂರಕ್ಷಿಸಲು ಹಾಗೂ ದೂರದ ಜನರಿಗೆ ಓದಲು ಅವಕಾಶ ಕಲ್ಪಿಸಲು ಗ್ರಂಥಾಲಯವನ್ನು ಡಿಜಿಟಲೀಕರಣ ಮಾಡಲಾಗುತ್ತದೆ. ಅದಕ್ಕೆ ಯೋಜನಾ ವರದಿ ಸಿದ್ಧಪಡಿಸಲಾಗುತ್ತಿದೆ.
– ಡಾ| ಉದಯ್ ಕುಮಾರ್ ಇರ್ವತ್ತೂರು
ಪ್ರಾಂಶುಪಾಲರು, ಮಂಗಳೂರು ವಿವಿ ಕಾಲೇಜು •ಪ್ರಜ್ಞಾ ಶೆಟ್ಟಿ