Advertisement

ಕೋವಿಡ್‌ಗೆ ಡಿಜಿಟಲ್‌ ಸೂತ್ರ; ರಕ್ಷಾ ಯೋಜನೆ ಚಾಲನೆ

09:05 AM Aug 01, 2020 | Suhan S |

ಬೆಂಗಳೂರು: ಕೋವಿಡ್‌-19 ನಿರ್ವಹಣೆ ಮತ್ತು ಡಿಜಿಟಲ್‌ ತಂತ್ರಜ್ಞಾನದ ಮೂಲಕ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಆರಂಭಿಸಲಾಗಿರುವ “ಕೋವಿಡ್‌ ರಕ್ಷಾ’ ವಿನೂತನ ಕಾರ್ಯ ಯೋಜನೆಗೆ ಉಸ್ತುವಾರಿ ಸಚಿವ ಆರ್‌.ಅಶೋಕ್‌, ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿಸೂರ್ಯ ಚಾಲನೆ ನೀಡಿದರು.

Advertisement

“ಕೋವಿಡ್‌ಗೆ ಸಂಬಂಧಿಸಿದಂತೆ ಆಸ್ಪತ್ರೆ, ರೋಗಿಗಳು ಮತ್ತು ವೈದ್ಯಕೀಯ ಸೌಲಭ್ಯಗಳಿಗೆ ಸಂಬಂಧಿಸಿದ ಎಲ್ಲಾ ಮಾಹಿತಿ ಒಂದೇ ವೇದಿಕೆಯಡಿ ಕಲ್ಪಿಸಿ, ರೋಗಿಗಳು ಕೋವಿಡ್‌ ಸಂಬಂಧಿಸಿದ ಸಮಾಲೋಚನೆಗೆ ನುರಿತ ವೈದ್ಯರೊಂದಿಗೆ ನೇರ ಸಂಪರ್ಕ ಕಲ್ಪಿಸಿದರೆ ಅತ್ಯಂತ ಸಹಕಾರಿ. ಡಿಜಿಟಲ್‌ ತಂತ್ರಜ್ಞಾನದ ಸಹಾಯದೊಂದಿಗೆ ಮನೆಯಲ್ಲೇ ಕುಳಿತು ರೋಗಿಗಳು ನೇರವಾಗಿ ವೈದ್ಯರೊಂದಿಗೆ ಸಮಾಲೋಚನೆ ನಡೆಸಿ ತಮ್ಮ ಸಂದೇಹ ಪರಿಹರಿಸಿಕೊಳ್ಳುವುದರೊಂದಿಗೆ, ಅಗತ್ಯವಿದ್ದಲ್ಲಿ ಡಯಾಗ್ನೋಸ್ಟಿಕ್‌ ಟೆಸ್ಟ್‌ಗಳ ಸೇವೆ ಮತ್ತು ಔಷಧಿ ಸಾಮಗ್ರಿಗಳನ್ನು ನೇರವಾಗಿ ಮನೆಗೆ ಪಡೆಯಬಹುದು ಎಂದು ಕೋವಿಡ್‌ ರಕ್ಷಾ ಕಾರ್ಯ ಯೋಜನೆ ಕುರಿತು ಸಂಸದ ತೇಜಸ್ವಿ ಸೂರ್ಯ ವಿವರಿಸಿದರು. ಮನೆಯಲ್ಲಿಯೇ ಟೆಸ್ಟ್‌ ಮಾಡಿಸಿಕೊಳ್ಳಲು, ಹೋಂ ಕ್ವಾರಂಟೈನ್‌ ಆಗಲು, ಸಮೀಪದ ಫೀವರ್‌ ಕ್ಲಿನಿಕ್‌, ಪ್ರತಿ ವಾರ್ಡ್‌ ಗೆ ಸಂಬಂಧಿಸಿದ ಅಧಿಕಾರಿಗಳು, ಸ್ವಯಂ ಸೇವಕರ ಮಾಹಿತಿಯನ್ನೂ “ಕೋವಿಡ್‌ ರಕ್ಷಾ’ ಮೂಲಕ ಪಡೆಯುವ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ತಿಳಿಸಿದರು.

ಕೋವಿಡ್‌ ರಕ್ಷಾ: ಕೋವಿಡ್‌-19 ಸಂಬಂಧಿತ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು “ಕೋವಿಡ್‌ ರಕ್ಷಾ’ ವಿನೂತನ ಯೋಜನೆ ಡಿಜಿಟಲ್‌ ವೇದಿಕೆಯಾಗಿದೆ. ಈ ಕಾರ್ಯ ಯೋಜನೆ ಅನುಸಾರ ಬೆಂಗಳೂರು ದಕ್ಷಿಣ ಸಂಸದರ ಕಚೇರಿ ಸಹಾಯವಾಣಿ 080 61914960 ಸಂಖ್ಯೆಗೆ ಚಾಲನೆ ನೀಡಲಿದ್ದು, ಫೋನ್‌ ಅಥವಾ ವಾಟ್ಸಪ್‌ ಮೂಲಕ ಕೋವಿಡ್‌-19 ಗುಣ ಲಕ್ಷಣಗಳಿಗೆ ಸಂಬಂಧಿಸಿದಂತೆ ತಜ್ಞ ವೈದ್ಯರು ಟೆಲಿ/ವಿಡಿಯೋ ಸಮಾಲೋಚನೆ ಮೂಲಕ ಪರಿಹಾರ ಒದಗಿಸಲಿದ್ದಾರೆ. “ಇ-ಡಾಕ್ಟರ್‌’ಗಳು ಕೋವಿಡ್‌-19ಗೆ ಸಂಬಂಧಿಸಿದ ಎಲ್ಲಾ ಪ್ರಶ್ನೆಗಳಿಗೂ ಉತ್ತರ ನೀಡಲಿದ್ದು, ಟೆಸ್ಟ್‌ ಮಾಡಿಸಿಕೊಳ್ಳುವ, ಹೋಂ ಕ್ವಾರಂಟೈನ್‌ ಕುರಿತು ಅಥವಾ ಆಸ್ಪತ್ರೆಗಳ ಮಾಹಿತಿ ಒದಗಿಸಲಿದ್ದು, ರೋಗಿಗಳಿಗೆ ಮನೆಯಲ್ಲಿಯೇ ಚಿಕಿತ್ಸೆ ಪಡೆದುಕೊಳ್ಳುವ ನಿಟ್ಟಿನಲ್ಲಿ ಆಕ್ಸಿಜನ್‌ ಕಾನ್ಸನೆóàಟರ್ಸ್‌ ಸೌಲಭ್ಯ ಒದಗಿಸುವಲ್ಲಿಯೂ ಸಹಾಯ ನೀಡಲಿದೆ. “ಕೋವಿಡ್‌ ರಕ್ಷಾ’ ವೇದಿಕೆಯಲ್ಲಿ ಸುಮಾರು

3,200 ಡಾಕ್ಟರ್‌ ಗಳು ಕೋವಿಡ್‌ ರೋಗಿಗಳೊಂದಿಗೆ ನೇರ ಸಮಾಲೋಚನೆ ನಡೆಸಲಿದ್ದು, 350 ಡಾಕ್ಟರ್‌ ಕನ್ನಡದಲ್ಲಿಯೂ ಸಂಭಾಷಣೆ ನಡೆಸಲಿದ್ದಾರೆ. ಬೆಂಗಳೂರು ದಕ್ಷಿಣ ವ್ಯಾಪ್ತಿಯಲ್ಲಿ 200 ಆಕ್ಸಿಜನ್‌ ಕಾನ್ಸನೆಟರ್ಸ್‌, 200 ಆಕ್ಸಿಜನ್‌ ಸಿಲಿಂಡರ್‌ ವ್ಯವಸ್ಥೆ ಮಾಡಲಾಗಿದೆ. ಕೋವಿಡ್  ವೈರಸ್‌ ಟಾಸ್ಕ್ ಫೂರ್ಸ್ ನ 300ಕ್ಕೂ ಅಧಿಕ ಕಾರ್ಯಕರ್ತರು ಕರೆ ನಿರ್ವಹಣೆಯಲ್ಲಿ ಸಹಕರಿಸಲಿದ್ದು 300 ಸ್ವಯಂಸೇವಕರು ಕಾರ್ಯನಿರ್ವಹಿಸಲಿದ್ದಾರೆ. ದೇಶದಲ್ಲಿಯೇ ಪ್ರಥಮ ಬಾರಿಗೆ ಇಂತಹ ಪ್ರಯತ್ನ ನಡೆಯುತ್ತಿದ್ದು, ಸಾರ್ವಜನಿಕರು ಸದ್ಬಳಕೆ ಮಾಡಿಕೊಳ್ಳಲು ವಿನಂತಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next