ನವದೆಹಲಿ/ಮುಂಬೈ: ಆರ್‌ಬಿಐ ಜಾರಿಗೊಳಿಸಲು ಉದ್ದೇಶಿಸಿರುವ ಡಿಜಿಟಲ್ ಕರೆನ್ಸಿಯನ್ನು ರಾಷ್ಟ್ರೀಯ ಪಾವತಿ ನಿಗಮ ನಿಯಮಿತ (ಎನ್‌ಪಿಸಿಐ) ಮೂಲಕ ಚಲಾವಣೆಗೆ ತರಲು ಉದ್ದೇಶಿಸಲಾಗಿದೆ.
ಸದ್ಯ ಇರುವ ಯುನಿಫೈಡ್ ಪೇಮಂಟ್ ಇಂಟರ್‌ಫೇಸ್ (ಯುಪಿಐ) ಮಾದರಿಯಲ್ಲಿಯೇ ಅಂದರೆ ಸದ್ಯ ಇರುವ ಡಿಜಿಟಲ್ ಪಾವತಿ ವ್ಯವಸ್ಥೆಯಲ್ಲಿಯೇ ಅದನ್ನು ಜಾರಿಗೊಳಿಸಲಾಗುತ್ತದೆ.
ಕೇಂದ್ರ ಬ್ಯಾಂಕ್ ಪ್ರಾಯೋಜಿತ ಡಿಜಿಟಲ್ ಕರೆನ್ಸಿ (ಸಿಬಿಡಿಸಿ)ಯನ್ನು ಪ್ರಾಯೋಗಿಕವಾಗಿ ಜಾರಿಗೆ ತರುವ ನಿಟ್ಟಿನಲ್ಲಿ ಎಸ್‌ಬಿಐ, ಬ್ಯಾಂಕ್ ಆಫ್ ಬರೋಡಾ, ಐಸಿಐಸಿಐ ಬ್ಯಾಂಕ್, ಎಚ್‌ಡಿಎಪ್‌ಸಿ ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಕೊಟಕ್ ಮಹೀಂದ್ರಾ ಬ್ಯಾಂಕ್, ಯೆಸ್ ಬ್ಯಾಂಕ್, ಐಡಿಎಫ್ಸಿ ಫಸ್ಟ್ ಬ್ಯಾಂಕ್ ಜೋಡಿಸಲಿವೆ.
ದೇಶದ ಆಯ್ದ ನಗರಗಳಲ್ಲಿ ಹೊಸ ಯೋಜನೆ ಪ್ರಾಯೋಗಿಕವಾಗಿ ಜಾರಿಯಾಗಲಿದೆ. 10 ಸಾವಿರದಿಂದ 50 ಸಾವಿರ ಮಂದಿಯನ್ನು ಅದರ ಬಳಕೆಗೆ ಆಯ್ಕೆ ಮಾಡಲಾಗುತ್ತದೆ. ಅದು ಯಶಸ್ವಿಯಾದ ಬಳಿಕ ಇತರ ಬ್ಯಾಂಕ್‌ಗಳನ್ನು ಸೇರ್ಪಡೆ ಮಾಡಲಾಗುತ್ತದೆ ಎಂದು ಮೂಲಗಳನ್ನು ಉಲ್ಲೇಖಿಸಿ “ದ ಇಕನಾಮಿಕ್ ಟೈಮ್ಸ್’ ವರದಿ ಮಾಡಿದೆ.