Advertisement
ಬ್ರಿಕ್ಸ್ ರಾಷ್ಟ್ರಗಳ ನಡುವಿನ ವಹಿವಾಟಿಗಾಗಿ “ಬ್ರಿಕ್ಸ್ ಕರೆನ್ಸಿ’ ರೂಪಿಸುವ ಬಗ್ಗೆ ಅಕ್ಟೋಬರ್‌ನಲ್ಲಿ ನಡೆದ ಶೃಂಗದಲ್ಲಿ ಸದಸ್ಯ ರಾಷ್ಟ್ರಗಳು ಚರ್ಚಿಸಿದ್ದವು. ಅದನ್ನು ಕಾರ್ಯಗತಗೊಳಿಸಲು ಚೀನಾ ಮತ್ತು ಬ್ರೆಜಿಲ್ ಉತ್ಸಾಹ ತೋರಿರುವಂತೆಯೇ ಟ್ರಂಪ್ ಈ ಎಚ್ಚರಿಕೆ ನೀಡಿ ರುವುದು ಮಹತ್ವ ಪಡೆದಿದೆ.
Related Articles
ಬ್ರಿಕ್ಸ್ ಕರೆನ್ಸಿ ಪ್ರಸ್ತಾಪದಲ್ಲಿ ಭಾರತ ನಿರ್ಲಿಪ್ತ ನೀತಿ ಅನುಸರಿಸಿದ್ದು, ಈವರೆಗೆ ಯಾವುದೇ ಸಮ್ಮತಿಯನ್ನೂ ನೀಡಿಲ್ಲ. ಆದಾಗ್ಯೂ, ಟ್ರಂಪ್ ಬ್ರಿಕ್ಸ್‌ನ ಎಲ್ಲಾ ರಾಷ್ಟ್ರಗಳಿಗೂ ಶೇ.100ರ ಸುಂಕ ವಿಧಿಸಿದರೆ ಭಾರತದ ಫಾರ್ಮಾಸುಟಿಕಲ್, ಐಟಿ ಸೇವೆ ಹಾಗೂ ಜವಳಿ ಕ್ಷೇತ್ರ ಸೇರಿದಂತೆ ಹಲವು ಕ್ಷೇತ್ರಗಳ ರಫ್ತುದಾರರು ತೊಂದರೆ ಎದುರಿಸಬೇಕಾಗುತ್ತದೆ.
Advertisement
ಭಾರತದ ವಿವಿಧ ಕ್ಷೇತ್ರಗಳ ಅಪಾರ ಪ್ರಮಾಣದ ವಸ್ತು ಅಮೆರಿಕಕ್ಕೆ ರಫ್ತಾಗುತ್ತಿದ್ದು, ಅಮೆರಿಕವು ಭಾರತದ ಪ್ರಮುಖ ವ್ಯಾಪಾರ ಪಾಲುದಾರನಾಗಿದೆ. ಈ ನೀತಿ ಜಾರಿಯಾದರೆ ಭಾರತದ ರಫ್ತುದಾರರಿಗೆ ವೆಚ್ಚ ಹೆಚ್ಚಾಗುವುದರ ಜತೆಗೆ ಅಮೆರಿಕ ಮಾರುಕಟ್ಟೆಯಲ್ಲಿ ಭಾರ ತದ ಉತ್ಪ ನ್ನ ಗಳು ಸ್ಪರ್ಧೆಯಿಂದ ಹಿಂದುಳಿಯಬೇಕಾಗಬಹುದು.