Advertisement

ಮಂಗಳೂರು ಏರ್‌ಪೋರ್ಟ್‌: 2.60 ಕೋ.ರೂ. ಮೌಲ್ಯದ ವಜ್ರ ವಶ

12:53 AM Feb 13, 2023 | Team Udayavani |

ಮಂಗಳೂರು: ಭಾರತ ದಿಂದ ದುಬಾೖಗೆ ಅಕ್ರಮವಾಗಿ ವಿಮಾನದಲ್ಲಿ 2.60 ಕೋಟಿ ರೂ. ಮೌಲ್ಯದ ವಜ್ರ ಸಾಗಿಸುತ್ತಿದ್ದ ಇಬ್ಬರನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಭಾರತೀಯ ಕಂದಾಯ ಗುಪ್ತಚರ ನಿರ್ದೇಶನಾಲಯ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

Advertisement

ದುಬಾೖಗೆ ತೆರಳುತ್ತಿದ್ದ ಭಟ್ಕಳದ ಅನಾಸ್‌ ಮತ್ತು ಅಮ್ಮರ್‌ ತಮ್ಮ ಶೂ ಮತ್ತು ಬ್ಯಾಗ್‌ ಅಡಿಯಲ್ಲಿ ಅನುಮಾನ ಬಾರದಂತೆ ವಜ್ರವನ್ನು ಅಡಗಿಸಿಟ್ಟು ಸಾಗಾಟ ಮಾಡುತ್ತಿದ್ದರು.

ಮುಂಬಯಿಯಿಂದ ತಂದಿದ್ದರು
ಮಂಗಳೂರು ವಿಮಾನ ನಿಲ್ದಾಣದ ಇಮಿಗ್ರೇಶನ್‌ ವಿಭಾಗದಲ್ಲಿ ತಪಾಸಣೆ ವೇಳೆ ಇದು ಪತ್ತೆಯಾಗಿದ್ದು, ಇಬ್ಬರನ್ನೂ ವಶಕ್ಕೆ ಪಡೆಯಲಾಗಿದೆ. ಈ ವಜ್ರವನ್ನು ಅವರು ಮುಂಬಯಿಯಿಂದ ತಂದಿ ದ್ದರು ಎನ್ನಲಾಗಿದೆ.

ಕುಡಿದ ಮತ್ತಿನಲ್ಲಿ ಹೊಡೆದಾಟ: ಓರ್ವ ಸಾವು
ಸುರತ್ಕಲ್‌: ಸುರತ್ಕಲ್‌ ಪೊಲೀಸ್‌ ಠಾಣಾ ವ್ಯಾಪ್ತಿಯ ಕುಳಾಯಿಯ ಮಾರ್ಬಲ್‌ ಅಂಗಡಿ ಯಲ್ಲಿ ಕಾರ್ಮಿಕರಿಬ್ಬರು ಹೊಡೆದಾಟ ನಡೆಸಿದ್ದು, ಗಂಭೀರ ಗಾಯಗೊಂಡ ಯುವಕನೊಬ್ಬ ಮೃತಪಟ್ಟಿದ್ದಾನೆ.

ಬಿಹಾರ ಮೂಲಕ ಯುವಕರು ಶನಿವಾರ ರಾತ್ರಿ ಕುಡಿದ ಮತ್ತಿನಲ್ಲಿ ಮಾತಿನ ಚಕಮಕಿ ನಡೆಸಿ, ಬಳಿಕ ಹೊಡೆದಾಟ ನಡೆಸಿದ್ದರು. ಈ ಪೈಕಿ ಗಂಭೀರ ಗಾಯಗೊಂಡಿದ್ದ ಛೋಟು (21) ಎಂಬಾತನನ್ನು ಮುಕ್ಕದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿ ಯಾಗದೆ, ರವಿವಾರ ಮೃತ ಪಟ್ಟಿದ್ದಾನೆ. ಪಣಂಬೂರು ಎಸಿಪಿ, ಸುರತ್ಕಲ್‌ ಇನ್‌ಸ್ಪೆಕ್ಟರ್‌ ಸಹಿತ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಸುರತ್ಕಲ್‌ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next