Advertisement

ಧೋನಿ ಹುಟ್ಟುಹಬ್ಬಕ್ಕೆ ಸುದೀಪ್‌ ಸಿಡಿಪಿ

10:33 PM Jul 02, 2021 | Team Udayavani |

ಬೆಂಗಳೂರು : ಜುಲೈ 7 ಟೀಮ್‌ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ ಅವರ ಜನ್ಮದಿನ. 40ನೇ ವರ್ಷದ ಸಂಭ್ರಮ. ಈ ಸಂತಸದ ಗಳಿಗೆಗಾಗಿ ಸ್ಯಾಂಡಲ್‌ವುಡ್‌ ನಟ ಸುದೀಪ್‌ ಶುಕ್ರವಾರ ಧೋನಿ ಅವರ “ಕಾಮನ್‌ ಡಿಸ್‌ಪ್ಲೇ ಪಿಕ್ಚರ್‌’ (ಸಿಡಿಪಿ) ಒಂದನ್ನು ಅನಾವರಣಗೊಳಿಸಿದ್ದಾರೆ.

Advertisement

ಈ ಪೋಸ್ಟರ್‌ನಲ್ಲಿ ಧೋನಿ ಚೆನ್ನೈಸೂಪರ್‌ ಕಿಂಗ್ಸ್‌ ಮತ್ತು ಹಾಗೂ ಭಾರತ ತಂಡದ ಜೆರ್ಸಿಯನ್ನು ಒಟ್ಟಿಗೇ ತೊಟ್ಟಂತೆ ಕಾಣು ತ್ತಿದ್ದಾರೆ. ಹಿಂಭಾಗದಲ್ಲಿ ನಾನಾ ರೀತಿಯ ಧೋನಿಯ ಆಕರ್ಷಣೀಯ ಚಿತ್ರಗಳಿವೆ.

“ಅವರು ಎಲ್ಲರ ನಾಯಕ, ಅವರು ಎಲ್ಲರ ಮೆಚ್ಚಿನವರು, ಅವರು ಎಲ್ಲರ ಸ್ಟಾರ್‌ ಮತ್ತು ಅವರು ಎಲ್ಲರ ಸ್ಫೂರ್ತಿ. ಅವರ ಸಿಡಿಪಿಯನ್ನು ಬಿಡುಗಡೆ ಮಾಡುತ್ತಿರುವುದಕ್ಕೆ ನನಗೆ ಸಂತಸ ಮತ್ತು ಹೆಮ್ಮೆಯಾಗುತ್ತಿದೆ. ನಟನಾಗಿ ಅಲ್ಲದೆ, ಓರ್ವ ಅಭಿಮಾನಿಯಾಗಿ ನಿಮಗೆ ನನ್ನ ಶುಭಾಶಯಗಳು. ಹ್ಯಾಪಿ ರಿಟರ್ನ್ಸ್ ಸರ್‌’ ಎಂದು ಸುದೀಪ್‌ ಟ್ವೀಟ್‌ ಮಾಡಿದ್ದಾರೆ.

ಇದನ್ನೂ ಓದಿ : ಕಾಶ್ಮೀರದಲ್ಲಿ ಉಗ್ರರ ವಿರುದ್ಧ ಕಾರ್ಯಾಚರಣೆ ವೇಳೆ ವಿಜಯಪುರದ ಯೋಧ ಹುತಾತ್ಮ

Advertisement

Udayavani is now on Telegram. Click here to join our channel and stay updated with the latest news.

Next