Advertisement
ಕೃಷಿ, ಧ.ಗ್ರಾ. ಯೋಜನೆ, ಸ್ವ ಉದ್ಯೋಗ, ಸಾಮೂಹಿಕ ವಿವಾಹ, ದೇಗುಲ ಜೀರ್ಣೋದ್ಧಾರ ಮತ್ತು ಸಂರಕ್ಷಣೆ ಯಂಥ ಶ್ರೀ ಕ್ಷೇತ್ರದ ಕಾರ್ಯ ಚಟುವಟಿಕೆಗಳು ಸರಕಾರಕ್ಕೂ ಮಾದರಿ ಎಂದವರು ಅಭಿಪ್ರಾಯಪಟ್ಟರು. ಅಧ್ಯಕ್ಷತೆ ವಹಿಸಿದ್ದ ಹಂಪಿ ಕನ್ನಡ ವಿವಿಯ ನಿವೃತ್ತ ಉಪಕುಲಪತಿ ಡಾ| ಬಿ.ಎ. ವಿವೇಕ ರೈ ಮಾತನಾಡಿ, ಸಾಹಿತ್ಯವು ನಿಷೇಧಾತ್ಮಕವಾದ ನಿಲುವುಗಳಿಂದ ಹೊರ ಬಂದು ಸಾಮರಸ್ಯದ ಆಲೋಚನ ಕ್ರಮ ವನ್ನು ಅಳವಡಿಸಿಕೊಳ್ಳಬೇಕು ಎಂದರು.
ಮಂಗಳವಾರ ರಾತ್ರಿ ಸಾವಿರಾರು ಕಲಾವಿದರು ಪ್ರತಿಫಲಾಪೇಕ್ಷೆ ಇಲ್ಲದೆ ಶ್ರೀ ಸ್ವಾಮಿಗೆ ಕಲಾಸೇವೆ ಅರ್ಪಿಸಿದ್ದಾರೆ ಎಂದು ಡಾ| ಹೆಗ್ಗಡೆ ಮಾಹಿತಿ ನೀಡಿದರು.
Related Articles
ರಾತ್ರಿ ನಡೆದ ಶ್ರೀ ಮಂಜುನಾಥ ಸ್ವಾಮಿಯ ಲಕ್ಷ ದೀಪೋತ್ಸವವನ್ನು (ಗೌರಿಮಾರುಕಟ್ಟೆ ಉತ್ಸವ) ನಾಡಿನೆಲ್ಲೆಡೆಯಿಂದ ಬಂದ ಲಕ್ಷಾಂತರ ಮಂದಿ ಭಕ್ತರು ವೀಕ್ಷಿಸಿದರು.
Advertisement
“ನಡೆನುಡಿಗಳಲ್ಲಿ ನೈತಿಕತೆ ಜಾಗೃತಗೊಳ್ಳಲಿ’ಸ್ವಾಗತ ಭಾಷಣದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ, ಸಾಹಿತ್ಯವು ನೈತಿಕ ಮೌಲ್ಯಗಳನ್ನು ಪ್ರತಿಪಾದಿಸುವ ಗಟ್ಟಿ ನಿಲುವು ತಾಳಬೇಕಾಗಿದೆ. ಸೈದ್ಧಾಂತಿಕ ಪ್ರತಿಷ್ಠೆಯಿಂದ ಛಿದ್ರಗೊಳ್ಳುತ್ತಿರುವ ಸಮಾಜವನ್ನು ಒಗ್ಗೂಡಿಸುವ ಚಿಂತನೆಯನ್ನು ಸಾಹಿತ್ಯ ಮಾಡಬೇಕಾಗುತ್ತದೆ ಎಂದರು. ಇಂದಿನ ತಲೆಮಾರಿನ ಸಾಹಿತ್ಯ ರಚನೆಯಲ್ಲಿ ಇಂತಹ ಪ್ರಯತ್ನವನ್ನು ಹೆಚ್ಚಾಗಿ ಕಾಣುತ್ತಿದ್ದೇವೆ ಎಂದರು. ಸಾಹಿತ್ಯಕ್ಕೆ ನೈತಿಕತೆಯ ಸ್ಪರ್ಶ ಅಗತ್ಯವಾಗಿದೆ. ಬರಹ ಮತ್ತು ಬರಹಗಾರ ನೈತಿಕ ಶುದ್ಧಿಯನ್ನು ಹೊಂದಿರಬೇಕು. ಆಗ ಸಮಾಜವನ್ನು ಸಾಂಸ್ಕೃತಿಕವಾಗಿ ವಿಕಾಸಗೊಳಿಸಲು ಸಾಧ್ಯ. ಒಳ್ಳೆಯ ಸಾಹಿತ್ಯವನ್ನು ಓದುವವರು ನಮ್ಮ ನಡುವೆ ಸದಾ ಇರುತ್ತಾರೆ ಎಂದು ಡಾ| ಹೆಗ್ಗಡೆ ಹೇಳಿದರು. ಇಂದು ಸಮವಸರಣ ಪೂಜೆ
ಬುಧವಾರ ರಾತ್ರಿ ಮಹೋತ್ಸವ ಸಭಾಭವನದಲ್ಲಿ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿಯ ಸಮವಸರಣ ಪೂಜೆಯೊಂದಿಗೆ ಲಕ್ಷದೀಪೋತ್ಸವ ಸಮಾಪನಗೊಳ್ಳಲಿವೆ. ತೀರ್ಥಂಕರರು ತಮ್ಮ ದಿವ್ಯಧ್ವನಿಯ ಮೂಲಕ ಧರ್ಮೋಪದೇಶ ನೀಡುವ ಧರ್ಮಸಭೆಗೆ ಸಮವಸರಣ ಎನ್ನುತ್ತಾರೆ. ಇಲ್ಲಿ ಸಕಲ ಜೀವಿಗಳಿಗೂ ಧರ್ಮೋಪದೇಶ ಕೇಳುವ ಮುಕ್ತ ಅವಕಾಶವಿದೆ. ಬೀಡಿನ ಚಾವಡಿಯಿಂದ ಮಹೋತ್ಸವ ಸಭಾಭವನಕ್ಕೆ ಭವ್ಯ ಮೆರವಣಿಗೆಯ ಬಳಿಕ ಸಮವಸರಣ ಪೂಜಾ ಮಂತ್ರ ಪಠಣ ನಡೆಯುತ್ತದೆ. ಬಳಿಕ ಶ್ರಾವಕ-ಶ್ರಾವಿಕೆಯರಿಂದ ಅಷ್ಟ ವಿಧಾರ್ಚನೆ ಮತ್ತು ಅಥಣಿ ಸ್ವ-ಸಹಾಯ ಸಂಘದ ಮಹಿಳೆಯರಿಂದ ಸಮೂಹ ನೃತ್ಯ ಕಾರ್ಯಕ್ರಮವಿದೆ. ಹಿರಿಯ ಪಾಕ ಪರಿಣತರಾದ ರತ್ನರಾಜ ಕನ್ನಡಿಕಟ್ಟೆ ಮತ್ತು ಜಯಕೀರ್ತಿ ಇರ್ವತ್ತೂರು ಅವರನ್ನು ಸಮ್ಮಾನಿಸಲಾಗುವುದು.