Advertisement
ಸುದ್ದಿಗಾರರ ಜತೆ ಮಾತನಾಡಿ, ಸಚಿನ್ ಆತ್ಮಹತ್ಯೆ ಮಾಡಿಕೊಂಡು ಐದು ದಿನ ಕಳೆದಿವೆ. ಆದರೆ, ಪ್ರಕರಣದ ತನಿಖೆ ಸರಿಯಾಗಿ ನಡೆಯುತ್ತಿಲ್ಲ. ರಾಜ್ಯ ಸರಕಾರದಿಂದ ನ್ಯಾಯ ಸಿಗುವ ಭರವಸೆ ನಮಗೆ ಇಲ್ಲ. ಹೀಗಾಗಿ ಸಿಬಿಐ ತನಿಖೆಗೆ ವಹಿಸಿದರೆ ಮಾತ್ರ ಸತ್ಯಾಂಶ ಹೊರಬರಲಿದೆ. ಆತ್ಮಹತ್ಯೆಗೂ ಮುನ್ನ ಡೆತ್‌ನೋಟ್ ಬರೆದು ಸಾಮಾಜಿಕ ಜಾಲತಾಣದಲ್ಲಿ ಸಚಿನ್ ಹಾಕಿದ್ದನ್ನು ಗಮನಿಸಿ ನಾವು ಠಾಣೆಗೆ ದೂರು ನೀಡಿದರೂ ಸ್ವೀಕರಿಸಲಿಲ್ಲ. ನಮ್ಮ ದೂರಿಗೆ ಸ್ಪಂದಿಸಿದ್ದರೆ ಇಂದು ನಮ್ಮ ಸಹೋದರನ ಸಾವು ಆಗುತ್ತಿರಲಿಲ್ಲ. ಪೊಲೀಸರ ಮೇಲೆ ನಂಬಿಕೆ ಉಳಿದಿಲ್ಲ ಎಂದರು.
ಯುವ ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣವನ್ನು ರೈಲ್ವೇ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದು ಎಲ್ಲ ಆಯಾಮಗಳಿಂದ ತನಿಖೆ ನಡೆಸುತ್ತಿದ್ದಾರೆ. ರೈಲ್ವೇ ಪೊಲೀಸ್ ಇಲಾಖೆಯ ಎಸ್‌ಪಿ ಸೌಮ್ಯಲತಾ ಖುದ್ದು 2 ದಿನಗಳಿಂದ ಬೀದರ್‌ನಲ್ಲಿ ಮೊಕ್ಕಾಂ ಹೂಡಿದ್ದಾರೆ. 3 ತಂಡಗಳಿಂದ ತನಿಖೆ ನಡೆಸಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಎಸ್‌ಪಿ ಸೌಮ್ಯಲತಾ ಸಚಿನ್ ಸ್ವಗ್ರಾಮ ಕಟ್ಟಿತುಗಾಂವ್‌ಗೆ ಭೇಟಿ ನೀಡಿ ಅವರ ಸಹೋದರಿಯರು ಮತ್ತು ಸಚಿನ್ ಆಪ್ತರಿಂದ ಪ್ರಕರಣದ ಮಾಹಿತಿ ಕಲೆಹಾಕಿದ್ದಾರೆ. ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿರುವ ಟೆಂಡರ್ ವಂಚಕರನ್ನು ಕಲಬುರಗಿಯಲ್ಲಿ ವಿಚಾರಣೆ ನಡೆಸುವ ಸಾಧ್ಯತೆ ಇದೆ.