– ಪ್ರತಿ ಕುಟುಂಬದ ಆರ್ಥಿಕ, ಸೌಕರ್ಯದ ಅಭಿವೃದ್ಧಿಗೆ ಒತ್ತು
– ಕೃಷಿಯೇತರ ಚಟುವಟಿಕೆ, ಇತರೆ ಕಾರ್ಯಕ್ರಮ ಸಂಘಟನೆ
Advertisement
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಯಶಸ್ವಿಯಾಗಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ)ಇದೀಗ ಧಾರವಾಡ ಜಿಲ್ಲೆಯಲ್ಲಿ ವಿಸ್ತರಣೆ ಆಗಿ 14ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ.
Related Articles
Advertisement
ಯೋಜನೆಯ ಮಾನ್ಯ ಮುಖ್ಯ ಕಾರ್ಯ ನಿರ್ವಹಣಾಧಿ ಕಾರಿ ಡಾ|ಎಲ್.ಹೆಚ್. ಮಂಜುನಾಥರವರ ಮಾರ್ಗದರ್ಶನ, ಮಾನ್ಯ ಮುಖ್ಯ ನಿರ್ವಹಣಾಧಿ ಕಾರಿ ಅನಿಲಕುಮಾರ ಅವರ ಸೂಕ್ತ ಸಲಹೆ, ಧಾರವಾಡ ಪ್ರಾದೇಶಿಕ ವ್ಯಾಪ್ತಿಯ ಪ್ರಾದೇಶಿಕ ನಿರ್ದೇಶಕರಾದ ದುಗ್ಗೆಗೌಡ ಅವರ ಮುಂದಾಳತ್ವದಲ್ಲಿ ಜಿಲ್ಲಾ ನಿರ್ದೇಶಕರ ತಂಡ ಹಾಗೂ ಸಿಬ್ಬಂದಿ ಗ್ರಾಮೀಣ ಮಟ್ಟದ ಕುಟುಂಬಸ್ಥರ ಸಬಲೀಕರಣಕ್ಕೆ ಪೂರಕವಾದ ಕೃಷಿಯೇತರ ಚಟುವಟಿಕೆಯೊಂದಿಗೆ ಇತರೆ ಕಾರ್ಯಕ್ರಮಗಳನ್ನು ಸಂಘಟಿಸಿದ್ದು, ಇದರ ಪಕ್ಷಿನೋಟ ಇಲ್ಲಿದೆ.
ಸ್ವಸಹಾಯ ಸಂಘಗಳ ಬಲವರ್ಧನೆ: ದುರ್ಬಲ ವರ್ಗದ ಕುಟುಂಬಗಳಿಗೆ ಕುಟುಂಬ ನಿರ್ವಹಣೆಗೆ ಸಹಾಯ ಹಸ್ತ ನೀಡುವ ಉದ್ದೇಶದಿಂದ ಗ್ರಾವå ಮಟ್ಟದಲ್ಲಿ ಸ್ವ-ಸಹಾಯ ಮತ್ತು ಪ್ರಗತಿ ಬಂಧು ಗುಂಪುಗಳನ್ನು ರಚಿಸಲಾಗಿದ್ದು, ಪ್ರಸ್ತುತ 17510 ಸಂಘದಲ್ಲಿ 164199 ಕುಟುಂಬ ಸದಸ್ಯರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರಾಗಿದ್ದು, ಯೋಜನೆಯ ಎಲ್ಲಾ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ.
ಆರ್ಥಿಕ ಸಬಲೀಕರಣ: ಯೋಜನೆಯ ಪಾಲುದಾರ ಕುಟುಂಬಗಳಿಗೆ ಅಗತ್ಯವಿರುವ ಹಣಕಾಸು ಸೌಲಭ್ಯ ಪಡೆಯಲು ಪ್ರಗತಿನಿಧಿ ಕಾರ್ಯಕ್ರಮ ಮೂಲಕ ಅತಿ ಸಣ್ಣ ಉಳಿತಾಯ ಮೊತ್ತದಲ್ಲಿ ಶಿಸ್ತುಬದ್ಧವಾದ ಆರ್ಥಿಕ ವ್ಯವಹಾರವನ್ನು ಗುಂಪಿನ ಎಲ್ಲಾ ಸದಸ್ಯರ ಒಮ್ಮತದ ಮೇರೆಗೆ ವ್ಯವಹರಿಸಲಾಗುತ್ತಿದೆ.
ಬ್ಯಾಂಕ್ನ ಪ್ರತಿನಿಧಿ ಯಾಗಿ ಸಾಲದ ವಿನಿಯೋಗ: ಆರ್ಥಿಕ ವ್ಯವಹಾರವನ್ನು IDBI Bank ಮೂಲಕ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ BC/BC Trust ಆಗಿ ಕರ್ತವ್ಯ ನಿರ್ವಹಿಸುತ್ತಿದೆ. ಸ್ವ-ಸಹಾಯ ಸಂಘದ ಕುಟುಂಬ ಸದಸ್ಯರ ಬೇಡಿಕೆ ಮೇರೆಗೆ ಬ್ಯಾಂಕ್ನ ಸಹಕಾರದೊಂದಿಗೆ ಸಮಯಕ್ಕೆ ಸರಿಯಾಗಿ ಸಾಲದ ವ್ಯವಸ್ಥೆ ಕಲ್ಪಿಸಲಾಗಿದೆ. ಇದೀಗ 320.91 ಕೋಟಿ ರೂ. ಮೊತ್ತದ ಸಾಲ ನೀಡಲಾಗಿದ್ದು, 451.08 ಕೋಟಿ ರೂ. ಮೊತ್ತ ಚಾಲ್ತಿಯಲ್ಲಿದ್ದು, 126984 ಸದಸ್ಯರಿಗೆ ಬ್ಯಾಂಕ್ನಿಂದ ಸಾಲ ಒದಗಿಸಲಾಗಿದೆ. ಸಾಲದ ಉದ್ದೇಶ, ಸಾಲ ವಿತರಣೆ, ಮರುಪಾವತಿ ಅನುಪಾಲನೆ, ಗುಂಪಿನ ಶ್ರೇಣೀಕರಣ ಕುರಿತಂತೆ ವಿಮರ್ಶಿಸಿ, ಗುಂಪಿನ ಸದಸ್ಯರ ಸಾಲದ ಉದ್ದೇಶ ಪರಿಗಣಿಸಿ ಆರ್ಥಿಕ ವ್ಯವಹಾರ ಮಾಡಲಾಗುತ್ತಿದೆ.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೇಜನೆಯು ಕೇಂದ್ರ ಸರಕಾರದ ಇ-ಗವರ್ನೆನ್ಸ್ ಇಂಡಿಯಾ ಲಿಮಿಟೆಡ್ (ಮಿನಿಸ್ಟ್ರಿ ಆಫ್ ಎಲೆಕ್ಟ್ರಾನಿಕ್ಸ್ ಆ್ಯಂಡ್ ಇನಾ ರ್ಮೇಶನ್ ಟೆಕ್ನಾಲಜಿ)ಜತೆ ಒಪ್ಪಂದ ಮಾಡಿಕೊಂಡು ಸರಕಾರದ ಸೌಲಭ್ಯಗಳನ್ನು ಜನರಿಗೆ ಮುಟ್ಟಿಸಲು ರಾಜ್ಯಾದ್ಯಂತ ಸಾಮಾನ್ಯ ಸೇವಾ ಕೇಂದ್ರಗಳನ್ನು ತೆರೆಯಲಾಗಿದೆ. ಸರಕಾರದ ಸೌಲಭ್ಯಗಳನ್ನು ಜನಸಾಮಾನ್ಯರಿಗೆ ತಂತ್ರಜ್ಞಾನ ಮೂಲಕ ಅತ್ಯಂತ ಪಾರದರ್ಶಕತೆಯಿಂದ ಅತೀ ಕಡಿಮೆ ಅವ ಧಿಯಲ್ಲಿ ದೊರಕಿಸಿಕೊಡುವ ವ್ಯವಸ್ಥೆಯಾಗಿದೆ. ಒಂದು ಗ್ರಾಮ ಒಂದು ಸಿಎಸ್ಸಿ ಪರಿಕಲ್ಪನೆಯಲ್ಲಿ ಪ್ರತಿ ಗ್ರಾಮಗಳಲ್ಲೂ ಅನುಷ್ಠಾನಗೊಳಿಸಲಾಗುತ್ತಿದೆ. ಇದರಿಂದ ಸರಕಾರದ ವಿವಿಧ ಯೋಜನೆಗಳ ಲಾಭ ಪಡೆಯಲು ಈ ಕೇಂದ್ರದಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ. ಈ ಸೇವಾಕೇಂದ್ರದ ಮೂಲಕ ಸರಕಾರದ 700 ಸೇವೆಗಳನ್ನು ಪಡೆಯಲು ಅವಕಾಶ ಇರುತ್ತದೆ. ಪ್ರಸ್ತುತ ಜಿಲ್ಲಾ ವ್ಯಾಪ್ತಿಯ 7 ತಾಲೂಕಿನಲ್ಲಿ 246 ಸಾಮಾನ್ಯ ಸೇವಾ ಕೇಂದ್ರಗಳಿದ್ದು, 239 ಸೇವಾ ಕೇಂದ್ರಗಳಲ್ಲಿ ಹಣ ಸಂಗ್ರಹಿಸಲಾಗುತ್ತಿದೆ. ಪ್ರಸ್ತುತ ವರ್ಷದಲ್ಲಿ ಇದುವರೆಗೂ ಒಟ್ಟು 255119 ಸರಕಾರದ ಸೇವೆ ಜನಸಾಮಾನ್ಯರಿಗೆ ಒದಗಿಸಲಾಗಿದೆ. 1968ನೇ ಅಕ್ಟೋಬರ್ 24ರಂದು ಪೂಜ್ಯ ವೀರೇಂದ್ರ ಹೆಗ್ಗಡೆಯವರು ತಮ್ಮ 20ನೇ ವರ್ಷದ ಪ್ರಾಯದಲ್ಲಿ ಧರ್ಮಸ್ಥಳ ಧರ್ಮಾಧಿಕಾರಿಯಾಗಿ ಪಟ್ಟವನ್ನೇರಿರುತ್ತಾರೆ. ಕ್ಷೇತ್ರದ ಧರ್ಮಾಧಿ ಕಾರಿಯಾಗಿ ನಾಡಿನ ಹಿತ ಗಮನದಲ್ಲಿರಿಸಿಕೊಂಡು ಅವಿಶ್ರಾಂತವಾಗಿ ದುಡಿಯುತ್ತಿರುವ ಪೂಜ್ಯರು, ಐದು ದಶಕಗಳಷ್ಟು ದೀರ್ಘ ಕಾಲ ಮನುಕುಲಕ್ಕೆ ಹಲವಾರು ವಿನೂತನ ಯೋಜನೆಗಳನ್ನು ನೀಡಿರುತ್ತಾರೆ. ಅವುಗಳನ್ನು ಅನುಷ್ಠಾನಗೊಳಿಸಲು ಸ್ವಯಂ ಪ್ರಯತ್ನಪಟ್ಟಿರುತ್ತಾರೆ. ಇದರಿಂದ ಕೋಟ್ಯಂತರ ಜನರ ಬದುಕು ಬದಲಾಗಿರುತ್ತದೆ.
– ಸತೀಶ ನಾಯ್ಕ, ಜಿಲ್ಲಾ ನಿರ್ದೇಶಕರು, ಧಾರವಾಡ ಜಿಲ್ಲೆ ಸಂಪೂರ್ಣ ಸುರಕ್ಷಾ
ಪಾಲುದಾರ ಕುಟುಂಬಗಳ ಆರೋಗ್ಯ ಮತ್ತಿತರೆ ಸಮಸ್ಯೆಗಳಿಗೆ ಸ್ಪಂದನೆ ನೀಡುವ ಉದ್ದೇಶದಿಂದ ಸಂಪೂರ್ಣ ಸುರûಾ ಯೋಜನೆ ಆರಂಭಗೊಳಿಸಲಾಯಿತು. ಸಂಪೂರ್ಣ ಸುರಕ್ಷಾ ಯೋಜನೆಯಲ್ಲಿ ಪ್ರತಿ ವರ್ಷ ಹತ್ತು ಲಕ್ಷಕ್ಕೂ ಮಿಕ್ಕಿದ ಸದಸ್ಯರು ನೋಂದಾಯಿಸುತ್ತಿದ್ದು, ಈ ವರ್ಷ 190730 ಸದಸ್ಯರು ನೋಂದಾಯಿಸಿರುತ್ತಾರೆ. ನಿಗದಿತ ವಂತಿಗೆ ನೀಡಿ ಸದಸ್ಯರಾದವರಿಗೆ ವಿಮಾ ಕಂಪನಿಗಳಿಂದ ಚಿಕಿತ್ಸಾ ವೆಚ್ಚ ಮರುಪಾವತಿ, ಹೆರಿಗೆ ವೆಚ್ಚ ಮರುಪಾವತಿ, ಅಪಘಾತ ವಿಮೆ, ಮರಣ ಸಾಂತ್ವನ ಸೌಲಭ್ಯ ಒದಗಿಸಲಾಗುತ್ತಿದೆ. ಇದರಿಂದ ಜನರ ಬದುಕಿನಲ್ಲಿ ವಿಶೇಷ ಭದ್ರತೆ ಮೂಡಿರುತ್ತದೆ. ಜ್ಞಾನದೀಪ ಶಾಲಾ ಶಿಕ್ಷಣ ಕಾರ್ಯಕ್ರಮ
ಕರ್ನಾಟಕದ ರಾಜ್ಯದ ವಿವಿಧೆಡೆಗಳಲ್ಲಿ ಈ ಕಾರ್ಯಕ್ರಮ ಅನುಷ್ಠಾನಗೊಳಿಸುತ್ತಿದ್ದು, ಶಿಕ್ಷಕರ ಕೊರತೆಯಿರುವ ಶಾಲೆಗಳಿಂದ ಸ್ವಯಂ ಸೇವಾ ನೆಲೆಯಲ್ಲಿ ಶಿಕ್ಷಕರ ಒದಗಿಸಲಾಗಿದೆ. ಶಾಲಾ ಕಟ್ಟಡ ರಚನೆ, ಆವರಣ ರಚನೆ, ಆಟದ ಮೈದಾನ, ಶೌಚಾಲಯ ಮೂತ್ರದೊಡ್ಡಿಗಳ ರಚನೆ, ಶುದ್ಧ ಕುಡಿಯುವ ನೀರಿನ ಪೂರೈಕೆ, ಶಾಲಾ ಕಟ್ಟದ ದುರಸ್ತಿ ಕ್ರೀಡಾ ಹಾಗೂ ಬೋಧನಾ ಸಾಮಗ್ರಿ ಪೂರೈಕೆ, ಡೆಸ್ಕ್ ಬೆಂಚುಗಳ ಒದಗಿಸುವುದು ಇತ್ಯಾದಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ತನಕ ಧಾರವಾಡ ಜಿಲ್ಲೆಯಲ್ಲಿ ಸರಕಾರಿ, ಖಾಸಗಿ ಶಾಲೆಗಳ ಅಭಿವೃದ್ಧಿಗಾಗಿ 250 ಶಿಕ್ಷಣ ಸಂಬಂಧಿ ಕಾಮಗಾರಿಗಳಿಗೆ ಮತ್ತು ಕಾರ್ಯಕ್ರಮಗಳಿಗೆ 1.56 ಕೋಟಿ ರೂ.ಅನುದಾನ ಒದಗಿಸಲಾಗಿದೆ. ವಿಮಾ ಕಾರ್ಯಕ್ರಮ
ಜಿಲ್ಲಾ ವ್ಯಾಪ್ತಿಯಲ್ಲಿ 16796 ಸದಸ್ಯರಿಗೆ ಮೈಕ್ರೋಬಚತ್ ಪಾಲಸಿ ಮಾಡಿಸಲಾಗಿದೆ. 2088 ಸದಸ್ಯರಿಗೆ ಪ್ರಗತಿ ರûಾ ವಿಮಾ ಸೌಲಭ್ಯ ಒದಗಿಸಲಾಗಿದೆ. ಪ್ರಸ್ತುತ ವರ್ಷ ಭೀಮಾಜ್ಯೋತಿ ಹೊಸ ಪಾಲಿಸಿ ಆರಂಭವಾಗಿದ್ದು, 799 ಭೀಮಾಜ್ಯೋತಿ ಹೊಸ ಪಾಲಸಿಗಳ ರಚನೆ ಆಗಿರುತ್ತದೆ. ನೆರೆಹಾವಳಿ
ನೆರೆಹಾವಳಿ ಸಂದರ್ಭ ಯೋಜನೆಯು ವಿಪತ್ತು ನಿರ್ವಹಣೆ ತಂಡಗಳೊಂದಿಗೆ ಜನರ, ಪ್ರಾಣಿಗಳ ಸಂರಕ್ಷಣೆ ಮಾಡಿ, ಆಹಾರ, ಬಟ್ಟೆ, ರಗ್ಗು, ಚಾದರ್ ಹಾಗೂ ಬ್ಲ್ಯಾಂಕೆಟ್ಗಳನ್ನು ಉಚಿತವಾಗಿ ವಿತರಿಸಲಾಯಿತು. ಧಾರವಾಡ ಜಿಲ್ಲಾ ವ್ಯಾಪ್ತಿಯಲ್ಲಿ ಒಟ್ಟು 26 ವಿಪತ್ತು ನಿರ್ವಹಣಾ ಘಟಕಗಳು ಕಾರ್ಯ ನಿರ್ವಹಿಸುತ್ತಿವೆ. ಕೋವಿಡ್-19
ಕೋವಿಡ್-19 ರೋಗ ತೀವ್ರಗತಿಯಲ್ಲಿ ಹರಡುತ್ತಿರುವ ಸಮಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಆಸ್ಪತ್ರೆಗೆ ದಾಖಲಾಗುತ್ತಿದ್ದು, ಎಲ್ಲಾ ರೋಗಿಗಳಿಗೂ ಚಿಕಿತ್ಸೆ ನೀಡುವ ಉದ್ದೇಶದಿಂದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಧಾರವಾಡ ಜಿಲ್ಲಾ ವ್ಯಾಪ್ತಿಯ ಆಸ್ಪತ್ರೆಗಳಿಗೆ 9 ಟನ್ ಆಮ್ಲಜನಕ, 20 ಕಾನ್ಸಂಟ್ರೇಟರ್, 3 ವೆಂಟಿಲೇಟರ್, 6 ಹೈ-ಪೊÉà ಮಷಿನ್ ವಿತರಿಸಲಾಯಿತು. ಕೋವಿಡ್ ರೋಗಿಗಳಿಗೆ ಹಾಗೂ ಮನೆಯವರಿಗೆ ಮನೆಯಿಂದ ಆಸ್ಪತ್ರೆಗೆ ಹಾಗೂ ಆಸ್ಪತ್ರೆಯಿಂದ ಮನೆಗೆ ತೆರಳಲು ವಾಹನದ ವ್ಯವಸ್ಥೆ ಮಾಡಲಾಯಿತು. ಯೋಜನೆಯ ಕಾರ್ಯಕರ್ತರಿಗೆ ಐಸೋಲೇಶನ್ ವಾರ್ಡ್ ವ್ಯವಸ್ಥೆ ಮಾಡಲಾಯಿತು. ಸಾರ್ವಜನಿಕರಿಗೆ ಆಹಾರ ಕಿಟ್ ವಿತರಿಸಲಾಯಿತು. ಕಾರ್ಯಕರ್ತರಿಗೆ ಕೋವಿಡ್ ಪರಿಹಾರನಿಧಿ ಸೌಲಭ್ಯ ಒದಗಿಸಲಾಯಿತು. ಧಾರವಾಡ ಜಿಲ್ಲೆಯ ಎಲ್ಲಾ ಕಾರ್ಯಕರ್ತರಿಗೆ ವ್ಯಾಕ್ಸಿನೇಶನ್ ಹಾಕಿಸಲಾಯಿತು. ನಿರಂತರ ಮಾಸಪತ್ರಿಕೆ
ರಾಜ್ಯದೆಲ್ಲೆಡೆ ನಡೆದ ಗ್ರಾಮಾಭಿವೃದ್ಧಿ ಚಟುವಟಿಕೆಗಳು, ಹೊಸ ಹೊಸ ಯೋಜನೆ, ತಂತ್ರಜ್ಞಾನ, ಸಮುದಾಯ ಕಾರ್ಯಕ್ರಮ, ಕೃಷಿಯೇತರ ಚಟುವಟಿಕೆ, ಬ್ಯಾಂಕೇತರ ಕಾರ್ಯಕ್ರಮಗಳನ್ನು ಬಿಂಬಿಸುವ ಪತ್ರಿಕೆಯಾಗಿದೆ. ಪತ್ರಿಕೆಯು ಅತೀ ಹೆಚ್ಚು ಪ್ರಾಮುಖ್ಯತೆ ಪಡೆದಿದ್ದು, ಓದುಗರ ಮೆಚ್ಚುಗೆ ಪಡೆದಿದೆ. ಧಾರವಾಡ ಜಿಲ್ಲಾ ವ್ಯಾಪ್ತಿಯಲ್ಲಿ ಇದುವರೆಗೂ ಒಟ್ಟು 3500 ಸದಸ್ಯರು ನಿರಂತರ ಓದುಗರಾಗಿದ್ದಾರೆ. ಪ್ರಗತಿ ರಕ್ಷಾ ಕವಚ ವಿಮಾ ಕಾರ್ಯಕ್ರಮ
ಭಾರತಿಯ ಜೀವ ವಿಮಾ ನಿಗಮದ ಸಹಭಾಗಿತ್ವದೊಂದಿಗೆ ಗ್ರಾಮಾಭಿವೃದ್ಧಿ ಯೋಜನೆ ತನ್ನ ಸ್ವಸಹಾಯ ಸಂಘದ ಸದಸ್ಯರಿಗೆ, ಅವರು ಪಡೆಯುವ ಪ್ರಗತಿನಿ ಧಿ ಸಾಲಕ್ಕೆ ಸದಸ್ಯರು ಮತ್ತು ವಿನಿಯೋಗದಾರರಿಗೆ ಸಾಲ ವಿಮಾ ಯೋಜನೆಯನ್ನು ಅನುಷ್ಠಾನಗೊಳಿಸಿದೆ. ಈ ವಿಮಾ ಕಾರ್ಯಕ್ರಮದನ್ವಯ ಅವರು ಪಡೆದ ಸಾಲಕ್ಕೆ ಮುಂದಿನ ಒಂದು ವರ್ಷದ ಅವ ಧಿಗೆ ವಿಮೆ ಲಭ್ಯವಿರುತ್ತದೆ. ಧಾರವಾಡ ಜಿಲ್ಲಾ ವ್ಯಾಪ್ತಿಯಲ್ಲಿ ಕಳೆದ 3 ವರ್ಷಗಳಿಂದ 1524 ಸದಸ್ಯರ ಮತ್ತು ಅವರ ಕುಟುಂಬದವರ ಮರಣಾರ್ಥ 8.25 ಕೋಟಿ ರೂ. ಸಾಲವನ್ನು ವಿಮಾ ಕಂಪನಿಯಿಂದ ಪಾವತಿಸಲಾಗಿದೆ. ಜ್ಞಾನವಿಕಾಸ ತರಬೇತಿ ಕೇಂದ್ರ
ಯೋಜನೆಯು ತನ್ನ ಸಿಬ್ಬಂದಿಗಳಿಗೆ, ಪಾಲುದಾರರಿಗೆ ವಯಸ್ಸಿನ ಮಿತಿ, ಶಿಕ್ಷಣದ ಮಿತಿ ನೀಡದೇ ಅಧ್ಯಯನಾಸಕ್ತರಿಗೆ ಅಗತ್ಯ ಮಾಹಿತಿ ತರಬೇತಿ ನೀಡಲು ಧಾರವಾಡ ಜಿಲ್ಲಾ ವ್ಯಾಪ್ತಿಯಲ್ಲಿ ಜ್ಞಾನವಿಕಾಸ ತರಬೇತಿ ಕೇಂದ್ರ ಸ್ಥಾಪಿಸಿದ್ದು, ಇದುವರೆಗೂ ತರಬೇತಿ ಕೇಂದ್ರದಲಿ ಬ್ಯುಟಿಶಿಯನ್, ವಿದ್ಯುತ್ ಚಾಲಿತ ಹೊಲಿಗೆ ಮಶಿನ್ನಲ್ಲಿ ಹೊಲಿಗೆ ತರಬೇತಿ, ಕಂಪೂÂಟರ್, ಸ್ವ-ಉದ್ಯೋಗ, ಬಟ್ಟೆ ಬ್ಯಾಗ್ ತಯಾರಿ, ಬೇಕರಿ, ಹೈನುಗಾರಿಕೆ, ಕೋಳಿ-ಕುರಿ ಸಾಕಣೆ, ಸಾವಯವ ಕೃಷಿ, ಬೇಡಿಕೆ ಆಧಾರಿತ ತರಬೇತಿ, ಸಿಬ್ಬಂದಿಗಳಿಗೆ ಸಾಮಥ್ಯಾìಭಿವೃದ್ಧಿ ತರಬೇತಿ, ಯೋಜನೆ ಸದಸ್ಯರನ್ನು ಹೊರತುಪಡಿಸಿ ಸಾರ್ವಜನಿಕರಿಗೆ ಕಡಿಮೆ ದರದಲ್ಲಿ ಒಟ್ಟು 3461 ತರಬೇತಿಗಳನ್ನು ನಡೆಸಲಾಗಿದ್ದು, 138028 ಸದಸ್ಯರು ಭಾಗವಹಿಸಿರುತ್ತಾರೆ. ಶ್ರದ್ಧಾ ಕೇಂದ್ರಗಳ ಸ್ವತ್ಛತಾ ಕಾರ್ಯಕ್ರಮ
ಪ್ರತಿ ವರ್ಷ ಆಗಸ್ಟ್ ತಿಂಗಳ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಹಾಗೂ ಜನವರಿ ತಿಂಗಳಿನಲ್ಲಿ ಮಕರ ಸಂಕ್ರಾಂತಿ ನಿಮಿತ್ತ ಊರಿನ ದೇವಸ್ಥಾನ, ಮಸೀದಿ, ಬಸದಿ, ಚರ್ಚ್ ಗಳನ್ನು ಸ್ವತ್ಛತೆಗೊಳಿಸಿ ಜನರಲ್ಲಿ ಸ್ವತ್ಛತಾ ಜಾಗೃತಿ ಮೂಡಿಸಲಾಗುತ್ತಿದೆ. ಇದುವರೆಗೂ ಒಟ್ಟು 5000 ಶ್ರದ್ಧಾ ಕೇಂದ್ರಗಳ ಸ್ವತ್ಛತಾ ಕಾರ್ಯಕ್ರಮ ಮಾಡಲಾಗಿದೆ. ಸಮುದಾಯ ಅಭಿವೃದ್ಧಿ ಕಾರ್ಯಕ್ರಮಗಳು
ಪರಿಸರ ಸಂರಕ್ಷಣೆಗಾಗಿ ಗೋಬರ್ಗ್ಯಾಸ್ ಬಳಕೆ, ಕುಗ್ರಾಮಗಳಲ್ಲಿ ವಿದ್ಯುತ್ ದೊರೆಯದ ಕುಟುಂಬಗಳಿಗೆ ಸೋಲಾರ್ ದೀಪ, ಬಡಜನರು ಅಡುಗೆ ಮಾಡಲು ಬಡ್ಡಿ ರಹಿತವಾದ ಕಡಿಮೆ ವೆಚ್ಚದ ಕುಕ್ಸ್ಟೋವ್ ಒದಗಿಸಲಾಗಿದೆ. ಧಾರವಾಡ ಜಿಲ್ಲೆಯಲ್ಲಿ ಇದುವರೆಗೂ ಒಟ್ಟು 15357 ಗ್ರೀನ್ವೇ ಕುಕ್ಸ್ಟೌವ್ ವಿತರಿಸಿದ್ದು, 9956 ಕುಟುಂಬಗಳಿಗೆ ಸೋಲಾರ್ ದೀಪ, ವಾಟರ್ ಹೀಟರ್ ಅಳವಡಿಸಲಾಗಿದ್ದು, 560.07 ಲಕ್ಷ ಅನುದಾನ ನೀಡಲಾಗಿದೆ. ಪ್ರಸ್ತುತ ವರ್ಷ ಜನಮಂಗಳ ಕಾರ್ಯಕ್ರಮದಡಿ ವಿಕಲಚೇತನರಿಗೆ 28 ವೀಲ್ಚೇರ್, 5 ವಾಕಿಂಗ್ ಸ್ಟಿಕ್, 21 ವಾಟರ್ ಬೆಡ್ ಇನ್ನಿತರೆ ಸಲಕರಣೆಗಳನ್ನು ವಿತರಿಸಲಾಗಿದೆ.