Advertisement

Ayodhya Ram Mandir ದೇಶದಲ್ಲಿ ಧರ್ಮ ಜಾಗೃತಿ ಪರ್ವ: ಪೇಜಾವರ ಶ್ರೀ

10:38 PM Apr 06, 2024 | Team Udayavani |

ಹೊಸಪೇಟೆ: ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಬಳಿಕ ದೇಶದಲ್ಲಿ ಧರ್ಮಜಾಗೃತಿ ಪರ್ವ ಆರಂಭವಾಗಿದೆ ಎಂದು ಉಡುಪಿಯ ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಹೇಳಿದರು.

Advertisement

ನಗರದ ಶ್ರೀಕೃಷ್ಣ ಮಠದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಯೋಧ್ಯೆಯಲ್ಲಿ ಶ್ರೀ ರಾಮಮಂದಿರ ನಿರ್ಮಾಣವಾದ ಬಳಿಕ ದೇಶದೆಲ್ಲೆಡೆ ಧರ್ಮ ಜಾಗೃತಿ ಆರಂಭವಾಗಿದೆ. ಧಾರ್ಮಿಕತೆ ಕಡೆ ಹೆಚ್ಚು ಒಲವು ವ್ಯಕ್ತವಾಗುತ್ತಿದ್ದು, ಧರ್ಮ ಕ್ಷೇತ್ರಗಳ ಅಭಿವೃದ್ಧಿ ಮತ್ತು ಶುದ್ಧೀಕರಣಕ್ಕೆ ಅಣಿಯಾಗಿದೆ ಎಂದರು.

ರಾಜ-ಮಹಾರಾಜರ ಆಳ್ವಿಕೆ ಕಾಲಘಟ್ಟ ಮುಗಿದಿದೆ, ನಾವೀಗ ಪ್ರಜಾಪ್ರಭುತ್ವ ವ್ಯವಸ್ಥೆಯ ಕಾಲದಲ್ಲಿದ್ದು, ಪ್ರಜೆಗಳೇ ಪ್ರಭುಗಳಾಗಿದ್ದಾರೆ. ಪ್ರತಿಯೊಬ್ಬರೂ ರಾಮನ ಆದರ್ಶ ಪಾಲನೆ ಮಾಡಿದರೆ ರಾಮರಾಜ್ಯದ ಕನಸು ನನಸಾಗಲಿದೆ ಎಂದರು. ನರಸಿಂಹ ಆಚಾರ್ಯ, ಗುರುರಾಜ, ರಾಮಚಂದ್ರ ಪ್ರಸಾದ್‌, ವಾದಿರಾಜ ಭಟ್‌, ಶಿವಪ್ರಸಾದ್‌ ಹಾಗೂ ರಾಘವೇಂದ್ರ ಸೋಮಯಾಜಿ ಮುಂತಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next