Advertisement

ಧಾರಾನಾಥ ಗಂಗಾ ವಿವಾಹ ಮಹೋತ್ಸವ

09:34 PM Nov 06, 2021 | Team Udayavani |

ಕುಮಟಾ: ತಾಲೂಕಿನ ಕಡೆಕೋಡಿಯಲ್ಲಿ ಧಾರೇಶ್ವರದ ಶ್ರೀ ಧಾರಾನಾಥ ದೇವರ ಉತ್ಸವ ಮತ್ತು ಶಿವಗಂಗಾ ವಿವಾಹ ಕಾರ್ಯಕ್ರಮ ಪಾರಂಪರಿಕ, ಧಾರ್ಮಿಕ ವಿಧಿ ವಿಧಾನಗಳ ಮೂಲಕ ವಿಜೃಂಭಣೆಯಿಂದ ನಡೆಯಿತು.

Advertisement

ಧಾರೇಶ್ವರದಲ್ಲಿ ದೋರೇಶ್ವರನಾದ ಪರಶಿವನು ದೇವಿ ಗಂಗೆಯನ್ನು ವರಿಸಿದ ಪುಣ್ಯಪರ್ವವು ಕಡೆಕೋಡಿಯ ಜೋಡಿ ವೀರಗಲ್ಲುಗಳಿರುವ ಅಶ್ವತ್ಥಕಟ್ಟೆಯಲ್ಲಿ ಸಾಂಪ್ರದಾಯಿಕ ಮತ್ತು ವೈದಿಕ ಆಚರಣೆಯೊಂದಿಗೆ ಕಳೆಗಟ್ಟಿತು.

ತಳಿರು ತೋರಣ, ದೀಪಾಲಂಕಾರಗಳಿಂದ ಸಿಂಗರಿಸಿದ ವಧು ಗಂಗೆಯ ನೈಸರ್ಗಿಕ ಕಲ್ಯಾಣ ಮಂಟಪಕ್ಕೆ ಪಂಚವಾದ್ಯದೊಂದಿಗೆ ಆಗಮಿಸಿದ ವರ ಧಾರೇಶ್ವರನ ದಿಬ್ಬಣವನ್ನು ಸ್ಥಳೀಯರು ಎದುರುಗೊಂಡು ಸಭಾ ಪೂಜೆಯೊಂದಿಗೆ ಬರಮಾಡಿಕೊಂಡರು. ಬಳಿಕ ಅಷ್ಟಾವಧಾನ ಸೇವೆಯೊಂದಿಗೆವಿವಾಹ-ಉತ್ಸವಾದಿ ಮಹಾಪೂಜೆ ಕಾರ್ಯಕ್ರಮಗಳು ವಿಜೃಂಭಣೆಯಿಂದ ಸಂಪನ್ನಗೊಂಡಿತು.

ಪ್ರತಿವರ್ಷ ದೀಪಾವಳಿ ಹಬ್ಬದ ಸಂದರ್ಭದಲ್ಲಿ ನಡೆಯುವ ಈ ವಿಶೇಷ ಘಳಿಗೆಯನ್ನು ವೀಕ್ಷಿಸಿ, ಪೂಜೆ ಸಲ್ಲಿಸುವ ಉದ್ದೇಶದಿಂದ ಸುತ್ತಮುತ್ತಲ ಗ್ರಾಮಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿದ್ದರು. ಮಹಾಪೂಜೆ ಬಳಿಕ ಪ್ರಸಾದ ವಿತರಣೆ ನಡೆಯಿತು. ವಿವಾಹದ ಬಳಿಕ ದೋರೇಶ್ವರನೊಟ್ಟಿಗೆ ಧಾರೇಶ್ವರಕ್ಕೆ ಹೊರಟ ದೇವಿಗಂಗೆಯ ಉತ್ಸವಕ್ಕೆ ಭಕ್ತಾದಿಗಳು ಜಯಘೋಷಗೈದರು.

Advertisement

Udayavani is now on Telegram. Click here to join our channel and stay updated with the latest news.

Next