Advertisement

TTD: ತಿರುಮಲಕ್ಕೆ ಭಕ್ತರ ದಂಡು: ಟೋಕನ್‌ ವಿತರಣೆ ಸ್ಥಗಿತ

07:43 PM Oct 01, 2023 | Team Udayavani |

ತಿರುಪತಿ: ಸಾಲು ಸಾಲು ರಜೆಗಳ ಹಿನ್ನೆಲೆಯಲ್ಲಿ ತಿರುಮಲಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ದೊಡ್ಡ ಮಟ್ಟದಲ್ಲಿ ಏರಿಕೆಯಾಗಿದೆ. ಪ್ರಸ್ತುತ ಶ್ರೀ ಬಾಲಾಜಿಯ ದರ್ಶನ ಪಡೆಯಲು ಕನಿಷ್ಠ 48 ಗಂಟೆಗಳು ಸಾಲಿನಲ್ಲಿ ಕಾಯುವುದು ಅನಿವಾರ್ಯವಾಗಿದೆ.

Advertisement

ಶನಿವಾರ ಮತ್ತು ಭಾನುವಾರ ದರ್ಶನಕ್ಕೆ 5 ಕಿ.ಮೀ. ಉದ್ದದ ಸರತಿ ಸಾಲು ಕಂಡುಬಂದಿತು. ಪಾರ್ಕಿಂಗ್‌ ಸ್ಥಳಗಳು ವಾಹನಗಳಿಂದ ತುಂಬಿ ಹೋಗಿವೆ. ಶನಿವಾರ, ಭಾನುವಾರ ಮತ್ತು ಅ.2ರ ಗಾಂಧಿ ಜಯಂತಿ ಪ್ರಯುಕ್ತ ರಜೆಗಳ ಹಿನ್ನೆಲೆಯಲ್ಲಿ ಭಕ್ತರ ದಂಡು ತಿರುಪತಿಗೆ ಹರಿದುಬಂದಿದೆ. ವಾಹನ ತಪಾಸಣಾ ಸ್ಥಳ ಅಲಿಪಿರಿಯಲ್ಲೂ ವಾಹನಗಳು ಸರತಿ ಸಾಲಿನಲ್ಲಿ ನಿಂತಿವೆ. ಭಕ್ತರ ಸಂದಣಿ ನಿಯಂತ್ರಿಸಲು ಅ.1, 7, 8, 14 ಮತ್ತು 15ರ ಸರ್ವ ದರ್ಶನ ಟೋಕನ್‌ಗಳನ್ನು ವಿತರಿಸುವುದನ್ನು ಟಿಟಿಡಿ ಸ್ಥಗಿತಗೊಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next