Advertisement

ಹಕ್ಕಿಫಿಕ್ಕಿ ಸಮುದಾಯದ ಗಿಡಮೂಲಿಕೆ ಔಷಧಿಗೆ ಅಂತರಾಷ್ಟ್ರೀಯ ಮಾರೂಕಟ್ಟೆ: ಶ್ರೀರಾಮುಲು

09:51 PM Nov 26, 2020 | mahesh |

ಹುಣಸೂರು: ಆದಿವಾಸಿ ಹಕ್ಕಿ ಪಿಕ್ಕಿ ಸಮುದಾಯದ ಅಭಿವೃದ್ದಿಗಾಗಿ ಕೇಂದ್ರ ಸರಕಾರ 5 ಕೋಟಿರೂ ಮೀಸಲಿಟ್ಟಿದ್ದು, ಮೈಸೂರು ಮತ್ತು ಶಿವಮೊಗ್ಗ ಜಿಲ್ಲೆಯ ಹಕ್ಕಿಫಿಕ್ಕಿ ಸಮುದಾಯದ ಪಾರಂಪಾರಿಕ ಗಿಡಮೂಲಿಕೆ ಔಷಧಿಗೆ ಅಂತರಾಷ್ಟ್ರೀಯ ಮಾರೂಕಟ್ಟೆ ಒದಗಿಸಲು ಕ್ರಮವಹಿಸುವುದಾಗಿ ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಪ್ರಕಟಿಸಿದರು.

Advertisement

ತಾಲೂಕಿನ ಪಕ್ಷಿರಾಜಪುರದಲ್ಲಿ ಸಮಾಜಕಲ್ಯಾಣ ಇಲಾಖೆವತಿಯಿಂದ ನಡೆದ ಕಾರ್ಯ ಕ್ರಮದಲ್ಲಿ ಭಾಗವಹಿಸಿದ್ದ ಅವರು ಮಾತನಾಡಿ ಹಕ್ಕಿಪಿಕ್ಕಿ ಸಮುದಾಯ ತಯಾರಿಸುತ್ತಿರುವ ಗಿಡಮೂಲಿಕೆ ಔಷದಕ್ಕೆ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆ ಕಲ್ಪಿಸುವುದು. ಅವರಿಗೆ ತರಬೇತಿ ಹಾಗೂ ಕಾರ್ಖಾನೆ ಸ್ಥಾಪನೆಗೆ ಪಕ್ಷಿರಾಜಪುರ ಮತ್ತು ಶಿಕಾರಿಪುರವನ್ನು ಪೈಲೆಟ್ ಪ್ರಜೆಕ್ಟ್ ಆಗಿಸಿ ಕೇಂದ್ರ ಸರಕಾರ 5 ಕೋಟಿರೂ ಬಿಡುಗಡೆಗೊಳಿಸಿದ್ದು. ಎರಡು ಕೇಂದ್ರದಲ್ಲಿ ಕಿರು ಪ್ಯಾಕ್ಟರಿ ಸ್ಥಾಪನೆಗೆ ಕ್ರಮಕೈಗೊಳ್ಳಲಾಗುವುದೆಂದರು. ಇಲಾಖೆವತಿಯಿಂದ ಇಲ್ಲಿನವರಿಗೆ ಆಯುಷ್ ಇಲಾಖೆ ಸಹಯೋಗದಲ್ಲಿ ತರಬೇತಿ. ಹಾಗೂ ಮಾರಾಟಕ್ಕೆ ಎಲ್ಲ ರೀತಿಯ ನೆರವು ನೀಡಲಾಗುವುದೆಂದರು.

ಶಾಸಕ ಎಚ್.ಪಿ.ಮಂಜುನಾಥ್ ಮಾತನಾಡಿ ಹಕ್ಕಿ ಪಿಕ್ಕಿ ಸಮುದಾಯದ ಮಂದಿ ಸ್ವಾಭಿಮಾನಿಗಳು. ಇವರಿಗೆ ಸೌಲಭ್ಯ ಕಲ್ಪಿಸಲು ಹಾಗೂ ಗ್ರಾಮದೊಳಗಿನ ಸಂಪರ್ಕ ರಸ್ತೆಗೆ ಅನುದಾನ ಕೊಡಿಸುವಂತೆ ಮನವಿ ಮಾಡಿದರು.

ಈವೇಳೆ ಮಾಜಿ ಸಚಿವ ಶಿವಣ್ಣ. ಮಾಜಿ ಶಾಸಕ ಸಿದ್ದರಾಜು.ಜಿ.ಪಂ.ಅಧ್ಯಕ್ಷೆ ಪರಿಮಳಶ್ಯಾಮ್. ತಾ.ಪಂ.ಅಧ್ಯಕ್ಷೆ ಪದ್ಮಮ್ಮ. ಸಮಾಜಕಲ್ಯಾಣ ಇಲಾಖೆ ನಿರ್ಧೇಶಕ ಸಂಗಪ್ಪ.ತಾಲೂಕು ಬಿಜೆಪಿ ಅಧ್ಯಕ್ಷ ನಾಗಣ್ಣ.ಮುಖಂಡರಾದ ನೀಮಾಶ್ರೀನಿವಾಸ್ ಸೇರಿದಂತೆ ಇತರರು ಇದ್ದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next