Advertisement

ಎಲ್ಲೆಡೆ ಬಿಜೆಪಿಗೆ ಅಧಿಕಾರ

04:11 PM Mar 29, 2021 | Team Udayavani |

ಅಡಹಳ್ಳಿ: ರಾಜ್ಯದ ಮಸ್ಕಿ, ಬಸವಕಲ್ಯಾಣ ವಿಧಾನಸಭಾ ಉಪಚುನಾವಣೆ, ಬೆಳಗಾವಿ ಲೋಕಸಭೆ ಉಪಚುನಾವಣೆಗಳಲ್ಲಿ ಬಿಜೆಪಿ ಜಯಭೇರಿ ಬಾರಿಸುವುದು ಎಷ್ಟು ಸತ್ಯವೋ ಪಶ್ಚಿಮ ಬಂಗಾಳ ಸೇರಿದಂತೆ ವಿವಿಧ ರಾಜ್ಯಗಳಲ್ಲಿಯೂ ಕೂಡ ಬಿಜೆಪಿ ಅಧಿಕಾರದ ಗದ್ದುಗೆ ಹಿಡಿಯುವುದು ಸತ್ಯ ಎಂದು ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದರು.

Advertisement

ಸಮೀಪದ ನದಿ ಇಂಗಳಗಾಂವ ಗ್ರಾಮದಲ್ಲಿ ಕೃಷ್ಣಾ ನದಿ ಹಿನ್ನೀರಿನ ತೀರ್ಥ ಗ್ರಾಮಕ್ಕೆ 2.25 ಕೋಟಿ ವೆಚ್ಚದ ಸಂಪರ್ಕ ಸೇತುವೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕಾರ್ಯಕರ್ತರಿಗೆ ಅಧಿಕಾರ ಕೊಡುವ ನಿದರ್ಶನ ಕೇವಲ ಜಿಜೆಪಿ ಪಕ್ಷದಲ್ಲಿ ಮಾತ್ರ ಕಾಣ ಸಿಗಲು ಸಾಧ್ಯ. ಇಂತಹ ಪಕ್ಷದ ಕಾರ್ಯಕರ್ತನೆಂದು ಹೆಮ್ಮೆ ಪಡಬೇಕು. ನಾವು ಮಾಡಿದ ಸಾಧನೆಗಳೇ ಜನಮಾನಸದಲ್ಲಿ ಉಳಿಯುತ್ತದೆ. ಬರುವ ದಿನಗಳಲ್ಲಿ ಅಥಣಿ ತಾಲೂಕಿನಲ್ಲಿ ಇನ್ನಷ್ಟು ಸೇತುವೆ ನಿರ್ಮಿಸಿ ಸಂಚಾರ ಸುಗಮವಾಗುವಂತೆ ಮಾಡಲಾಗುವುದು. ದೇಶಾದ್ಯಂತ ಎರಡನೇ ಕೋವಿಡ್‌ -19 ಅಲೆ ಹೆಚ್ಚಾಗಿದ್ದು, ಇದನ್ನು ತಡೆಗಟ್ಟಲು ಏ.1ರಿಂದ 45 ಮತ್ತು ಅದಕ್ಕಿಂತ ಮೇಲ್ಪಟ್ಟ ವಯಸ್ಸಿನ ಎಲ್ಲರಿಗೂ ಕೋವಿಡ್ ಲಸಿಕೆ ನೀಡಲಾಗುವುದು ಎಂದರು.

ಎ.ಎನ್‌. ಪಾಟೀಲ, ಜಿ.ಎಂ. ತೇವರಮನಿ, ಸಂಜೀವ ರಾಚಗೌಡರ, ಶ್ರೀಶೈಲ ನಾಯಿಕ, ಶಂಕರ ಠಕ್ಕಣ್ಣವರ, ಅಪ್ಪು ಮದಭಾವಿ, ಕುಮಾರ ಮಠಪತಿ, ಶಂಕರಗೌಡ ಪಾಟೀಲ, ನೀರಾವರಿ ಇಲಾಖೆ ಎಡಬ್ಲ್ಯೂ ಪ್ರವೀಣ ಹುಣಸಿಕಟ್ಟಿ, ಸಿದ್ಧು ಲಾಂಡಗೆ, ಎನ್‌.ಸಿ. ಪವಾರ, ಅಯನಗೌಡಪಾಟೀಲ, ಶಿವರುದ್ರ ಘೂಳಪ್ಪನವರ, ಹಣಮಂತ ಬಾಡಗಿ, ಮಹಾಂತೇಶ ಪಾಟೇಲ, ಅಲಗೌಡ ಮುದಿಗೌಡರ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next