Advertisement

ಸರ್ಕಾರಿ ಶಾಲೆ ಗುಣಮಟ್ಟ ಸುಧಾರಣೆಗೆ ಅಭಿವೃದ್ಧಿ ಸಮಿತಿ

06:30 AM Jun 21, 2018 | |

ಬೆಂಗಳೂರು: ಸರ್ಕಾರಿ ಶಾಲೆಯ ಗುಣಮಟ್ಟ ಸುಧಾರಣೆಗೆ ಪ್ರತಿ ವರ್ಷ ಒಂದಿಲ್ಲೊಂದು ಪ್ರಯೋಗ ನಡೆಯುತ್ತಿದ್ದು,
ಈ ಪ್ರಯತ್ನಕ್ಕೆ ಶಾಲಾ ಆಂತರಿಕ ಗುಣಮಟ್ಟ ಅಭಿವೃದ್ಧಿ  ಸಮಿತಿ (ಐಕ್ಯೂಐಸಿ) ಹೊಸ ಸೇರ್ಪಡೆಯಾಗಲಿದೆ.

Advertisement

ಶಾಲಾ ಗುಣಮಟ್ಟ ಸುಧಾರಣೆ ಹಾಗೂ ಅಂಗೀಕರಣ ಪರಿಷತ್ತು ಸರ್ಕಾರಿ ಶಾಲೆಯ ಗುಣಮಟ್ಟ ಸುಧಾರಣೆಗೆ ಹಲವು ಶಿಫಾರಸುಗಳನ್ನು ಮಾಡಿದೆ. ಅದರಲ್ಲಿ ಶಾಲಾ ಹಂತದ ಸಮಿತಿಯು ಶೈಕ್ಷಣಿಕ ಕೊರತೆಗಳ ಪಟ್ಟಿ ಮಾಡುವುದು,
ಕ್ರಿಯಾ ಯೋಜನೆ, ವಿದ್ಯಾರ್ಥಿಗಳ ಕಲಿಕಾ ಮಟ್ಟ ವಿಶ್ಲೇಷಿಸುವುದು ಹಾಗೂ ಆಡಳಿತಾತ್ಮಕವಾಗಿ ಇದಕ್ಕೆ ಬೇಕಾದ ಕ್ರಮ ಕೈಗೊಳ್ಳುವ ಜವಾಬ್ದಾರಿಯನ್ನು ಶಾಲಾ ಮುಖ್ಯ ಶಿಕ್ಷಕರಿಗೆ ನೀಡಬೇಕು ಎಂದು ತಿಳಿಸಲಾಗಿದೆ.

ಪರಿಷತ್‌ ತನ್ನ ಶಿಫಾರಸುಗಳನ್ನು ಇಲಾಖೆಯ ಪ್ರಧಾನ ಕಾರ್ಯದರ್ಶಿಯವರಿಗೆ ಸಲ್ಲಿಸಿದೆ. ಕಡಿಮೆ ಕಲಿಕಾ 
ಸಾಧನವನ್ನು ಗಮನದಲ್ಲಿಟ್ಟುಕೊಂಡು ಪ್ರತಿ ಶಾಲೆಯ ಶೈಕ್ಷಣಿಕ ಸುಧಾರಣೆ ಅಗತ್ಯವಿದೆ. ಇದಕ್ಕಾಗಿ ಶಾಲೆಗಳಲ್ಲಿ ಅಂತರಿಕ ಗುಣಮಟ್ಟ ಅಭಿವೃದ್ಧಿ  ಸಮಿತಿ ಸ್ಥಾಪಿಸಬೇಕು. ಮುಖ್ಯ ಶಿಕ್ಷಕರು, ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು ಹಾಗೂ ಪಾಲಕರನ್ನು ಸದಸ್ಯರಾಗಿ ಮಾಡಬೇಕು. ಶಾಲಾ ಶಿಕ್ಷಕರಿಂದ ಕಲಿಕಾ ನಾಮಫ‌ಲಕ ರಚಿಸುವಂತೆ ಮಾಡಬೇಕು. ಶಿಕ್ಷಕರ ಜ್ಞಾನ ವೃದಿಟಛಿಗೆ ಕ್ಲಸ್ಟರ್‌ ಹಂತದ ಸಂಪನ್ಮೂಲ ವ್ಯಕ್ತಿಗಳನ್ನು ಬಳಸಿಕೊಳ್ಳಬೇಕು.

ಕ್ಲಸ್ಟರ್‌ ಹಂತದ ಸಮಿತಿಯು ಕೆಎಸ್‌ಕ್ಯೂಎಎಸಿ ಫ‌ಲಿತಾಂಶ ಆಧರಿಸಿ ವಿಶ್ಲೇಷಣೆ ಮಾಡುವಂತೆ ಪ್ರಾಥಮಿಕ ಶಾಲೆಗೆ ಮಾರ್ಗದರ್ಶನ ಮಾಡುವುದು, ಶಾಲೆಗಳ ಕ್ರಿಯಾ ಯೋಜನೆಯನ್ನು ಪರಿಶೀಲಿಸುವುದು, ವಿದ್ಯಾರ್ಥಿಗಳ ಕಲಿಕಾ ಸಾಧನವನ್ನು ವಿಶ್ಲೇಷಿಸುವ ಜತೆಗೆ ಶಾಲೆಗಳ ವಾರ್ಷಿಕ ವರದಿ ಕ್ರೋಢೀಕರಿಸುವುದು, ಶಾಲಾ ಚಟುವಟಿಕೆಯಲ್ಲಿ ಸಮುದಾಯದ ಭಾಗವಹಿಸುವಿಕೆಯನ್ನು ಹೆಚ್ಚಿಸುವಂತೆ ಮಾಡಬೇಕು. ಇದರ ಸಂಪೂರ್ಣ ಜವಾಬ್ದಾರಿಯನ್ನು ಕ್ಲಸ್ಟರ್‌ ರಿಸೋರ್ಸ್‌ ಪರ್ಸನ್‌ (ಸಿಪಿಆರ್‌)ಗೆ ನೀಡಲು ಶಿಫಾರಸಿನಲ್ಲಿ ಸೂಚಿಸಿದೆ.

ಶಾಲೆಗಳ ಗುಣಮಟ್ಟ ಸುಧಾರಣೆಗೆ 5 ಸಮಿತಿಗಳ ರಚನೆಗೆ ಪರಿಷತ್‌ ಶಿಫಾರಸು ಮಾಡಿದ್ದು, ಬ್ಲಾಕ್‌ ಹಂತದ
ಸಮಿತಿಯು ಪ್ರೌಢಶಾಲೆಗೆ ಮಾರ್ಗದರ್ಶನಮಾಡಬೇಕು. ಪ್ರಾಥಮಿಕ, ಪ್ರೌಢಶಾಲೆಯ ಪರಿಶೀಲನೆ,ವಿದ್ಯಾರ್ಥಿಗಳ ಕಲಿಕಾ ಸಾಧನೆ ವಿಶ್ಲೇಷಿಸಿ ಅಗತ್ಯತೆಯನ್ನು ಪೂರೈಸಬೇಕು. ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಮಿತಿಯ
ಮುಖ್ಯಸ್ಥರಾಗಿದ್ದು, ಶಾಲೆಯ ಮೂಲಭೂತ ಸೌಕರ್ಯ ಸುಧಾರಣೆಗೆ ಕ್ರಮ ತೆಗೆದುಕೊಳ್ಳಬೇಕು.

Advertisement

ಜಿಲ್ಲಾ ಹಂತದ ಸಮಿತಿಯು ಸಂಪನ್ಮೂಲ ಕೇಂದ್ರವಾಗಿರುವುದರ ಜತೆಗೆ ಕೆಳ ಹಂತದ ಸಮಿತಿಗಳನ್ನು
ಸಂಪನ್ಮೂಲ ಕೇಂದ್ರವಾಗಿ ಬಲಪಡಿಸಬೇಕು. ಕೆಎಸ್‌ ಕ್ಯೂಎಎಸಿ ಗುರುತಿಸಿದ 5 ಕ್ಷೇತ್ರಗಳ ಅಭಿವೃದ್ಧಿಗೆ ಯೋಜನೆ ಹಾಕಿ ಅನುಷ್ಠಾನಗೊಳಿಸಬೇಕು. ಶಿಕ್ಷಕರ ಅಗತ್ಯತೆಗಳನ್ನು ವಿಶ್ಲೇಷಿಸಿ, ಕೊರತೆ ನಿವಾರಿಸಿ ಶಾಲಾ ಹಂತದಲ್ಲಿ ಯೋಜನೆ ಅನುಷ್ಠಾನಗೊಂಡಿರುವ ಬಗ್ಗೆ ದೃಢೀಕರಿಸಬೇಕು. ಮೂಲ ಸೌಕರ್ಯ ಹಾಗೂ ಶೈಕ್ಷಣಿಕ ಚಟುವಟಿಕೆಯ ವಾರ್ಷಿಕ ವರದಿ ಸಿದಟಛಿಡಿಸುವ ಹೊಣೆಗಾರಿಕೆಯನ್ನು ಡಯಟ್‌ ಪ್ರಾಂಶುಪಾಲರಿಗೆ ವಹಿಸಬೇಕು ಎಂದು ತಿಳಿಸಲಾಗಿದೆ.

ವಿಭಾಗೀಯ ಹಂತದ ಸಮಿತಿಯು ಎಲ್ಲ ಜಿಲ್ಲೆಯ ಗುಣಮಟ್ಟ ಸುಧಾರಣೆಗೆ ಯೋಜನೆ ಸಿದಟಛಿಪಡಿಸಬೇಕು. ತನ್ನ ವ್ಯಾಪ್ತಿಯ ಪ್ರಗತಿ ಪರಿಶೀಲನೆ ಮಾಡುತ್ತಿರಬೇಕು. ಸಿಇಟಿ ಪ್ರಾಂಶುಪಾಲರು ಇದರ ಜವಾಬ್ದಾರಿ ಹೊತ್ತು, 3 ತಿಂಗಳಿಗೊಮ್ಮೆ ಪ್ರಗತಿ ಪರಿಶೀಲಿಸಬೇಕು ಎಂಬುದನ್ನು ವರದಿಯಲ್ಲಿ ತಿಳಿಸಿದೆ.

ಪರಿಷತ್‌ನ ಶಿಫಾರಸು ಹಿನ್ನೆಲೆಯಲ್ಲಿ ಶಾಲೆಗಳಲ್ಲಿ ಸಮಿತಿಯ ರಚನೆಗೆ ಇಲಾಖೆಯ ಅಧಿಕಾರಿಗಳು ಮುಂದಾಗಿದ್ದಾರೆ. ಈ ಸಂಬಂಧ ಅಧಿಕೃತ ಆದೇಶ ಹೊರಡಿಸುವ ಸಾಧ್ಯತೆಯೂ ಇದೆ.

ರಾಜ್ಯ ಉತ್ತಮ ಸಾಧನೆ
ಈ ಮಧ್ಯೆ, 2017-18ನೇ ಸಾಲಿನಲ್ಲಿ ನಡೆದ 3,5 ಮತ್ತು 8ನೇ ತರಗತಿಯ ಆಂತರಿಕ ಮೌಲ್ಯ ಮಾಪನ ಸಮೀಕ್ಷೆಯಲ್ಲಿ ಕರ್ನಾಟಕ ಉತ್ತಮ ಸಾಧನೆ ಮಾಡಿದೆ. 3 ಮತ್ತು 5ನೇ ತರಗತಿ ವಿಭಾಗದಲ್ಲಿ ದೇಶಕ್ಕೆ ಪ್ರಥಮ ಹಾಗೂ 8ನೇ ತರಗತಿ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿದೆ. ಮೂರು ತರಗತಿಗಳಲ್ಲಿ ಸಮೀಕ್ಷೆಗೆ ಒಳಪಡಿಸಿದ ಗಣಿತ, ಪರಿಸರ ಅಧ್ಯಯನ, ವಿಜ್ಞಾನ ಮತ್ತು ಸಮಾಜ ವಿಜ್ಞಾನ, ಭಾಷಾ ವಿಷಯಗಳಲ್ಲಿ ರಾಜ್ಯದ ಫ‌ಲಿತಾಂಶವು ರಾಷ್ಟ್ರಮಟ್ಟಕ್ಕಿಂತ ಶೇ.10ರಷ್ಟು ಉತ್ತಮವಾಗಿದೆ ಎಂದು ಪರಿಷತ್ತು ತನ್ನ ವರದಿಯಲ್ಲಿ ತಿಳಿಸಿದೆ.

– ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next