Advertisement

Delhi; ಹಬ್ಬದ ಬಳಿಕ ವಾಯು ಗುಣಮಟ್ಟ ವಿಶ್ವದಲ್ಲೇ ಕಳಪೆ

01:35 AM Nov 04, 2024 | Team Udayavani |

ಹೊಸದಿಲ್ಲಿ: ದೀಪಾವಳಿಯ ಹಿಂದೆಯೇ ಅತ್ಯಂತ ಕಳಪೆ ಮಟ್ಟದಲ್ಲಿದ್ದ ರಾಷ್ಟ್ರರಾಜಧಾನಿಯ ವಾಯು ಗುಣಮಟ್ಟ ಹಬ್ಬದ ಬಳಿಕ, ಭಾನುವಾರ ಅಪಾಯಕಾರಿ ಮಟ್ಟಕ್ಕೆ ತಲುಪಿದೆ. ದೀಪಾವಳಿ ವೇಳೆ ಪಟಾಕಿ ಬಳಕೆಗೆ ಹೇರಿದ್ದ ನಿರ್ಬಂಧವನ್ನು ಉಲ್ಲಂ ಸಿ ನಿವಾಸಿಗಳು ಯಥೇತ್ಛ ವಾಗಿ ಪಟಾಕಿ ಹೊಡೆದಿದ್ದು, ಇದರಿಂದ ವಾಯುಮಾಲಿನ್ಯ ಹೆಚ್ಚಾಗುವ ಜತೆಗೆ ಶಬ್ದ ಮಾಲಿನ್ಯವೂ ಉಂಟಾಗಿದೆ.

Advertisement

ಗುರುವಾರ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) ಅತಿ ಕಳಪೆ(300ರಿಂದ 400ರವರೆಗೆ) ಮಟ್ಟದಲ್ಲಿತ್ತು. ಭಾನುವಾರ ಅಪಾಯಕಾರಿ(400ಕ್ಕಿಂತ ಹೆಚ್ಚು) ಮಟ್ಟಕ್ಕೆ ತಲುಪಿದೆ. ಭಾನುವಾರ ದೆಹಲಿಯ ಬಹುತೇಕ ಪ್ರದೇಶಗಳಲ್ಲಿ ಎಕ್ಯೂಐ 400 ಅನ್ನು ಮೀರಿದೆ. ಆನಂದ್‌ ವಿಹಾರ್‌ 437 ಎಕ್ಯೂಐ ಜತೆಗೆ ಎಲ್ಲಕ್ಕಿಂತ ಹೆಚ್ಚು ಮಾಲಿನ್ಯ ದಾಖಲಿಸಿದೆ.

ವಿಶ್ವ ಆರೋಗ್ಯ ಸಂಸ್ಥೆ(WHO) ಎಚ್ಚರಿಕೆ ನೀಡಿರುವ ಶ್ವಾಸಕೋಶದ ಮೂಲಕ ರಕ್ತ ತಲುಪುವ ಪಿಎಂ2.5 ಮಾಲಿನ್ಯಕಾರಕಗಳು ದೆಹಲಿಯಲ್ಲಿ ಹೆಚ್ಚಾಗಿದೆ. WHO ಹೇಳಿದ್ದಕ್ಕಿಂದ 50 ಪಟ್ಟು ಹೆಚ್ಚು ಮಾಲಿನ್ಯ ಕಾರಕಗಳು ದೆಹಲಿಯಲ್ಲಿವೆ. ಒಂದು ಕ್ಯೂಬಿಕ್‌ ಮೀ.ಗೆ 345 ಎಂಜಿ ಮಾಲಿನ್ಯ ಕಾರಕಗಳೊಂದಿಗೆ ದೆಹಲಿ ವಿಶ್ವದಲ್ಲೇ ಹೆಚ್ಚು ಮಲಿನ ನಗರ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next