Advertisement

ದೇಶದ ಆರ್ಥಿಕ ಪರಿಸ್ಥಿತಿ ಬಗ್ಗೆ ದೇವೇಗೌಡ ಕಳವಳ

11:17 PM Aug 29, 2019 | Lakshmi GovindaRaj |

ಬೆಂಗಳೂರು: ದೇಶದಲ್ಲಿ ಆರ್ಥಿಕ ಬಿಕ್ಕಟ್ಟು ಒಂದೆಡೆ ಇದ್ದರೆ ಮತ್ತೂಂದೆಡೆ, ಆರ್‌ಬಿಐನಿಂದ ಇದೇ ಮೊದಲ ಬಾರಿಗೆ ಇಷ್ಟೊಂದು ದೊಡ್ಡ ಪ್ರಮಾಣದ ಹಣ ಪಡೆಯಲಾಗಿದೆ. ಆರ್ಥಿಕ ಪರಿಸ್ಥಿತಿ ಆತಂಕಕಾರಿಯಾಗಿದೆ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಕಳವಳ ವ್ಯಕ್ತಪಡಿಸಿದ್ದಾರೆ. ಪಕ್ಷದ ಕಚೇರಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಆರ್‌ಬಿಐನಿಂದ ಹಣ ಪಡೆದಿರುವ ಬಗ್ಗೆ ಈಗಿನ ಗವರ್ನರ್‌, ಹಿಂದಿನ ಗವರ್ನರ್‌ಗಳ ಹೇಳಿಕೆ ಗಮನಿಸಿದ್ದೇನೆ ಎಂದು ಹೇಳಿದರು.

Advertisement

ವಿದೇಶಿ ನೇರ ಬಂಡವಾಳ ಎಂದು ಹೇಳುತ್ತಿದ್ದಾರೆ. ಹಲವು ಸರ್ಕಾರಿ ಇಲಾಖೆಗಳ ನೌಕರರಿಗೆ ಸಂಬಳ ಆಗಿಲ್ಲ, ಸರ್ಕಾರಿ ಸ್ವಾಮ್ಯದ ಹಲವು ಸಂಸ್ಥೆಗಳನ್ನು ಖಾಸಗೀಕರಣ ಮಾಡಲಾಗುತ್ತಿದೆ. ಇನ್ನೂ ಹಲವು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಖಾಸಗಿಗೆ ಕೊಡುವ ಸಾಧ್ಯತೆಯಿದೆ. ಆರ್ಥಿಕ ಸಂಕಷ್ಟದಿಂದ ಹಲವರು ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ ಎಂದರು.

ವಾಜಪೇಯಿ ಕಾಲದಲ್ಲಿ ಅಶೋಕಾ ಹೋಟೆಲ್‌ ಮಾರಿದಂತೆ ಇನ್ನೂ ಹಲವು ಸಂಸ್ಥೆಗಳನ್ನು ಮಾರಾಟ ಮಾಡಲೂ ಬಹುದು. ಏನೇನು ಮಾಡ್ತಾರೋ ನೋಡೋಣ. ಬೆಂಗಳೂರಿನ ಪೀಣ್ಯದಲ್ಲಿ ಯಾವ ಪರಿಸ್ಥಿತಿ ನಿರ್ಮಾಣ ಆಗಿದೆ ಎಂಬುದು ಗೊತ್ತಿದೆ ಎಂದರು. ರಾಜ್ಯದಲ್ಲಿ ಮೊದಲ ಬಾರಿಗೆ ಮೂವರು ಉಪ ಮುಖ್ಯಮಂತ್ರಿ ಮಾಡಲಾಗಿದೆ. ಜಾತಿಗೊಂದು ಅಂತ ಮಾಡಿದರೆ ಇನ್ನೂ ಹಲವು ಜಾತಿಗಳಿವೆ.

ಯಾವ ಆಧಾರದಲ್ಲಿ ಎಂಬುದು ಗೊತ್ತಿಲ್ಲ, ಬಿಜೆಪಿಯಲ್ಲೂ ಹಲವು ಗೊಂದಲಗಳಿವೆ ಎಂದು ತಿಳಿಸಿದರು. ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಮುಗಿಸಲು ಯಾರಿಂದಲೂ ಆಗುವುದಿಲ್ಲ ಎಂಬ ಕಾಗಿನೆಲೆ ಶ್ರೀ ಹೇಳಿಕೆ ಬಗ್ಗೆ ಕೇಳಿದಾಗ, ಅವರು ದೊಡ್ಡವರು, ನಾನೇನೂ ಮಾತನಾಡಲ್ಲ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next