Advertisement

Bullet train ದೇಶದಲ್ಲಿಯೇ ನಿರ್ಮಾಣ: ಸಂಸತ್ತಿಗೆ ಕೇಂದ್ರ ಮಾಹಿತಿ

11:39 PM Nov 28, 2024 | Team Udayavani |

ನವದೆಹಲಿ: ಮುಂಬೈ-ಅಹಮದಾಬಾದ್‌ ನಡುವೆ ನಿರ್ಮಾಣವಾಗುತ್ತಿರುವ ಬುಲೆಟ್‌ ಟ್ರೈನ್‌ ಹಳಿಯಲ್ಲಿ “ಮೇಕ್‌ ಇನ್‌ ಇಂಡಿಯಾ’ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ರೈಲು ಓಡಲಿದೆ. ಅದು ಪ್ರತಿ ಗಂಟೆಗೆ 280 ಕಿ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರಲಿದೆ ಎಂದು ರೈಲ್ವೇ ಸಚಿವ ಅಶ್ವಿ‌ನಿ ವೈಷ್ಣವ್‌ ಲೋಕಸಭೆಗೆ ತಿಳಿಸಿದ್ದಾರೆ.

Advertisement

ಬೆಂಗಳೂರಿನಲ್ಲಿರುವ ಬೆಮೆಲ್‌ ಸಹಭಾಗಿತ್ವದಲ್ಲಿ ಚೆನ್ನೈನಲ್ಲಿರುವ ಇಂಟೆಗ್ರಲ್‌ ಕೋಚ್‌ ಫ್ಯಾಕ್ಟರಿಯಲ್ಲಿ ದೇಸಿ ಬುಲೆಟ್‌ ಟ್ರೈನ್‌ ನಿರ್ಮಿಸಲಾಗುತ್ತದೆ ಎಂದು ಹೇಳಿದ್ದಾರೆ. ಪ್ರತಿ ಕೋಚ್‌ನ ಉತ್ಪಾದನೆಗೆ 28 ಕೋಟಿ ರೂ. ವೆಚ್ಚವಾಗಲಿದೆ. ಕೋಚ್‌ ಅತ್ಯಾ­ಧುನಿಕ ಸೌಲಭ್ಯ ಹೊಂದಿದ್ದು, ಸ್ವಯಂಚಾಲಿತ ಬಾಗಿ­ಲುಗಳು, ಹವಾಮಾನ ನಿಯಂತ್ರಣ ವ್ಯವಸ್ಥೆ, ಸಿಸಿಟಿವಿ ಕಣ್ಗಾವಲು ಇರಲಿವೆ.

Advertisement

Udayavani is now on Telegram. Click here to join our channel and stay updated with the latest news.

Next