Advertisement

“ದೇವದಾಸ್” ನಟಿ ಅವಾ ಮುಖರ್ಜಿ ಇನ್ನಿಲ್ಲ

06:07 PM Jan 18, 2018 | Team Udayavani |

ನವದೆಹಲಿ: ಹಿಂದಿ ಹಾಗೂ ಬಂಗಾಳಿ ಸಿನಿಮಾಗಳಲ್ಲಿ ನಟಿಸಿರುವ ಹಿರಿಯ ನಟಿ ಅವಾ ಮುಖರ್ಜಿ(88ವರ್ಷ) ಗುರುವಾರ ವಿಧಿವಶರಾಗಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

Advertisement

ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ, ಶಾರುಕ್ ಖಾನ್ ಅಭಿನಯದ ದೇವದಾಸ್ ಸಿನಿಮಾದಲ್ಲಿ ಅವಾ ಅವರು ಖಾನ್ ಅಜ್ಜಿಯ ಪಾತ್ರದಲ್ಲಿ ಅಭಿನಯಿಸಿದ್ದರು.

ಡರ್ನಾ ಝರೂರಿ ಹೈ ಚಿತ್ರದಲ್ಲಿಯೂ ಅಜ್ಜಿ ಪಾತ್ರ ಮಾಡಿದ್ದ ಅವಾ ಅವರ ಕೊನೆಯ ಚಿತ್ರ  ಡಿಟೆಕ್ಟಿವ್ ನಾನಿ(2009). 1966ರಲ್ಲಿ ಟಾರು ಮುಖರ್ಜಿ ನಿರ್ದೇಶನದ ಬೆಂಗಾಲಿ ಸಿನಿಮಾ ರಾಮ್ ಧಕ್ಕಾ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. ಅಷ್ಟೇ ಅಲ್ಲ ಭಾರತೀಯ ಬಹುತೇಕ ಜಾಹೀರಾತುಗಳಲ್ಲಿ ಅವಾ ಚಕ್ರವರ್ತಿ ಹೆಸರು ಮಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next