ಏಳು ಬಣ್ಣ ಸೇರಿ ಬಿಳಿಯ ಬಣ್ಣವಾಯಿತು
ಹಾಡು ಗುನುಗುತ್ತಿದ್ದಂತೆ ಹೋಳಿ ಹಬ್ಬ ಬಂದೇ ಬಿಟ್ಟಿತು. ನಾನು ದಿವ್ಯ, ನನ್ನ ಜೀವನದ ಗುರಿ ಪೈಲಟ್ ಆಗಬೇಕೆಂದು. ಇದೇ ನಿಟ್ಟಿನಲ್ಲಿ ಪೀಸಾ ವಿಶ್ವವಿದ್ಯಾನಿಲಯದಲ್ಲಿ ಸ್ಪೇಸ್ ಎಂಜಿನಿಯರಿಂಗ್‌ನಲ್ಲಿ ಮಾಸ್ಟರ್ ಮಾಡುತ್ತಿದ್ದೇನೆ. ಭಾರತದ ನೆನಪು ಮರುಕಳಿಸುತ್ತಲೇ ಇರುತ್ತದೆ. ಅದರಲ್ಲೂ ನಮ್ಮ ಹಬ್ಬಗಳು ಬಂದಾಗ ಏನೋ ಬೇಸರ ಅಲ್ಲಿಲ್ಲವಲ್ಲ ಅನ್ನುವ ಕೊರಗು ಕಾಡುತ್ತದೆ.
Advertisement
ಇಟಲಿಯಲ್ಲಿ ಹೇಗಾದರೂ ಆಚರಿಸಬಹುದಾ ಹೋಳಿ ಹಬ್ಬ, ರಂಗುರಂಗಿನ ಹಬ್ಬ ಅಂದುಕೊಂಡಂತೆ ಸ್ನೇಹಿತರ ಕರೆ “ಕಲ್ ಹೋಳಿ ಖೇಲೇಂಗೆ’. ಹೌದು ಈ ಸಂತಸದ ಹಬ್ಬದಲ್ಲಿ ಭಾಗವಹಿಸಲು ಸುವರ್ಣಾವಕಾಶ. ಯಾರಿಗೆ ತಾನೇ ಬೇಡ ! ಹೋಳಿ ಹಬ್ಬ ಸುಖ ಸಂತೋಷ ತರುತ್ತದೆ. ಅದಕ್ಕಾಗಿ ವಿಶ್ವದಾದ್ಯಂತ ಇದನ್ನು ಆಚರಿಸುತ್ತಾರೆ. ಪೀಸಾ ಕೂಡ ಈ ಹಬ್ಬದಲ್ಲಿ ನಲಿದು ಕುಣಿಯಿತು !
ಆಚರಿಸಿದ ಜಾಗ ಕಡಲತೀರ! ತಣ್ಣಗಿನ ಗಾಳಿ ಸಮುದ್ರದಿಂದ ಬೀಸುತ್ತ ಚಳಿಯ ವಾತಾವರಣವಿದ್ದರೂ ಪಿಚಕಾರಿ ಇಂದ ಬಂದ ಬಣ್ಣ ಬಣ್ಣದ ನೀರು ಆನಂದದಿಂದ ಬೆಚ್ಚಗೆ ನಮ್ಮೆಲ್ಲರ ಮೇಲೆ ಬಿದ್ದಾಗ ಸ್ವರ್ಗಕ್ಕೆ ಮೂರುಗೇಣು ಅನ್ನಿಸಿತು. ಹೋಳಿ ಹಾಡುಗಳನ್ನು ಹಾಡುತ್ತ ನೃತ್ಯ ಮಾಡುತ್ತಿದ್ದರೆ ಕೆಳಗಿನ ಮರಳೇ ವೇದಿಕೆ ಆಗಿತ್ತು. ನಮ್ಮ ಜತೆ ಸಮುದ್ರದ ಅಲೆಗಳು ಸೇರಿ ಕುಣಿದವು. ಅಂತೂ ನಕ್ಕು ನಲಿದು ಸಿಹಿ ಸವಿದೆವು. ನಮ್ಮ ದೇಶ ಹಬ್ಬಗಳಿಂದಲೂ ಹೊರದೇಶಗಳಲ್ಲಿ ಹೆಸರುವಾಸಿ. ಹಬ್ಬಗಳ ಗೂಡಾರ್ಥ ನಿಜಕ್ಕೂ ಎಲ್ಲರಲ್ಲಿ ಆಸಕ್ತಿ ಹುಟ್ಟಿಸುತ್ತದೆ. “ಹೋಳಿ ದಹನ’ದ ಸಂದೇಶ ಕೆಟ್ಟದ್ದನ್ನು ಸುಡುವುದು ಸತ್ಯಕ್ಕೆ ಎಂದೂ ಜಯ ಅಂತ ಸಾರುವುದು. ನಾವು ಭಾರತೀಯರು ಎಲ್ಲೇ ಇರಲಿ ಹೇಗೇ ಇರಲಿ ನಮ್ಮ ಹಬ್ಬಗಳನ್ನು ಆಚರಿಸುವುದಷ್ಟೇ ಅಲ್ಲದೆ ವಿದೇಶಿಯರಲ್ಲೂ ಹಂಚಿಕೊಳ್ಳುತ್ತೇವೆ. ಇದಕ್ಕೆ ಸದೃಶ ಕಡಲತೀರದಲ್ಲಿ ಹೋಳಿ ಸಂಭ್ರಮ. ನೆನಪಿನ ಬುಟ್ಟಿಯಲ್ಲಿ ಅಚ್ಚಳಿಯದಂತೆ ಮನೆಮಾಡಿತು.
Related Articles
Advertisement