Advertisement

Desi Swara: ಎಲ್ಲೆಲ್ಲೂ ರಾಮನಾಮ…ಶ್ರೀರಾಮನ ಆಗಮನದ ಸಂತಸ

01:32 PM Jan 27, 2024 | Nagendra Trasi |

ಇತ್ತೀಚಿಗೆ ಯಾಂತ್ರಿಕ ಜೀವನ ತನ್ನ ಉಚ್ಚ್ರಾಯ ಸ್ಥಿತಿಯನ್ನು ತಲುಪಿದ್ದು ಕ್ಷಣಕ್ಷಣವು ಕಿರಿಕಿರಿಯಂತೆ ಭಾಸವಾಗಾಲಾರಂಭಿಸಿದೆ. ಎಲ್ಲಾ ಕೆಲಸಗಳಿಗೂ ತಾತ್ಕಾಲಿಕವಾಗಿ ರಜೆಯನ್ನು ಘೋಷಿಸಿ ಇಲ್ಲವೆ ಮುಂದೂಡಿ ಮನಸಿನ ಬೇಸರವನ್ನು ಹೋಗಲಾಡಿಸಿ ಕೊಳ್ಳುವ ನಿರತ ಪ್ರಯತ್ನದಲ್ಲಿ ನಾನಿದ್ದು ಕಳೆದ ಹಲವಾರು ತಿಂಗಳಿನಿಂದ ಸಾಕಷ್ಟು ಸಮಯವನ್ನು ಯಾವುದೆ ಉಪಯುಕ್ತವಾದ ಕೇಲಸವನ್ನು ಮಾಡದೆ ಕಳೆಯುತ್ತಿರುವುದು ರೇಜಿಗೆ ಹುಟ್ಟಿಸುತ್ತಿದೆ ಕಾರಣ ಮಾಡುವ ಕೆಲಸದಲ್ಲಿ ಮಡವುಗಟ್ಟಿರುವ ಏಕತಾನತೆ ಮತ್ತು ಅದು ಸೃಷ್ಟಿಸಿರುವ ಇಂತಹ ಒಂದು ವಿಕೃತ ಸಮಯ ಮತ್ತು ಸಂದರ್ಭದೊಂದಿಗೆ ನಾನು ಸೆಣಸುತ್ತಿದ್ದರೆ ಇನ್ನೂ ಮಕ್ಕಳು ಪ್ರತಿಯೊಂದನ್ನು ಪ್ರಶ್ನಿಸುವ, ಬುದ್ಧಿವಾದ ಗಳೆಲ್ಲವನ್ನೂ ಹಾಸ್ಯಾಸ್ಪದವಾಗಿ ತೆಗೆದುಕೊಳ್ಳುವ ಮತ್ತು ಪೈಪೋಟಿಗೆ ಇಳಿದು ಕಾದಾಡುವ ಕಾಲಘಟ್ಟದಲ್ಲಿದ್ದಾರೆ.

Advertisement

ಹಾಗಾಗಿ ಮನೆಯಲ್ಲಿ ಕ್ಷಣಕ್ಷಣವೂ ರೋಚಕ, ಯಾರು ಎಲ್ಲಿ ಕಿರುಚಿಕೊಳ್ಳುವರೋ? ಎಲ್ಲಿ ಹೊಡೆದಾಡಿಕೊಳ್ಳುವರೋ? ಯಾವಾಗ ಅಳು ಶುರುವಾಗುವುದೋ? ಅಬ್ಬಬ್ಬಾ ಒಂದಿ ರೀತಿಯಲ್ಲಿ ಚೈನಾ ಬಜಾರಿನ ಸರಕಿನ ಹಾಗೆ ಹೊರಗಡೆಯಿಂದ ನೋಡಲು ಚೆಂದ ಆದರೆ ಒಳಗಡೆಯಿಂದ ಮಾಲು ಹೇಗೆ ಕಳಪೆಯೊ ಹಾಗೆ ಮನೆ ಮತ್ತು ಮನೆಯ ಒಳಗೆ ಕಳೆಯುವ ಸಮಯದ್ದಾಗಿದೆ. ದುರಾದೃಷ್ಟಕ್ಕೆ ಅತಿ ಹೆಚ್ಚು ಸಮಯ ಮನೆಯಲ್ಲೆ ಕಳೆಯುವ ಅಭ್ಯಾಸವಾಗಿ ಮನಸ್ಸು ಹೊರಗಡೆ ಹೋಗಲು ಹಾತೊರೆದರು ಸೋಮಾರಿತನ ಸದಾ ತನ್ನ ಗೆಲುವಿನ ನಗೆಯನ್ನು ಬೀರುತ್ತಿದೆ.

ಸನ್ಮಿತ್ರರು ಬರಹಗಳಿಗಾಗಿ ಕೇಳಿ ಕೇಳಿ ಬೇಸತ್ತು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಿ ಇತ್ತ ಸುಳಿಯುವುದನ್ನು ನಿಲ್ಲಿಸಿದ್ದಂತು ನಿಜ. ಹಾಗಾಗಿ ಮರಳಿ ಯತ್ನವ ಮಾಡು ಮರಳಿ ಯತ್ನವ ಮಾಡು ಎಂದು ಯತ್ನ ಪ್ರಯತ್ನಗಳೆಲ್ಲವೂ ಮಾಡಿ ಮೊಬೈಲಿನ ಮೂಲೆ ಮೂಲೆಯಲ್ಲಿ ಅರ್ಧಂಬರ್ಧ ಬರೆದು ಬಿಟ್ಟ ಬರಹಗಳು ಹೊರಳಾಡಿ ನರಳಾಡಿ ನರಕ ಯಾತನೆಯನ್ನು ಅನುಭವಿಸಿ ನೋವಿನಿಂದ ಶಪಿಸುತ್ತಿವೆ ಎಂದೆನಿಸಲಾಗಿ ಮತ್ತೊಮ್ಮೆ ಬರೆಯಲು ಕುಳಿತ ಪರಿಣಾಮವಿದು.

ಸಾಮಾನ್ಯವಾಗಿ ಲಂಡನ್ನಿನಲ್ಲಿ ಭಾರತೀಯ ಸಮುದಾಯದ ಅದರಲ್ಲೂ ಕನ್ನಡಕ್ಕೆ ಕನ್ನಡಿಗರಿಗೆ ಸಂಬಂಧಿಸಿದ ಆಗುಹೋಗುಗಳ ಬಗ್ಗೆ, ಆಚರಿಸುವ ಹಬ್ಬ ಹರಿದಿನಗಳ ಬಗ್ಗೆ,ಬೇಟಿ ನೀಡಿದ ಸ್ಥಳಗಳ ಬಗ್ಗೆ, ಚಿಕ್ಕ ಪುಟ್ಟ ಕಾರ್ಯಕ್ರಮಗಳು ಬಗ್ಗೆ ಬರೆದ ಬರಹಗಳು ಏಕತಾನತೆಯಿಂದ ಕೂಡಿದಂತಾಗಿ ನಿರುತ್ಸಾಹಗೊಂಡಿದ್ದೆ.ಯಾವೊಂದು ವಿಷಯ, ವ್ಯಕ್ತಿ, ಸ್ಥಳ, ಕಾರ್ಯಕ್ರಮ ಮತ್ತು ವಿಶೇಷತೆಗಳು ಕೈ ಹಿಡಿಯದೆ ಬರೆಯುವುದನ್ನು ನಿಲ್ಲಿಸಿ ಹಲವಾರು ತಿಂಗಳುಗಳಾಗಿತ್ತು ಹಾಗಾಗಿ ಈ ಬಾರಿ 500 ವರ್ಷಗಳ ನಂತರ ಮರಳಿ ಮನೆಗೆ ಬರುತ್ತಿರುವ ಆ ಶ್ರೀ ರಾಮನಲ್ಲಿ ಮೊರೆ ಹೋಗಿ ಮತ್ತೆ ಬರೆಯಲು ಪ್ರಯತ್ನಿಸುತ್ತಿದ್ದೇನೆ.

Advertisement

ಇಂದಿನ ನಾಸ್ತಿಕ ವೃಂದ ಪ್ರಶ್ನಿಸುವ ರಾಮಾಯಣದ ಶ್ರೀ ರಾಮನ ಅಸ್ಮಿತೆಯ ಬಗ್ಗೆ ಕನ್ನಡದ ಹರಿದಾಸ ತತ್ವ ಪ್ರತಿಪಾದಕರಲ್ಲಿ ಪ್ರಮುಖರಾದ ಶ್ರೀ ವಿಜಯದಾಸರು 16ನೇ ಶತಮಾನದಲ್ಲಿ ರಚಿಸಿದ ತಮ್ಮ ಒಂದು ರಚನೆಯಲ್ಲಿ ‘ರಾಮ ರಾಮ ಎಂಬೆರಡಾಕ್ಷರ ಪ್ರೇಮದಿ ಸಲಹಿತು ಸುಜನರನು’ ಎಂದು ಬರೆದು ಹಾಡಿದ್ದಾರೆ. ಸಾಮಾನ್ಯವಾಗಿ ದಾಸರು ತಮ್ಮ ಕಾಲಮಾನದಲ್ಲಿ ಜೀವಿಸಿದ್ದ ಮಹಾತ್ಮರ ನಡೆನುಡಿಗಳನ್ನು, ಅವರು ಆರಾಧಿಸುತ್ತಿದ್ದ ದೇವರುಗಳನ್ನು, ಆ ದಿನಮಾನಗಳಲ್ಲಿ ನಡೆದ ಆಗು ಹೋಗುಗಳನ್ನು, ಜನ ಮಾನಸದಲ್ಲಿ ಓಡಾಡುತ್ತಿದ್ದ ವಿಷಯಗಳನ್ನು, ದೇವ ಮಾನವ ನಡುವಿನ ಸಂಬಂಧಗಳನ್ನು ಸುಧಾರಿಸಲು ಅನುಸರಿಸಬಹುದಾದ ಮಾರ್ಗೋಪಾಯಗಳನ್ನು ತಮ್ಮ ಕೀರ್ತನೆಗಳ ಮೂಲಕ ಜಗತ್ತಿಗೆ ಸಾರಿದವರು.

ಬಾಲ್ಯದಲ್ಲಿ ರಾಮಾಯಣವನ್ನು ಟೀವಿಯಲ್ಲಿ ನೋಡಿ ಪುರಾಣ ಪುಣ್ಯ ಕಥೆಗಳನ್ನು ಮಠ ಮಂದಿರಗಳಲ್ಲಿ ಕೇಳಿ, ಹಾಡು ಭಜನೆಗಳಲ್ಲಿ ಭಾಗವಹಿಸಿ ಬೆಳೆದದ್ದಲ್ಲದೆ,ತಲೆತಲಾಂತರದಿಂದ ಮನೆಯಲ್ಲಿ ಪ್ರತಿ ಶನಿವಾರವು ತಪ್ಪದೆ ರಾಮನಾಮ ಮಹಿಮೆ ಮತ್ತು ಕಥೆಯ ಪಾರಾಯಣ ಮಾಡಿಕೊಂಡು ಬಂದಿದ್ದನ್ನು ನೋಡಿ ಅದನ್ನು ನಮಗೆ ಪಾಲಿಸಲು ಹೇಳಿದಾಗ ಕೆಲವೊಮ್ಮೆ ಮನದಲ್ಲಿ ಎಲ್ಲಿಯ ಅಯೋಧ್ಯೆ, ಎಲ್ಲಿಯ ರಾಮ ಎಲ್ಲಿಯ ಸುರಪುರದ ಬ್ರಾಹ್ಮಣ ಎಂದೆನಿಸಿದರೂ ಸೂಕ್ಷ್ಮವಾಗಿ ಗಮನಿಸಿದಾಗ ಕಥೆಯಲ್ಲಿ ಅಡಗಿದ ರಾಮನೆಡೆಗಿನ ಭಕ್ತಿ, ರಾಮ ನಾಮದಲ್ಲಿ ಅಡಗಿರುವ ಶಕ್ತಿ, ರಾಮ ತಾನು ನಡೆದು ತೋರಿದ ಜೀವನದಲ್ಲಿ ಅಳವಡಿಸಿ ಕೈಗೊಳ್ಳಬಹುದಾದ ಆದರ್ಶಗಳ ಬಗ್ಗೆ ಎಷ್ಟು ಬರೆದರೂ ಕಡಿಮೆಯೇ.ಅದನ್ನು ಅತ್ಯಂತ ಸರಳವಾಗಿ ಹೇಳಬೇಕೆಂದರೆ 14ನೇ ಶತಮಾನದಲ್ಲಿ ಪುರಂದರ ದಾಸರು ತಮ್ಮ ಅನುಭವವನ್ನು ಅವರ ಒಂದು ಕೃತಿಯಲ್ಲಿ ಮನುಜ ಕುಲಕ್ಕೆ ಮಾರ್ಗದರ್ಶನದಂತೆ ಬಿಟ್ಟು ಹೋಗಿದ್ದಾರೆ. ಅದೇನೆಂದರೆ

ರಾಮ ಮಂತ್ರವ ಜಪಿಸೋ |
ಹೇ ಮಾನವ ||
ಆ ಮಂತ್ರ ಈ ಮಂತ್ರ ಎನುತ |
ನೀ ಕೆಡಬೇಡ…||

ಕುಲಹೀನನಾದರು ಕೂಗಿ ಜಪಿಸುವ ಮಂತ್ರ |
ಸಾಲೂ ಬಿದಿಯೋಳು ನಿಂದು ಸಾರಿ ಪೊಗಳುವ ಮಂತ್ರ ||
ಹಲವು ಪಾಪಂಗಳ ಹರಿಸುವ ಮಂತ್ರ ||

ಸುಲಭದಿಂದಲ್ಲಿ ಸ್ವರ್ಗ ಸೂರೆಗೊಂಬುವ ಮಂತ್ರ |
ಸ್ಥಾನ ಮಾನಂಗಳಿಗೆ ಸಾಧನದ ಮಂತ್ರ |
ಎನೆಂಬೆ ವಿಭೀಷಣಗೆ ಪಟ್ಟ ಕಟ್ಟಿದ ಮಂತ್ರ |
ಸಕಲ ವೇದಂಗಳಿಗೆ ಸಾರವೆನಿಪಮಂತ್ರ |
ಮುಕ್ತಿ ಮಾರ್ಗಕ್ಕೆ ಇದು ಮೂಲ ಮಂತ್ರ |

ಭಕ್ತಿ ಮಾರ್ಗಕ್ಕೆ ಇದು ದಾರಿ ತೋರುವ ಮಂತ್ರ
ಭಕ್ತವತ್ಸಲ ಪುರಂದರ ವಿಠಲನ ಮಂತ್ರ |

ಹಾಗಿರುವಾಗ, ಎಷ್ಟೆ ವಾದ ಮಾಡಿದರೂ, ಏನೇ ವಿವಾದಗಳನ್ನು ಸೃಷ್ಟಿಸಿದರೂ, ಯುಗಪುರುಷ, ಮರ್ಯಾದಾ ಪುರುಷೋತ್ತಮ ಎಂದು ಕರೆಸಿಕೊಂಡಿರುವ, ಸಾವಿರಾರು ವರ್ಷಗಳಿಂದ ಕಣ ಕಣದಲ್ಲೂ ಕ್ಷಣ ಕ್ಷಣದಲ್ಲೂ ತನ್ನ ಅಸ್ಥಿತ್ವವನ್ನು ಖಚಿತ ಪಡಿಸುತ್ತಾ ತಲೆತಲಾಂತರಗಳಿಂದ ಮನೆ ಮನೆಗಳಲ್ಲಿ ಮನೆ ಮನೆಗಳಲ್ಲಿ ಮಠ ಮಾನ್ಯ ಗಳಲ್ಲಿ ಪೂಜೆಗೈಸಿಕೊಳ್ಳುತ್ತಿರುವ ಶ್ರೀರಾಮ ತನ್ನ ಊರಿಗೆ ಬರುವ ನೆಂದರೆ ? ಸಾಮಾನ್ಯವಾಗಿ ಬಂಧು ಬಾಂಧವರು ಮನೆಗೆ ಬರುತ್ತಾರೆ ಎಂದರೇನೆ ಅತ್ಯಂತ ಸಂಭ್ರಮ ಪಡುವ ನಾವು ಇನ್ನೂ ನಮ್ಮ ನಾಡಿನ ಚೇತನ ಮೂರ್ತಿಯಾದ ಆ ಶ್ರೀ ರಾಮ 500 ವರ್ಷಗಳ ಅನಂತರ ಮರಳಿ ತನ್ನ ಜನ್ಮಸ್ಥಳದಲ್ಲಿನ ನೂತನ ಗೃಹ ಪ್ರವೇಶವನ್ನು ಮಾಡುತ್ತಿದ್ದಾನೆ ಎಂದರೆ ಸಂಭ್ರಮದ ಪರಾಕಾಷ್ಟೆ ಕೇಳಬೇಕೆ ? ಕೇವಲ ಭಾರತದಷ್ಟೇ ಅಲ್ಲಾ ಜಗತ್ತಿನ ಮೂಲೆ ಮೂಲೆಯಲ್ಲೂ ಅದರಲ್ಲೂ ವಿಶೇಷವಾಗಿ ಯುನೈಟೆಡ್‌ ಕಿಂಗ್ಡಮ್‌ ನಲ್ಲಿಯೂ ಅದರ ಸಂಭ್ರಮ ಹೇಳತೀರದು.

Southa ಲಂಡನ್‌ ನಗರದ ವಿವಿಧ ಪ್ರದೇಶಗಳಲ್ಲಿ ಅದರಲ್ಲೂ ಮುಖ್ಯವಾಗಿ ಹತ್ತಿರದ ಸೌತ್‌ಹಾಲ್‌ (Southa) ನ ಶ್ರೀರಾಮ ಮಂದಿರದಲ್ಲಿ, ಹೌಂಸ್ಲೋ (Hou slow) ನ ಲಕ್ಷ್ಮಿ ನಾರಾಯಣ ಮಂದಿರದಲ್ಲಿ, ಸ್ಲೌ (Slough)ನ ಹಿಂದೂ ಮಂದಿರ ಮತ್ತು GB SRS ನ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ, ಈಲಿಂಗ್‌ (Ealing), ವೆಂಬ್ಲಿಯಲ್ಲಿ (Wembley), ಹ್ಯಾರೋ (Harrow) ನಲ್ಲಿ, ಬ್ರಂಟಫರ್ಡ ನ ಹನುಮಾನ್‌ ಹಿಂದೂ ಮಂದಿರದಲ್ಲಿ, ಯುಕೆ ಯು ಪ್ರತಿಯೊಂದು ಮಂದಿರಗಳಲ್ಲಿ, ಭಾರತೀಯ ಸಮುದಾಯಕ್ಕೆ ಸೇರಿದ ಹಲವಾರು ಸಂಘ ಸಂಸ್ಥೆಗಳ ನೇತೃತ್ವದಲ್ಲಿ, ವಿಶೇಷವಾಗಿ ‘ಕರುನಾಡ ಅನಿವಾಸಿ ಹಿಂದೂಗಳ ಒಕ್ಕೂಟ(KAHO)ದ ವತಿಯಿಂದ, ಓವರ್ಸೀ ಸ್‌ ಫ್ರೆಂಡ್ಸ್‌ ಆಫ್‌ ಬಿಜೆಪಿ (OFBJP) ಹಾಗೂ ಕಳೆದ 52 ವರ್ಷಗಳಿಂದ ಸಮರ್ಪಕವಾಗಿ ಯೋಗಾ ಮತ್ತು ಸನಾತನ ಹಿಂದು ಧರ್ಮದ ಬಗ್ಗೆ ತಿಳುವಳಿಕೆಯನ್ನು ಮೂಡಿಸುತ್ತಿರುವ ‘ಬ್ರಹ್ಮಋಷಿ ಆಶ್ರಮ ಮಿಷನ್‌’ (Brahmrishi Ashram Missio)ನ ಸಾದ್ವಿ ಶ್ರೀ ಸೂರ್ಯ ಪ್ರಭಾ ದಿ ಯವರ ನೇತೃತ್ವದಲ್ಲಿ ಒಂದು ವಾರಗಳ ಕಾಲ ವಿವಿಧ ಕಾರ್ಯಕ್ರಮಗಳೊಂದಿಗೆ 24 ಗಂಟೆಗಳ ಕಾಲ ತುಳಸಿ ದಾಸರು ರಚಿಸಿದ ‘ರಾಮ ಚರಿತ ಮಾನಸ’ ಪಠಣ, ಭಜನೆ ಕಳಶ ಪೂಜೆಯೊಂದಿಗೆ ಸಂಭ್ರಮದಿಂದ ಆಚರಿಸಿ ಆ ಶ್ರೀರಾಮ ಸಕಲ ಸದ್ಭಕ್ತಾದಿಗಳಿಗೂ ಸನ್ಮಂಗಳವನ್ನು ಉಂಟುಮಾಡಲಿ ಎಂದು ಪ್ರಾರ್ಥಿಸಿ ಸಂಭ್ರಮಿಸಲಾಯಿತು.

*ಗೋವರ್ಧನ ಗಿರಿ ಜೋಷಿ, ಲಂಡನ್‌

Advertisement

Udayavani is now on Telegram. Click here to join our channel and stay updated with the latest news.

Next