Advertisement

Desi Swara: ಕರ್ನಾಟಕ ಸಂಘ ಕತಾರ್‌-ಅಂತಾರಾಷ್ಟ್ರೀಯ ಯೋಗ ದಿನಾಚರಣೆ

01:41 PM Jul 13, 2024 | Team Udayavani |

ದೋಹಾ:ಕರ್ನಾಟಕ ಸಂಘ ಕತಾರ್‌ನ ನೇತೃತ್ವದಲ್ಲಿ 10ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ದೋಹಾದ ಹ್ಯಾಮಿಲ್ಟನ್‌ ಶಾಲಾ ಆವರಣದಲ್ಲಿ ಜೂ.22ರಂದು ಆಚರಿಸಲಾಯಿತು. ಸಂಘದ ಖಜಾಂಚಿಗಳಾದ ಪ್ರದೀಪ ಅವರು ಪ್ರಾರಂಭಿಕ ನುಡಿಗಳೊಂದಿಗೆ ಪ್ರಧಾನ ಕಾರ್ಯದರ್ಶಿಗಳಾದ ಕುಮಾರಸ್ವಾಮಿಯವರನ್ನು ಕಾರ್ಯಕ್ರಮ ನಿರ್ವಹಿಸಲು ಆಹ್ವಾನಿಸಿದರು.

Advertisement

ಅಧ್ಯಕ್ಷರಾದ ರವಿ ಶೆಟ್ಟಿಯವರು ಎಲ್ಲರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಸ್ವಾಮಿ ವಿವೇಕಾನಂದರ ಮಾತಿನಂತೆ ನಿರಂತರ ಅಭ್ಯಾಸದಿಂದ ಯೋಗ ಪ್ರಾಪ್ತಿ ಹಾಗೂ ಸಾಮಾಜಿಕ ಸಾಮರಸ್ಯ, ಸುಖಮಯ ಜೀವನಕ್ಕೆ ಆಗುವ ಪ್ರಯೋಜನಗಳ ಹಾಗೂ ಯೋಗದ ಮಹತ್ವನ್ನು ತಿಳಿಸಿದರು. ಅಧ್ಯಕ್ಷರು, ಸಲಹಾ ಸಮಿತಿ ಸದಸ್ಯರು, ಹಿರಿಯರು, ಕರ್ನಾಟಕ ಮೂಲದ ಸೋದರ ಸಂಘಗಳ ಅಧ್ಯಕ್ಷರೆಲ್ಲ ಜ್ಯೋತಿ ಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಸಂಘದ ಮಾಜಿ ಆಡಳಿತ ಮಂಡಳಿ ಸದಸ್ಯರು ಹಾಗೂ ಯೋಗ ತರಬೇತುದಾರರಾದ ಕಿಶೋರ್‌ ವಿ. ಅವರ ಮುಂದಾಳತ್ವದಲ್ಲಿ ಸುಮಾರು 100ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದ ಸಂಘದ ಸದಸ್ಯರು ಹಾಗೂ ಅವರುಗಳ ಜತೆ ಆಗಮಿಸಿದ ಅನಿವಾಸಿ ಕನ್ನಡಿಗರು ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡರು, ಯೋಗಾಭ್ಯಾಸದ ಬಳಿಕ ಶ್ವೇತ ದರೋಕರ್‌ ಮತ್ತು ತಂಡದವರು ಆಧುನಿಕ ಯೋಗ ಪ್ರದರ್ಶಿಸಿದರು.

ಯೋಗ ಕಲಿಸಿದ ಕಿಶೋರವರಿಗೆ, ಯೋಗ ಪ್ರದರ್ಶಿಸಿದ ಶ್ವೇತರವರಿಗೆ ಮತ್ತು ಶಾಲೆಯ ಆವರಣ ನೀಡಿ ಸಹಕರಿಸಿದ ಆಸ್ಟ್ರೋಕ್‌ ನ್ಪೋಟ್ಸ್‌ನ ಅಂಥೋನಿಯವರಿಗೆ ಅಧ್ಯಕ್ಷರು ಸ್ಮರಣಿಕೆ ನೀಡಿ ಗೌರವಿಸಿದರು. ಸಾಂಸ್ಕೃತಿಕ ಕಾರ್ಯದರ್ಶಿಗಳಾದ ಕೆ. ಟಿ. ಸೌಮ್ಯ ಅವರು ವಂದನಾರ್ಪಣೆ ಸಲ್ಲಿಸಿದರು.

ಸಲಹಾ ಸಮಿತಿಯ ಸದಸ್ಯರುಗಳಾದ ಅರುಣ್‌ ಕುಮಾರ್‌, ವಿ.ಎಸ್‌.ಮನ್ನಂಗಿ, ದೀಪಕ್‌ ಶೆಟ್ಟಿ, ಮಧು ಎಚ್‌.ಕೆ. ಡಾ| ಸಂಜಯ ಕುದರಿ, ಭಾರತೀಯ ಸಾಂಸ್ಕೃತಿಕ ಕೇಂದ್ರದ ಮಾಜಿ ಅಧ್ಯಕ್ಷೆ ಮಿಲನ್‌ ಅರುಣ್‌, ಸಂಘದ ಹಿರಿಯ ಸದಸ್ಯರ ಜತೆಗೆ ಕರ್ನಾಟಕ ಮೂಲದ ಸೋದರ ಸಂಘಗಳ ಅಧ್ಯಕ್ಷರು ಮತ್ತು ಸಮಿತಿ ಸದಸ್ಯರು ಪಾಲ್ಗೊಂಡು ಕಾರ್ಯಕ್ರಮಕ್ಕೆ ಮೆರುಗು ನೀಡಿದರು. ಸಮಿತಿಯ ಎಲ್ಲ ಸದಸ್ಯರು, ಸ್ವಯಂ ಸೇವಕರು ಕಾರ್ಯಕ್ರಮದ ಯಶಸ್ಸಿಗೆ ಸಹಕಾರ ನೀಡಿದರು.

Advertisement

ಕಾರ್ಯಕ್ರಮವನ್ನು ಸಭಿಕರೆಲ್ಲರು ಆರೋಗ್ಯಕರ ಹಾಗೂ ಆಹ್ಲಾದಕರ ರುಚಿ ನೀಡಿದ ರಾಗಿ ಪಾನೀಯ ಸೇವನೆಯೊಂದಿಗೆ ಮುಕ್ತಾಯಗೊಳಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next