Advertisement
ಸಿದ್ಧಾಂತ್ ಅವರು ಕಳೆದ 6 ವರ್ಷಗಳಿಂದ ಆನ್‌ಲೈನ್ ತರಗತಿಗಳ ಮೂಲಕ ಗುರು ನಾದಬ್ರಹ್ಮ ಇ.ಆರ್.ಜನಾರ್ದನ್ (ಪದ್ಮಶ್ರೀ ಕದ್ರಿ ಗೋಪಾಲನಾಥ್ ಅವರ ಶಿಷ್ಯ) ಅವರಿಂದ ಸ್ಯಾಕ್ಸೋಫೋನ್ ಕಲಿಯುತ್ತಿದ್ದಾರೆ. ಈ ಕಾರ್ಯಕ್ರಮ ನಡೆಯುವ ಕೇವಲ ಮೂರು ವಾರಗಳ ಮೊದಲು ಅವರು ತಮ್ಮ ಸಂಗೀತ ಗುರುಗಳನ್ನು ಅವರು ಮೊದಲ ಬಾರಿಗೆ ಭೇಟಿಯಾದರು.
Related Articles
Advertisement
ಈ ರೀತಿಯಾಗಿ ಸ್ಯಾಕ್ಸೋಫೋನ್ ಮತ್ತು ಭರತನಾಟ್ಯ ಪ್ರದರ್ಶನಗಳನ್ನು ಒಟ್ಟಿಗೆ ಸಂಯೋಜಿಸಿದ ವಿಶಿಷ್ಟ ಕಾರ್ಯಕ್ರಮ ಇದಾಗಿತ್ತು. “ಭೋ ಶಂಭೋ’ ಮತ್ತು “ತಿಲ್ಲಾನ’ಗಳಿಗೆ ಸುಮೇಧಾ ಭರತನಾಟ್ಯ ಮಾಡಿದರೆ, ಸಿದ್ಧಾಂತ್ ಸ್ಯಾಕ್ಸೋಫೋನಿನಲ್ಲಿ ಆ ಹಾಡುಗಳನ್ನು ನುಡಿಸಿದರು. ನಾದ-ನೃತ್ಯ ಪ್ರದರ್ಶನಗಳನ್ನು ಒಂದೇ ವೇದಿಕೆಯಲ್ಲಿ ನೋಡುವುದು ಸಭಿಕರ ಕಣ್ಣುಗಳಿಗೆ ರಸದೌತಣವಾಗಿತ್ತು.
ಅಂದಿನ ಈ ಕಾರ್ಯಕ್ರಮದಲ್ಲಿ 550ಕ್ಕೂ ಹೆಚ್ಚು ಜನರು ಆಗಮಿಸಿ, ಸ್ಯಾಕ್ಸೋಫೋನ್ ಮತ್ತು ಭರತನಾಟ್ಯ ಮಿಳಿತವಾದ ಅದ್ಭುತ ಕಾರ್ಯಕ್ರಮವನ್ನು ಆನಂದಿಸಿದರು. ಅಮೆರಿಕದ ರಾಜಕೀಯ ನಾಯಕರಾಗಿರುವ ರಾಜಾ ಕೃಷ್ಣಮೂರ್ತಿ ಅವರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಎಲ್ಲೋ ಇರುವ ಗುರುಗಳು, ಮತ್ತೆಲ್ಲೋ ಇರುವ ಶಿಷ್ಯ! ಒಟ್ಟಿನಲ್ಲಿ ಕಲಿಯುವ ಆಸೆ ಇದ್ದವರು ಅಂತರ್ಜಾಲದ ಸಹಾಯದಿಂದ ಏನೆಲ್ಲ ಸಾಧಿಸಬಹುದು ಎಂಬುದಕ್ಕೆ ಈ ಕಾರ್ಯಕ್ರಮ ಸಾಕ್ಷಿಯಾಯಿತು.
ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿದ ಪೋಷಕರಾದ ಶ್ರೀಶ ಜಯ ಸೀತಾರಾಮ್ ಮತ್ತು ಸುಪ್ರಿಯಾ ಸುಬ್ಬರಾವ್ ಅವರಿಗೆ ಅಭಿನಂದನೆಗಳು. ಸಿದ್ಧಾಂತ್ ಮತ್ತು ಸುಮೇಧಾ ಅವರು ಸಂಗೀತ, ನೃತ್ಯ ವಿದ್ಯೆಗಳಲ್ಲಿ ಮತ್ತಷ್ಟು ಪ್ರಗತಿ ಸಾಧಿಸಲಿ, ಅವರಿಗೆ ಎಲ್ಲ ರೀತಿಯ ಯಶಸ್ಸು ಸಿಗಲಿ ಎಂದು ಹಾರೈಸೋಣ.
ವರದಿ: ತ್ರಿವೇಣಿ ರಾವ್, ಶಿಕಾಗೋ