Advertisement

ಹೊನ್ನುಡಿ: ಜೀವನಾನುಭವ ಮುಖ್ಯ-ಭರವಸೆಯೊಂದು ಬಾಳಿನ ಆಶಾಕಿರಣವಿದ್ದಂತೆ…

01:05 PM Aug 31, 2024 | Team Udayavani |

ನೀರು ಹರಿದು ಹೋಗುವಾಗ ಯಾವುದೇ ತಡೆ ಬಂದರೂ ಪರ್ಯಾಯ ಮಾರ್ಗವನ್ನು ಸೃಷ್ಟಿಸಿಕೊಂಡು ಹೋಗುವಂತೆ ನಾವು ಜೀವನದಲ್ಲಿ ಯಾವುದೇ ಸಮಸ್ಯೆಗಳು ಬಂದಾಗ ಪರ್ಯಾಯ ಮಾರ್ಗಗಳನ್ನು ಅನುಸರಿಸಿ ಕೊಂಡು ದೃಢಚಿತ್ತ, ಬದ್ಧತೆಯಿಂದ ಮುಂದುವರಿಯುವುದು ಗುರಿ ಸಾಧನೆಗೆ ಪೂರಕ.

Advertisement

ಯಾವುದೇ ಒಂದು ಸಮಸ್ಯೆಯೂ ಶಾಶ್ವತವಲ್ಲ. ಪರಿಹಾರವೆಂಬುದು ಇದ್ದೇ ಇರುತ್ತದೆ. ಕೆಲ ವೊಂದು ಸಮಸ್ಯೆಗಳನ್ನು ನಿರ್ಲಕ್ಷಿಸುವುದರ ಮೂಲಕ ಪರಿಹರಿಸಿಕೊಳ್ಳಬಹುದಾದರೆ, ಇನ್ನು ಕೆಲವು ಸಮಸ್ಯೆಗಳಿಗೆ ಉಪಾಯದಿಂದ ಮುಕ್ತಿ ಕಂಡುಕೊಳ್ಳಬಹುದು. ಆದರೆ ಇವುಗಳಿಗೆಲ್ಲ ಜೀವನಾನುಭವ ಎಂಬುದು ಅತೀ ಮುಖ್ಯ.

ಜೀವನಾನುಭವದಿಂದ ಪಕ್ವವಾದಂತೆ ವ್ಯಕ್ತಿ ಸವಾಲು, ಸಮಸ್ಯೆಗಳನ್ನು ಎದುರಿಸುವ ಮತ್ತು ಪರಿಹರಿಸುವ ಬಗ್ಗೆ ತನ್ನಿಂದ ತಾನಾಗಿಯೇ ಕಲಿ ತು ಕೊಳ್ಳುತ್ತಾನೆ. ಉಪಾಯದಿಂದ ಕಠಿನ ಸವಾ ಲುಗಳನ್ನು ಎದುರಿಸಬಹುದು.

ಸಮಸ್ಯೆಗಳು ಬಂದಾಗ ಅದರ ಬಗ್ಗೆ ಚಿಂತಿಸುತ್ತಾ ನಮ್ಮ ಸಾಮರ್ಥ್ಯದ ಕುರಿತಾಗಿ ಇರುವ ಭರವ ಸೆಯನ್ನು ಕಳೆದುಕೊಳ್ಳಬಾರದು. ಬದಲಾಗಿ ಅದನ್ನು ಧೈರ್ಯದಿಂದ ಎದುರಿಸುವ ಮನೋಭಾವ ಬೆಳೆಸಿಕೊಳ್ಳಬೇಕಿದೆ. ಭರವಸೆಯೊಂದು ಬಾಳಿನ ಆಶಾಕಿರಣವಿ ದ್ದಂತೆ. ಯಾವುದೇ ರೀತಿಯ ಸವಾಲುಗಳು ಎದುರಾದರೂ ಗೆಲ್ಲುವ ಭರವಸೆಯಿಂದ ಮುನ್ನಡೆಯಬೇಕು.

Advertisement

ಬದುಕಿನ ಸಂಕಷ್ಟದಲ್ಲಿ ಹೆಬ್ಬಂಡೆಯಾಗಿ ಕಷ್ಟಕಾರ್ಪಣ್ಯಗಳನ್ನು ಹಿಮ್ಮೆಟ್ಟಿಸುವ ಶಕ್ತಿಯೇ ಭರವಸೆ. ನಮ್ಮ ಜೀವನ ಇತರರಿಗೆ ಬೆಳಕಾಗುವುದು ನಿಜವಾದ ಬದುಕಾಗಿದೆ. ಎಲ್ಲಿ ಬದ್ಧತೆ ಇದೆಯೋ ಅಲ್ಲಿ ಉನ್ನತಿ ಸುಲಭ ಸಾಧ್ಯ ಎಂಬ ಮಾತಿದೆ. ಯಾವುದೇ ಕೆಲಸವನ್ನು ಅತ್ಯಂತ ಶ್ರದ್ಧೆ ಮತ್ತು ಬದ್ಧತೆಯಿಂದ ಮಾಡಬೇಕು. ಬದ್ಧತೆ ನಮಗೆ ಅನೇಕ ಪಾಠಗಳನ್ನು ಕಲಿಸುತ್ತದೆ. ಮಾತ್ರವಲ್ಲ ಉತ್ತಮ ಬದುಕನ್ನು ಕಟ್ಟಿಕೊಡುತ್ತದೆ.

ಕಾಲು ಒದ್ದೆ ಮಾಡದೆ ಸಮುದ್ರವನ್ನು ದಾಟಬಹುದು ಆದರೆ ಕಣ್ಣು ಒದ್ದೆ ಮಾಡದೆ ಜೀವನವೆಂಬ ಸಮುದ್ರ ವನ್ನು ದಾಟಲು ಸಾಧ್ಯವಿಲ್ಲ. ಸವಾಲುಗಳು, ಕಷ್ಟ-ನಷ್ಟಗಳು ಜೀವನದಲ್ಲಿ ಎದುರಾಗುವುದು ಸಹಜ ಪ್ರಕ್ರಿಯೆ. ಕೆಲಸದಲ್ಲಿ ಬದ್ಧತೆಯೊಂದಿದ್ದರೆ ಅವುಗಳನ್ನು ಸುಲಭವಾಗಿ ಮೆಟ್ಟಿನಿಲ್ಲಬಹುದು. ಬದ್ಧತೆ ಎಂದರೆ ಒಬ್ಬ ವ್ಯಕ್ತಿ ತಾನು ನಿರ್ವಹಿಸಲು ಇಚ್ಛಿಸಿದ ಕೆಲಸವನ್ನು ಶ್ರದ್ಧೆ, ನಿಷ್ಠೆ, ಪ್ರಾಮಾಣಿಕವಾಗಿ ಪೂರ್ಣಗೊಳಿಸಲು ಪ್ರಯತ್ನಿಸುವುದಾಗಿದೆ.

ಬದಲಾವಣೆ ಜಗದ ನಿಯಮ. ಬದಲಾವಣೆ ಎನ್ನುವುದು ಓರ್ವ ವ್ಯಕ್ತಿಯ ಪರಿಚಯದಿಂದ ಅಥವಾ ಪುಸ್ತಕಗಳ ಓದಿನಿಂದ ಅಥವಾ ಸಮಯ – ಸಂದರ್ಭ ಗಳಿಂದಲೋ ಆಗಿರಬಹುದು. ಇಂತಹ ಬದಲಾವಣೆಯ ತಿರುವುಗಳು ಬದುಕಿನ ಪಯಣದುದ್ದಕ್ಕೂ ಆಗಾಗ್ಗೆ ಸಿಗುತ್ತಲೇ ಇರುತ್ತವೆ. ಆದ್ದರಿಂದ ಎಚ್ಚರಿಕೆಯಿಂದ ಬದ್ಧತೆಯನ್ನು ಅಳವಡಿಸಿಕೊಂಡು ಮುನ್ನಡೆಯಬೇಕು.

ಶ್ರಮಕ್ಕೆ ಒಂದಲ್ಲ ಒಂದು ದಿನ ತಕ್ಕ ಪ್ರತಿಫ‌ಲ ಸಿಗುತ್ತದೆ. ಆದರೆ ನಾವು ಮಾಡುವ ಕೆಲಸದಲ್ಲಿ ಶ್ರದ್ಧೆ ಮತ್ತು ನಿಷ್ಠೆ, ಜತೆಗೆ ಜೀವನದಲ್ಲಿ ಏನನ್ನಾ ದರು ಸಾಧಿಸಬೇಕೆಂಬ ಗುರಿ ಹೊಂದಿರಬೇಕು. ನಿರಂತರ ಪ್ರಯತ್ನ ಹೊಸದನ್ನು ಕಲಿಯುವ ಆಸಕ್ತಿಗಳಿದ್ದಲ್ಲಿ ಉತ್ತಮ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯ. ಬದುಕು ಪ್ರಪಂಚದ ಅತ್ಯಮೂಲ್ಯ ಕಲಾಕೃತಿ. ಈ ಪ್ರಪಂಚ ಇರುವುದು ನಮ್ಮ ಬದುಕನ್ನು ಸಿಂಗರಿಸುವುದಕ್ಕೆ. ಆದ್ದರಿಂದ ಇದನ್ನು ಬಳಸಿ ಬದುಕನ್ನು ಸುಂದರವನ್ನಾಗಿಸಬೇಕು. ಹಾಗೇ ಯುವಜನತೆ ಧೈರ್ಯದಿಂದ ಬದುಕನ್ನು ಎದುರಿಸುವ ಛಲ ವನ್ನು ಬೆಳೆಸಿಕೊಳ್ಳಬೇಕು.

Advertisement

Udayavani is now on Telegram. Click here to join our channel and stay updated with the latest news.

Next