ಜರ್ಮನಿ: ಕನ್ನಡ ನಾಡಿನಿಂದ ದೂರ, ಸಪ್ತ ಸಾಗರದಾಚೆ ಜರ್ಮನಿಯ ಮ್ಯೂನಿಕ್ ನಗರದಲ್ಲಿ ಅ.29ರಂದು ಕಾನ್ಸುಲೇಟ್ ಜನರಲ್ ಆಫ್ ಇಂಡಿಯಾ ಮ್ಯೂನಿಕ್ ಅವರ ಸಹಯೋಗದಲ್ಲಿ ಮ್ಯೂನಿಕ್ ಕನ್ನಡಿಗರಿಂದ ದಸರಾ ಹಾಗೂ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ” ಉತ್ಸವ ‘ ಕಾರ್ಯಕ್ರಮವನ್ನು ಸಂಭ್ರಮದಿಂದ ಆಚರಿಸಲಾಯಿತು.
ಮೊಟ್ಟಮೊದಲ ಬಾರಿಗೆ ಜರ್ಮನಿಯಲ್ಲಿ ಅತೀ ದೊಡ್ಡ ಸಂಖ್ಯೆಯಲ್ಲಿ ಆಚರಿಸಿದ ಕನ್ನಡ ಉತ್ಸವ ಇದಾಗಿತ್ತು. ಸುಮಾರು 750ಕ್ಕೂ ಅಧಿಕ ಕನ್ನಡಿಗರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಕನ್ನಡ ಸಂಸ್ಕೃತಿಯನ್ನು ಪ್ರತಿನಿಧಿಸುವ ಡೊಳ್ಳು ಕುಣಿತ, ನಾಡಗೀತೆ ಗಾಯನ, ಸಾಂಸ್ಕೃತಿಕ ನೃತ್ಯಗಳು, ಡಿ ಫಾರ್ ಡಾನ್ಸ್, ಎಂಟಿಟಿ ಥಿಯೇಟರ್, ರೊಡ್ಡಾಸ್ ರಾಕರ್ಷ್, ದ ರಾಗ ಕಲೆವ್ವ, ನಿತ್ರಾನ್ಸ್, ನಿತ್ಯಾ ಆರ್ಟ್ ಸೆಂಟರ್, ಸಂವೇದನ್ ಸ್ಟುಡಿಯೋ, ಕನ್ನಡ ಕಲಿ ಕಿಡ್ಸ್ ಅವರು ರೋಮಾಂಚನ ಅಭಿನಯಗಳಿಂದ ನೆರೆದವರನ್ನು ರಂಜಿಸಿದರು.
ಜರ್ಮನಿಯಲ್ಲಿ ನಡೆದ ಕನ್ನಡದ ಮೊಟ್ಟಮೊದಲ ಕಾನ್ಸರ್ಟ್ “ಆಲ್ ಓಕೆ’ (ALLOK ) (ಅಲೋಕ್ ಬಾಬು) ನೆರೆದಿದ್ದ ಜನರಲ್ಲಿ ಕನ್ನಡದ ಭಾವವನ್ನು ಮೂಡಿಸಿತ್ತು. ಬೊಂಬೆ ಮನೆ, ಭುವನೇಶ್ವರಿಯ ಪಲ್ಲಕ್ಕಿ ಮತ್ತು ಮೈಸೂರು ದಸರೆಯ ಫೋಟೋ ಬೂತ್ ಎಲ್ಲರ ಮನ ಸೆಳೆದವು.
ಕಾರ್ಯಕ್ರಮದ ಪ್ರಾಯೋಜಕರಾದಂತಹ ಪಾಟೀಲ್ ಫೈನಾನ್ಸ್, ಡೆಲಿ ತಡ್ಕ, ರಾಬರ್ಟಾ ಬೀಚ್, ಸಿಜಿಐ ಮ್ಯೂನಿಕ್, ಚಾನೆಲ್ ಸೋಲಾರ್‌ಅವರನ್ನು ಸತ್ಕರಿಸಲಾಯಿತು. ಈ ಉತ್ಸವ ಯಶಸ್ವಿಯಲ್ಲಿ 70ಕ್ಕೂ ಹೆಚ್ಚು ಸ್ವಯಂಸೇವಕರು ಬೆನ್ನೆಲುಬಾಗಿ ನಿಂತಿದ್ದಾರೆ.
ವರದಿ: ಸುಪ್ರಿಯಾ ನಾರಾಯಣ್, ಮ್ಯೂನಿಕ್