Advertisement
ಇಂಥಾ ಒಂದು ಅಭಿಯಾನದಲ್ಲಿ ಒಂದಾಗಿ ನ.1ರಂದು ಲೋಕಾರ್ಪಣೆಯಾದ ಕಲಿ ನೀ ಕನ್ನಡ ದೃಶ್ಯಗೀತೆ. ಅಮೆರಿಕ ಕನ್ನಡಿಗರಿಂದ ವಿಶ್ವ ಕನ್ನಡಿಗರಿಗೋಸ್ಕರ ಲೋಕಾರ್ಪಣೆಯಾದ ದೃಶ್ಯಗೀತೆ. ಈ ಗೀತೆಯನ್ನು ಲೋಕದ ಮುಂದೆ ಪ್ರಸ್ತುತ ಪಡಿಸುವ ಉದ್ದೇಶವೇನು? ನಾನಾ ಕಾರಣಕ್ಕಾಗಿ ನಾವುಗಳು, ನಮ್ಮ ನಾಡನ್ನು ತೊರೆದು ಪರದೇಶಕ್ಕೆ ಬಂದು ನೆಲೆಸಿರುತ್ತೇವೆ. ಕೆಲವೊಮ್ಮೆ ಅಲ್ಪಕಾಲಕ್ಕೆ ಹೊರಬಂದು ವಾಪಸ್ಸಾಗುವುದು ಉಂಟು.
Related Articles
Advertisement
ಅಕ್ಷರರೂಪದಿಂದ ಹಾಡಿನ ಮೂಲಕ ಹೇಳುವ ವಿಷಯವನ್ನು ಸಾರುವ ಬದಲಿಗೆ ಅದಕ್ಕೆ ದೃಶ್ಯರೂಪವನ್ನು ಕೊಟ್ಟರೆ ಹೆಚ್ಚಿನ ಪ್ರಭಾವ ಬೀರಬಹುದು ಎಂಬ ಉದ್ದೇಶದಿಂದ ದೃಶ್ಯರೂಪಕ್ಕೆ ತಂದರು. ಮೊದಲಲ್ಲಿ ಕೆಲವೇ ಸ್ಥಳೀಯ ಕನ್ನಡ ಸ್ನೇಹಿತರೊಡನೆ ಒಡಗೂಡಿ, ತಮ್ಮ ಯೋಜನೆಗೆ ಚಿತ್ರಕಥೆಯ ರೂಪವನ್ನು ಕೊಟ್ಟು, ಕನ್ನಡ ಸಂಘದ ಹೆಚ್ಚಿನ ಸದಸ್ಯರೊಡನೆ ಸೇರಿ ಕಥಾರೂಪಕ್ಕೆ ತಕ್ಕಂತೆ ಚಿತ್ರೀಕರಣವನ್ನೂ ನಡೆಸಿದ ಯತ್ನವೇ ನಿಮ್ಮ ಮುಂದಿರುವ ಕಲಿ ನೀ ಕನ್ನಡ ದೃಶ್ಯಗೀತೆ.
“ಕಲಿ ನೀ ಕನ್ನಡ’ ಎಂಬುದು ಸುಧೀಂದ್ರರೇ ಹೇಳಿರುವಂತೆ ಒಂದು ಸಾಂ ಕ ಯತ್ನ. ಆದರೂ ಹಲವರನ್ನು ನೆನೆಯದೇ ಹೋದಲ್ಲಿ ಬರಹವು ಪೂರ್ಣವಾಗಲಾರದು. ದೃಶ್ಯ ಗೀತೆಯಲ್ಲಿನ ಪ್ರಮುಖ ದನಿಯು ಪ್ರತಿಭಾ ಕುಲಕರ್ಣಿಯವರ ಇಂಪಾದ ಕಂಠದಲ್ಲಿ ಮೂಡಿಬಂದಿದೆ. ಇವರೊಂದಿಗೆ ಜತೆಗೂಡಿರುವವರು ಸುಧೀಂದ್ರ ಮತ್ತು ಪ್ರತಿಭಾ ಅವರ ಮಕ್ಕಳಾದ ವೈಷ್ಣವಿ ಕುಲಕರ್ಣಿ ಮತ್ತು ಜಾಹ್ನವಿ ಕುಲಕರ್ಣಿ. ಈ ಮೂವರು ಹಿನ್ನೆಲೆಗಾಯನದಲ್ಲಿ ಇದ್ದು, ವೀಡಿಯೋದಲ್ಲಿ ಅಭಿನಯದಲ್ಲಿ ಪಾಲ್ಗೊಂಡು ದೃಶ್ಯಗೀತೆಗೆ ಜೀವ ತುಂಬಿದ್ದಾರೆ. ಇವರೊಂದಿಗೆ ಪೂರ್ಣಪ್ರಮಾಣದಲ್ಲಿ ದುಡಿದ ರಿಚ್ಮಂಡ್ ನಗರದವರೇ ಆದ ಡಿ.ಓ.ಪಿ ವಿಭಾಗದ ಪ್ರತಿಭೆ ಸುದೀಪ್ ಗೌಡ ಅವರಿಗೆ “ಕಲಿ ನೀ ಕನ್ನಡ’ದ ವತಿಯಿಂದ ಅನಂತ ಧನ್ಯವಾದಗಳು.
ಈ ದೃಶ್ಯಗೀತೆಯಲ್ಲಿ ಪಾಲ್ಗೊಂಡಿರುವ ಹಲವು ಉಲ್ಲೇಖನೀಯ ನುರಿತ ಕಲಾಕಾರರು ಎಂದರೆ, ಸಂಗೀತ ಕ್ಷೇತ್ರದ ಹೇಮಂತ್ ಜೋಯಿಸ್, ಸಾಹಿತ್ಯ ಕ್ಷೇತ್ರದ ಪ್ರಮೋದ್ ಮರವಂತೆ ಜತೆಯಲ್ಲಿ ಮಿಕ್ಸಿಂಗ್ ಮತ್ತು ಮಾಸ್ಟರಿಂಗ್ ವಿಭಾಗದಲ್ಲಿ ಹೃದಯ ಗೋಸ್ವಾಮಿಯವರು ಸೇರಿದ್ದಾರೆ. ದೃಶ್ಯಗೀತೆಯ ಮತ್ತೂಂದು ವಿಭಾಗವಾದ ಕಥೆ ಮತ್ತು ಚಿತ್ರಕಥೆಗೆ ಕೈ ಜೋಡಿಸಿರುವವರು ರಕ್ಷಿತ್ ತೀರ್ಥಹಳ್ಳಿ, ಮತ್ತು ಎಡಿಟಿಂಗ್ ವಿಭಾಗದಲ್ಲಿ ಜೆ.ಸುಧೀರ್. ಇವರೆಲ್ಲರೊಂದಿಗೆ ಗೀತೆಯ ಸನ್ನಿವೇಶಗಳ ಚಿತ್ರಣದಲ್ಲಿ ಸದಾ ಕಾಲ ಇದ್ದು ರಿಚ್ಮಂಡ್ ನಗರದ ಸ್ನೇಹವರ್ಗ. ಪ್ರತಿಯೊಬ್ಬರಿಗೂ “ಕಲಿ ನೀ ಕನ್ನಡ’ದ ವತಿಯಿಂದ ಅನಂತ ಧನ್ಯವಾದಗಳು.
ಕನ್ನಡ ಭಾಷೆಯ ಮಹತ್ವವನ್ನು ಹಂತ ಹಂತವಾಗಿ ತಿಳಿ ಹೇಳುವ ಯತ್ನದ ರೂಪವನ್ನು ವೀಕ್ಷಿಸಿ. ಅಷ್ಟೇ ಅಲ್ಲದೆ, ನಿಮ್ಮ ಬಂಧುಬಳಗ ಮತ್ತು ಸ್ನೇಹಿತರೊಡನೆ ಹಂಚಿಕೊಳ್ಳಿ. ವೀಡಿಯೋವನ್ನು ಇಲ್ಲಿ ನೋಡಬಹುದು: https://www.youtube.com/watch?v=fgO28ugi&i8
ವರದಿ: ಶ್ರೀನಾಥ್ ಭಲ್ಲೆ