Advertisement
ಸದ್ಯ ಪರಿಸ್ಥಿತಿ ಶಾಂತವಿದ್ದು, ಗ್ರಾಮದಲ್ಲಿ ಒಬ್ಬ ಪಿಎಸ್‌ಐ, ಬ್ಬರು ಎಎಸ್‌ಐ, ಡಿಆರ್ ತುಕುಡಿ ನಿಯೋಜಿಸಿ ಸೂಕ್ತ ಬಂದೋಬಸ್ತ್ ಒದಗಿಸಲಾಗಿದೆ. ಈಗಾಗಲೇ 12 ಜನರ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಆರೋಪಿಗಳ ಶೋಧ ಕಾರ್ಯ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.ಸಮಾಜ ಕಲ್ಯಾಣ ಅಧಿಕಾರಿ ಭೇಟಿ: ಹೊರಟೂರ ಗ್ರಾಮಕ್ಕೆ ಶುಕ್ರವಾರ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಅಲ್ಲಾಭಕ್ಷ ಭೇಟಿ ನೀಡಿ ಗ್ರಾಮದ ಜನರಿಂದ ಮಾಹಿತಿ ಪಡೆದರು.
ಘಟನೆ ಹಿನ್ನೆಲೆ: ಜಿಲ್ಲೆಯ ವಡಗೇರಾ ತಾಲೂಕಿನ ಹಾಲಗೇರಾ ಗ್ರಾಮದ ಯಲ್ಲಮ್ಮದೇವಿ ಜಾತ್ರೆಯಲ್ಲಿ ಫೆ.20ರಂದು ಹೊರಟೂರ ಗ್ರಾಮದ ಎರಡು ಕೋಮಿನ ಜನರ ಮಧ್ಯೆ ಗುರುವಾರ ಸಿನಿಮೀಯ ರೀತಿಯಲ್ಲಿ ನಡೆದ ಮಾರಾಮಾರಿ ನಡೆದಿತ್ತು. ಘಟನೆಯಲ್ಲಿ 5 ಜನರು ಗಾಯಗೊಂಡಿದ್ದರು. ಹೊರಟೂರು ಗ್ರಾಮದ ದಲಿತ ಸಮುದಾಯದ ಒಂದೇ ಕುಟುಂಬದ 5 ಜನರ ಮೇಲೆ ಅದೇ ಗ್ರಾಮದ ಕುರುಬ ಸಮುದಾಯ ಜನರು ಜಾತ್ರೆಯಲ್ಲಿ ಕಟ್ಟಿಗೆಗಳಿಂದ ಹೊಡೆದು ಗಾಯಗೊಳಿಸಿರುವ ಘಟನೆಗೆ ಸಂಬಂಧಿಸಿದಂತೆ 12 ಜನರ ವಿರುದ್ಧ ವಡಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
Related Articles
Advertisement
ಹಾಲಗೇರಾದಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಹೊರಟೂರ ಗ್ರಾಮದ ಸಂತ್ರಸ್ತರಿಗೆ ಸೂಕ್ತ ಬಂದೋಬಸ್ತ್ ಕಲ್ಪಿಸಲು ಪೊಲೀಸರಿಗೆ ಪತ್ರ ಬರೆಯಲಾಗಿದೆ. ಹಲ್ಲೆಗೊಳಗಾದವರಿಗೆ ಇಲಾಖೆಯಿಂದ ನ್ಯಾಯಯುತ ದೊರೆಯುವ ಎಲ್ಲಾ ಸೌಲಭ್ಯ ವಿತರಿಸಲಾಗುವುದು. ಅಲ್ಲದೇ ಶೀಘ್ರದಲ್ಲೇ ಸಹಾಯಕ ಆಯುಕ್ತರ ಅಧ್ಯಕ್ಷತೆಯಲ್ಲಿ ಶಾಂತಿ ಸಭೆ ಆಯೋಜಿಸಲಾಗುವುದು.
ಅಲ್ಲಾಬಕಾಷ್, ಸಮಾಜ ಕಲ್ಯಾಣ ಅಧಿಕಾರಿ ಅಸ್ಪೃಶ್ಯತೆ ಇನ್ನೂ ಜೀವಂತ ಇದೆ. ಗ್ರಾಮದಲ್ಲಿನ ಹೋಟೆಲ್‌ನಲ್ಲಿ ಗ್ಲಾಸ್, ಕುಡಿಯುವ ನೀರು ಮುಟ್ಟಿದ್ದರೆ ದೂರ ಸರಿ ಎನ್ನುತ್ತಾರೆ. ಗಾಯಗೊಂಡವರ ತಾಯಿ ಗ್ರಾಪಂ ಸದಸ್ಯೆ ಇದ್ದಾರೆ. ಒಳ್ಳೆಯ ಮನೆ ಕಟ್ಟಿಕೊಂಡು ನೆಲೆಸಿದ್ದಾರೆ. ಹಾಗಾಗಿ ಕಣ್ಣು ಕುಕ್ಕುವಂತಾಗಿದೆ. ಸರ್ವರಿಗೆ ಸಮಾನತೆ ಸಿಗಲಿ ಹಾಗೂ ಬಡಾವಣೆ ಅಭಿವೃದ್ಧಿಗೆ ಒತ್ತು ನೀಡಬೇಕು.ರಾಜು ದಾಸನಕೇರಿ, ಮಾದಿಗ ದಂಡೋರ ಸಮಿತಿ ಜಿಲ್ಲಾಧ್ಯಕ್ಷ