Advertisement

Dengue ಲಸಿಕೆ;ಬೆಂಗಳೂರು, ಮೈಸೂರಲ್ಲಿ ಪ್ರಯೋಗ?

12:43 AM Jul 16, 2024 | Team Udayavani |

ಹೊಸದಿಲ್ಲಿ: ಜನರ ಜೀವಕ್ಕೆ ಎರವಾಗುವ ಡೆಂಗ್ಯೂನಿಯಂತ್ರಿಸುವ ನಿಟ್ಟಿನಲ್ಲಿ ಕರ್ನಾಟಕದ ಮೈಸೂರು, ಬೆಂಗಳೂರು ಸೇರಿದಂತೆ ದೇಶದ 19 ನಗರಗಳಲ್ಲಿ ಇತ್ತೀಚೆಗೆ ಸಂಶೋಧಿಸಲಾಗಿರುವ ಲಸಿಕೆಯ ಪ್ರಯೋಗ ಶೀಘ್ರವೇ ಶುರುವಾಗಲಿದೆ. 18-60 ವರ್ಷ ವಯೋಮಿತಿಯಲ್ಲಿನ 10,335 ಮಂದಿ ಆರೋಗ್ಯವಂತರು ಪ್ರಯೋಗಕ್ಕೆ ಒಳಗಾಗಲಿದ್ದಾರೆ. ಔಷಧೋದ್ಯಮ ಸಂಸ್ಥೆ ಪನೇಶಿಯಾ ಬಯೋಟೆಕ್‌ ಅಮೆರಿಕದ ನ್ಯಾಶನಲ್‌ ಇನ್ಸಿಸ್ಟಿಟ್ಯೂಟ್‌ ಆಫ್ ಹೆಲ್ತ್‌ನ ಸಹಭಾಗಿತ್ವದಲ್ಲಿ ಅದನ್ನು ಅಭಿವೃದ್ಧಿ ಪಡಿಸಲಾಗಿದೆ ಎಂದು ವಿಜ್ಞಾನಿ ಡಾ| ಶೀಲಾ ಗೋಡಬೋಲೆ ತಿಳಿಸಿದ್ದಾರೆ.

Advertisement

ಪುಣೆಯಲ್ಲಿರುವ ನ್ಯಾಶನಲ್‌ ಇನ್ಸಿಸ್ಟಿಟ್ಯೂಟ್‌ ಆಫ್ ವೈರಾಲಜಿ ಮತ್ತು ಭಾರತೀಯ ವೈದ್ಯಕೀಯ ಸಂಶೋಧನ ಮಂಡಳಿ ಲಸಿಕೆಯ ಪ್ರಯೋಗದ ನೇತೃತ್ವ ವಹಿಸಿವೆ. ಹೀಗಾಗಿ ಡೆಂಗ್ಯೂ ನಿಯಂತ್ರಣಕ್ಕೆ ಹೊಸ ವ್ಯವಸ್ಥೆಯೊಂದು ಸಿಗುವ ಸಾಧ್ಯತೆ ಇದೆ.

“ಡೆಂ ಯಾಲ್‌’ ಎಂಬ ಹೆಸರಿನ ಲಸಿಕೆಯ ಬಗ್ಗೆ ಅಮೆರಿಕದಲ್ಲಿ ಕೂಡ ಪ್ರಯೋಗ ನಡೆಸಲಾಗಿದೆ. ಭಾರತದಲ್ಲಿ ಮೊದಲ ಹಂತದಲ್ಲಿ ಇಲಿ ಮೇಲೆ ನಡೆಸಲಾಗಿರುವ ಪ್ರಯೋಗದಲ್ಲಿ ಯಶಸ್ಸು ಕಂಡಿದೆ ಎಂದು ವಿಜ್ಞಾನಿ ಡಾ|ಶೀಲಾ ಗೋಡಬೋಲೆ ಹೇಳಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next