Advertisement

ಪ್ರಾತ್ಯಕ್ಷಿಕೆ-ಚೆಕ್‌ಪೋಸ್ಟ್‌ ಪರಿಶೀಲನೆ 

05:16 PM Apr 09, 2018 | Team Udayavani |

ಧಾರವಾಡ: ವಿವಿ ಪ್ಯಾಟ್‌ ಮತ್ತು ಇವಿಎಂ ಯಂತ್ರಗಳ ಪ್ರಾತ್ಯಕ್ಷಿಕೆ ಹಾಗೂ ಚೆಕ್‌ಪೋಸ್ಟ್‌ಗಳನ್ನು ಜಿಲ್ಲಾಧಿಕಾರಿ ಡಾ| ಎಸ್‌.ಬಿ. ಬೊಮ್ಮನಹಳ್ಳಿ ರವಿವಾರ ಬೆಳಗ್ಗೆ ಭೇಟಿ ನೀಡಿ ಪರಿಶೀಲಿಸಿದರು.

Advertisement

ನಗರ ಸಮೀಪದ ಮಾರಡಗಿ, ಕವಲಗೇರಿ, ಅಮ್ಮಿನಭಾವಿ ಮತ್ತು ಹಾರೋಬೆಳವಡಿ ಗ್ರಾಮಗಳಿಗೆ ಭೇಟಿ ನೀಡಿ ಸಾರ್ವಜನಿಕರ ತಿಳಿವಳಿಕೆಗಾಗಿ ಜಿಲ್ಲೆಯಾದ್ಯಂತ ಏರ್ಪಡಿಸಿರುವ ವಿವಿ ಪ್ಯಾಟ್‌ ಮತ್ತು ಇವಿಎಂ ಮತಯಂತ್ರಗಳ ಪ್ರಾತ್ಯಕ್ಷಿಕೆ ಹಾಗೂ ಮತದಾರರ ಜಾಗೃತಿ ಕಾರ್ಯಕ್ರಮವನ್ನು ವೀಕ್ಷಿಸಿದರು. ಚುನಾವಣೆ ನಿಮಿತ್ತ ಹೆಬ್ಬಳ್ಳಿ ಅಗಸಿ, ಹಾರೋಬೆಳವಡಿ ಸೇರಿದಂತೆ ವಿವಿಧೆಡೆ ಆರಂಭಿಸಿರುವಚೆಕ್‌ಪೋಸ್ಟ್‌ಗಳಿಗೆ ಭೇಟಿ ನೀಡಿ ವಾಹನ  ನೋಂದಣಿ ಪುಸ್ತಕ ಹಾಗೂ ಸಿಬ್ಬಂದಿಯ ಗಸ್ತು ವ್ಯವಸ್ಥೆ ಪರಿಶೀಲಿಸಿದರು. ಎಸ್ಪಿ ಸಂಗೀತಾ ಜಿ., ಪ್ರೊಬೇಷನರಿ ಎಸಿಗಳಾದ ಪಾರ್ವತಿ ರೆಡ್ಡಿ, ಶೇಖರ ಜಿ.ಡಿ., ಧಾರವಾಡ ತಹಶೀಲ್ದಾರ್‌ ಪ್ರಕಾಶ ಕುದರಿ ಸೇರಿದಂತೆ ವಿವಿಧ ಅಧಿಕಾರಿಗಳು ಹಾಗೂ ಕಂದಾಯ ಇಲಾಖೆ ಸಿಬ್ಬಂದಿ ಇದ್ದರು.

ಮಿಂಚಿನ ನೋಂದಣಿ ಅಭಿಯಾನ: ಜಿಲ್ಲಾಧಿಕಾರಿ ಡಾ| ಎಸ್‌.ಬಿ. ಬೊಮ್ಮನಹಳ್ಳಿ ಅವರು ವಿವಿಧ ಅಧಿಕಾರಿಗಳೊಂದಿಗೆ ನಗರದ ಕೆಎಸ್‌ಆರ್‌ಟಿಸಿ ಡಿಪೋ, ವಿದ್ಯಾರಣ್ಯ ಪಿಯು ಕಾಲೇಜು ಸೇರಿದಂತೆ ವಿವಿಧ ಮತಗಟ್ಟೆ ಕೇಂದ್ರಗಳಿಗೆ ಭೇಟಿ ನೀಡಿ ಮಿಂಚಿನ ನೋಂದಣಿ ಹಾಗೂ ವಿದ್ಯುತ್‌ ವ್ಯವಸ್ಥೆ, ಕುಡಿಯುವ ನೀರು, ಅಂಗವಿಕಲರಿಗೆ ರ್‍ಯಾಂಪ್‌ ಸೌಲಭ್ಯ ಸೇರಿದಂತೆ ಮತಗಟ್ಟೆ ಸೌಕರ್ಯಗಳ ಕುರಿತು ಪರಿಶೀಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next