Advertisement

Supreme Court: ದಿಲ್ಲಿಯ 113 ಚೆಕ್‌ಪೋಸ್ಟ್‌ನಲ್ಲಿ ಪೊಲೀಸರನ್ನು ನೇಮಿಸಿ

12:39 AM Nov 23, 2024 | Team Udayavani |

ಹೊಸದಿಲ್ಲಿ: ದಿಲ್ಲಿಯ ಎಲ್ಲ 113 ಚೆಕ್‌ ಪಾಯಿಂಟ್‌ಗಳಲ್ಲಿ ಟ್ರಕ್‌ಗಳು ಒಳ ಬರುತ್ತಿವೆಯೋ, ಇಲ್ಲವೋ ಎಂದು ಪರಿ ಶೀಲಿಸಲು ಪೊಲೀಸರನ್ನು ನಿಯೋಜಿಸು ವಂತೆ ಕೇಂದ್ರ ಸರಕಾರಕ್ಕೆ ಹಾಗೂ ದಿಲ್ಲಿ ಕಾನೂನು ಸೇವಾ ಪ್ರಾಧಿಕಾರಕ್ಕೆ ಸುಪ್ರೀಂ ಕೋರ್ಟ್‌ ಶುಕ್ರವಾರ ನಿರ್ದೇಶಿಸಿದೆ.

Advertisement

ಮಾಲಿನ್ಯ ತಡೆಗೆ ಟ್ರಕ್‌ಗೆ ನಿರ್ಬಂಧ ವಿಧಿಸಿದ್ದರೂ ಟ್ರಕ್‌ಗಳ ಒಳ ಬರುತ್ತಿವೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಇದನ್ನು ನ್ಯಾ| ಅಭಯ್‌ ಎಸ್‌.ಓಕಾ ಹಾಗೂ ನ್ಯಾ| ಆಗಸ್ಟೀನ್‌ ಜಾರ್ಜ್‌ ಮಾಸಿಹ್‌ ಪೀಠವು ಗಂಭೀರವಾಗಿ ಪರಿಗಣಿಸಿದೆ. 113 ಚೆಕ್‌ ಪಾಯಿಂಟ್‌ಗಳ ಪೈಕಿ 13 ಚೆಕ್‌ ಪಾಯಿಂಟ್‌ಗಳಲ್ಲಿ ಟ್ರಕ್‌ ಸಂಚಾರ ನಿರ್ಬಂಧಿಸ ಲಾಗಿದೆ. ಉಳಿದ 100 ಕಡೆ ಪೊಲೀಸರ ನಿಯೋ ಜನೆಯಾಗಬೇಕು, ನ.25ಕ್ಕೆ ವ್ಯವಸ್ಥೆ ಕುರಿತು ವರದಿ ಸಲ್ಲಿಸಬೇಕು ಎಂದಿದೆ.

ದಿಲ್ಲಿಯಲ್ಲಿ ವಾಕಿಂಗ್‌ ನ್ಯುಮೋನಿಯಾ
ಉಸಿರಾಟ ಸಂಬಂಧಿತ ಸಮಸ್ಯೆ ಯಿಂದ ಬಳಲುತ್ತಿರುವ ರಾಷ್ಟ್ರ ರಾಜಧಾನಿ ದಿಲ್ಲಿ ಜನರನ್ನು ಇದೀಗ “ವಾಕಿಂಗ್‌ ನ್ಯೂಮೋನಿಯಾ’ ಕಾಡಲು ಆರಂಭಿಸಿದೆ. ನೆಗಡಿ, ಜ್ವರ, ಗಂಟಲು ಬೇನೆ, ಕೆಮ್ಮು ಇದರ ರೋಗ ಲಕ್ಷಣಗಳು. ನ್ಯೂಮೋನಿಯಾ ಇದ್ದರೂ ಆಸ್ಪತ್ರೆಗೆ ದಾಖಲಾಗಬೇಕಾಗದ ಕಾರಣ ಇದನ್ನು ವಾಕಿಂಗ್‌ ನ್ಯುಮೋನಿಯಾ ಎನ್ನಲಾಗುತ್ತಿದೆ. ಇದೊಂದು ಸಾಂಕ್ರಾಮಿಕವಾದ ಕಾರಣ ಕಡಿಮೆ ಸಮಯದಲ್ಲೇ ಅತೀ ಹೆಚ್ಚು ಜನ ರನ್ನು ಬಾಧಿಸಲು ಆರಂಭಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next