ಸಂಘದ ಸದಸ್ಯರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
Advertisement
ಜಿಲ್ಲಾ ಕಾರ್ಯದರ್ಶಿ ಬಸಲಿಂಗಮ್ಮ ನಾಟೇಕರ್ ಮಾತನಾಡಿ, ಪ್ರತಿ ತಿಂಗಳು 10ನೇ ತಾರೀಖೀನ ಒಳಗಾಗಿ ವೇತನನೀಡಬೇಕು. ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಹುದ್ದೆಯನ್ನು ತಕ್ಷಣ ಭರ್ತಿ
ಮಾಡಬೇಕು. ಅಂಗನವಾಡಿ ಕೇಂದ್ರದ ಬಾಡಿಗೆ ಹಣವನ್ನು ಹೆಚ್ಚಿಗೆ ಮಾಡಬೇಕು ಹಾಗೂ ಮೂಲ ಸೌಕರ್ಯಗಳಾದ
ವಿದ್ಯುತ್ ಹಾಗೂ ಕುಡಿಯುವ ನೀರು, ಶೌಚಾಲಯ ಒದಗಿಸಬೇಕು ಎಂದು ಆಗ್ರಹಿಸಿದರು.
ತಡೆಗಟ್ಟಬೇಕು. ಮಾತೃಪೂರ್ಣ ಯೋಜನೆ ಬಡವರ ಪಾಲಿಗೆ ವರದಾನವಾಗಿದ್ದು, ಈ ಯೋಜನೆ ಜಾರಿ ಮಾಡುವಲ್ಲಿರುವ ಸಮಸ್ಯೆಗಳನ್ನು ಸಂಬಂಧಿಪಟ್ಟ ಅಧಿಕಾರಿಗಳನ್ನು ಮುತುವರ್ಜಿ ವಹಿಸಿ ಬಗೆಹರಿಸಿ ಈ ಯೋಜನೆಯನ್ನು ಸಂಪೂರ್ಣವಾಗಿ ಜಾರಿಗೊಳಿಸಬೇಕೆಂದು ಒತ್ತಾಯಿಸಿದರು. ಸಂಘದ ಪ್ರತಿನಿಧಿಗಳ ಹಾಗೂ ಕಾರ್ಯಕರ್ತೆಯರ ಸಮಸ್ಯೆಗಳನ್ನು ಆಲಿಸಿ ಕೇಳಲು ಬಂದಾಗ ಸಂಘದ ಪ್ರತಿನಿಧಿಗಳ ಜೊತೆಗೆ ಅಸಭ್ಯವಾಗಿ ವರ್ತನೆ ಮಾಡುವುದನ್ನು ತಡೆಯಲು ಕ್ರಮ ಕೈಗೊಳ್ಳಬೇಕು ಎಂಬ ಬೇಡಿಕೆಗಳುಳ್ಳ ಮನವಿ ಪತ್ರವನ್ನು ಅಧಿಕಾರಿಗೆ
ಸಲ್ಲಿಸಲಾಯಿತು. ಸಿಡಿಪಿಒ ಅಬ್ದುಲ್ ರೈಮಾನ್ ಮುಲ್ಲಾ ಮನವಿ ಸ್ವೀಕರಿಸಿ ಸರಕಾರಕ್ಕೆ ಕಳಿಸಿಕೊಡುವುದಾಗಿ ಹೇಳಿದರು. ಪ್ರತಿಭಟನೆಯಲ್ಲಿ ಕೆಪಿಆರ್‌ಎಸ್ ಜಿಲ್ಲಾ ಕಾರ್ಯದರ್ಶಿ ಎಸ್.ಎಂ. ಸಾಗರ, ಜಿಲ್ಲಾ ಖಜಾಂಚಿ ಅನಿತಾ ಹಿರೇಮಠ, ತಾಲೂಕು ಕಾರ್ಯದರ್ಶಿ ಪಾರ್ವತಿ ಮಠಪತಿ, ಗಾಲಿಬಸಾಬ, ಚಂದ್ರಶೇಖರ ಚವ್ಹಾಣ ಇದ್ದರು.
Related Articles
ಆಗ್ರಹಿಸಿ ಇಲ್ಲಿನ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ತಾಲೂಕು ಘಟಕದ ವತಿಯಿಂದ ಶಿಶು ಅಭಿವೃದ್ಧಿ
ಯೋಜನಾಧಿ ಕಾರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಚೇರಿ ಎದುರು ಧರಣಿ ನಡೆಸಿ ಸಿಡಿಪಿಒ ಅವರಿಗೆ ಮನವಿ ಸಲ್ಲಿಸಿತು.
Advertisement
ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ 3 ತಿಂಗಳ ಬಾಕಿ ವೇತನವನ್ನು ತಕ್ಷಣ ಬಿಡುಗಡೆಗೊಳಿಸಬೇಕು.ಅಲ್ಲದೆ ಪ್ರತಿ ದಿನ 10ನೇ ತಾರೀಖೀನ ಒಳಗಾಗಿ ವೇತನ ನೀಡಬೇಕು. ಮತ್ತು ಖಾಲಿಯಿರುವ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರನ್ನು ಕೂಡಲೇ ಭರ್ತಿ ಮಾಡಿಕೊಳ್ಳಬೇಕು. ತಕ್ಷಣಕ್ಕೆ ಅಂಗನವಾಡಿ
ಕೇಂದ್ರಗಳ ಬಾಡಿಗೆ ಹೆಚ್ಚಿಸಬೇಕು ಮತ್ತು ಮೂಲ ಸೌಲಭ್ಯಗಳಾದ, ಕುಡಿಯುವ ನೀರು, ಸಮರ್ಪಕ ವಿದ್ಯುತ್,
ಶೌಚಾಲಯದ ವ್ಯವಸ್ಥೆ ಕಲ್ಪಿಸಬೇಕು.
ಸಮರ್ಪಕ ಆಹಾರ ಸರಬರಾಜು ಮಾಡಿ ತೂಕದಲ್ಲಿ ಮೋಸ ಮಾಡುವುದನ್ನು ತಡೆಗಟ್ಟಬೇಕು ಎಂದು ಆಗ್ರಹಿಸಿತು.
ಸಂಘದ ಪ್ರತಿನಿಧಿಗಳ ಹಾಗೂ ಕಾರ್ಯಕರ್ತೆಯರ ಸಮಸ್ಯಗಳನ್ನು ಆಲಿಸಿ ಕೇಳಲು ಬಂದಾಗ ಪ್ರತಿನಿಧಿಗಳ ಜೊತೆ ಅಧಿಕಾರಿಗಳು ಅಸಭ್ಯ ವರ್ತನೆಯನ್ನು ಮಾಡಬಾರದು. ಎಲ್ಲಾ ಕಾರ್ಮಿಕರಿಗೆ 18.000 ರೂ. ಕನಿಷ್ಠ ವೇತನ ನಿಗದಿಪಡಿಸಬೇಕು. ಎಲ್ಲಾ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸಬೇಕು. ಕಾರ್ಮಿಕ ಕಾನೂನುಗಳ ತಿದ್ದುಪಡ್ಡಿ ಮಾಡಬಾರದು. ಸ್ಕೀಂ ನೌಕರರನ್ನು ಖಾಯಂಗೊಳಿಸಬೇಕು. ಸಾರ್ವಜನಿಕ ಪಡಿತರ ವ್ಯವಸ್ಥೆ ಸಾರ್ವತ್ರಿಕರಣಗೊಳಿಸಿ, ಅಗತ್ಯ ವಸ್ತುಗಳ ಬೆಲೆ ಏರಿಕೆ ತಡೆಗಟ್ಟಬೇಕು. ಹೊಸ ಉದ್ಯೋಗ ಸೃಷ್ಠಿಸಲು ಅಗತ್ಯ ಕ್ರಮಕೈಗೊಂಡು ನಿರುದ್ಯೋಗ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದರು. ಈ ಮೊದಲು ನಗರಸಭೆಯಿಂದ ಸಿಡಿಪಿಒ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ಜರುಗಿತು. ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷೆ ರಾಜೇಶ್ವರಿ ಶಿರವಾಳ, ಯಮನಮ್ಮ ಕಸನೂರ, ಮಡಿವಾಳಮ್ಮ ಹೂಗಾರ,
ಲಕ್ಷ್ಮೀ ಗೋಗಿ, ಇಂದ್ರಾದೇವಿ, ಚಂದಮ್ಮ, ಬಸಲಿಂಗಮ್ಮ ಸೇರಿದಂತೆ ಮುಖಂಡರಾದ ಮಲ್ಲಯ್ಯ ಪೋಲಂಪಲ್ಲಿ, ದಾವಲಸಾಬ, ಭೀಮರಾಯ ಪೂಜಾರಿ, ಹೊನ್ನಪ್ಪ ಮಾನ್ಪಡೆ ಇತರರು ಇದ್ದರು.