Advertisement
ಸತ್ಯಾಗ್ರಹ ಸ್ಥಳಕ್ಕೆ ಆಗಮಿಸಿದ ಕೂಡ್ಲಿಗಿ ಶಾಸಕ ಎನ್.ವೈ. ಗೋಪಾಲಕೃಷ್ಣ, ಮಾಜಿ ಶಾಸಕ ನಾರಾ ಸೂರ್ಯನಾರಾಯಣರೆಡ್ಡಿ, ವಾಲ್ಮೀಕಿ ಪೀಠದ ಮರಡಿ ಜಂಬಯ್ಯ ನಾಯಕ ಅವರು, ಸತ್ಯಾಗ್ರಹಕ್ಕೆ ಕೂತಿದ್ದ ಯುವ ಮುಖಂಡರಾದ ಬಿ.ಆರ್. ಎಲ್.ಶ್ರೀನಿವಾಸ್, ಗಡ್ಡಂ ತಿಮ್ಮಪ್ಪ ಅವರಿಗೆ ಮನವೊಲಿಸಿ ಎಳೆನೀರು ಕುಡಿಸುವ ಮೂಲಕ ಆಮರಣಾಂತ ಸತ್ಯಾಗ್ರಹವನ್ನು ತಾತ್ಕಾಲಿಕವಾಗಿ ಅಂತ್ಯಗೊಳಿಸಿದರು. ಈ ವೇಳೆ ಮಾತನಾಡಿದ ಶಾಸಕ ಎನ್. ವೈ. ಗೋಪಾಲಕೃಷ್ಣ, ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ಪ್ರಮಾಣವನ್ನು ಶೇ.3 ರಿಂದ ಶೇ.7.5ಕ್ಕೆ ಹೆಚ್ಚಿಸಬೇಕೆಂಬ ಸಮುದಾಯದ ಬೇಡಿಕೆ ನ್ಯಾಯಯುತವಾಗಿದೆ. ಇಂಥ ಹೋರಾಟವು ಸಹ ನಡೆಯಲೇಬೇಕಿತ್ತು. ಅದು ಬಳ್ಳಾರಿಯಿಂದಲೇ ನಡೆದಿರುವುದು ಇಲ್ಲಿನ ನಾಯಕರ ಕೆಚ್ಚನ್ನು ತೋರಿಸುತ್ತದೆ. ಮೀಸಲಾತಿ ಹೆಚ್ಚಳಕ್ಕಾಗಿ ಸತ್ಯಾಗ್ರಹ ಕೈಗೊಂಡಿರುವ ಯುವ ಮುಖಂಡರಾದ ಬಿ.ಆರ್. ಎಲ್.ಶ್ರೀನಿವಾಸ್, ಗಡ್ಡಂ ತಿಮ್ಮಪ್ಪ ಅವರು ಹೋರಾಟವನ್ನು ಆರಂಭಿಸಿದ್ದಾರೆ. ಮುಂದೆ ಇನ್ನು ಸಾಕಷ್ಟು ಇದೆ. ಸಮುದಾಯದ ಎಲ್ಲ ಶಾಸಕರನ್ನು ಬೆಂಗಳೂರಿನಲ್ಲಿ ಸಭೆ ಕರೆದು ಒಮ್ಮತದ ನಿರ್ಣಯ ಕೈಗೊಂಡು ಅದಕ್ಕೊಂದು ಮಾರ್ಗಸೂಚಿಗಳನ್ನು ರೂಪಿಸಬೇಕು. ಮುಖ್ಯಮಂತ್ರಿಗಳನ್ನು ಸಹ ಭೇಟಿಯಾಗಿ ಒತ್ತಡ ಹೇರಲಾಗುವುದು ಎಂದವರು ಭರವಸೆ ನೀಡಿದರು.
Advertisement
ಎಸ್‌ಟಿ ಮೀಸಲಾತಿ ಹೆಚ್ಚಳಕ್ಕೆ ಒತ್ತಾಯ: ನಾಲ್ಕು ದಿನಗಳ ಆಮರಣಾಂತ ಸತ್ಯಾಗ್ರಹ ಅಂತ್ಯ
01:20 PM Oct 24, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.