Advertisement

ಕ್ಷೇತ್ರಗಳ ಅನುದಾನಕ್ಕೆ ಬೇಡಿಕೆ

11:34 AM Sep 26, 2020 | Suhan S |

ಬೆಂಗಳೂರು: ಬಿಜೆಪಿ ಶಾಸಕಾಂಗ ಪಕ್ಷದ ‌ಸಭೆಯಲ್ಲಿ ಕ್ಷೇತ್ರಗಳ ಅಭಿವೃದ್ಧಿ ನಿರೀಕ್ಷಿತ ಪ್ರಮಾಣದಲ್ಲಿ ಅನುದಾನ ಸಿಗುತ್ತಿಲ್ಲ ಎಂದು ಬಹುತೇಕ ಶಾಸಕರು ಪ್ರಸ್ತಾಪಿಸಿದಾಗ ಕೋವಿಡ್ ಹಾಗೂ ಪ್ರವಾಹ ಹಿನ್ನೆಲೆಯಲ್ಲಿ ತುಸು ವ್ಯತ್ಯಾಸವಾಗಿದ್ದು, ಮುಂದಿನ ದಿನಗಳಲ್ಲಿ ಸರಿಪಡಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಭರವಸೆ ನೀಡಿದ್ದಾರೆ ಎಂದು ಹೇಳಲಾಗಿದೆ.

Advertisement

ಕ್ಷೇತ್ರಗಳಲ್ಲಿ ಆಗಬೇಕಾದ ಕೆಲಸ ಕಾರ್ಯ ಹಾಗೂ ಪೂರಕವಾಗಿ ಸ್ಪಂದಿಸುವ ಅಧಿಕಾರಿಗಳ ನಿಯೋ ಜನೆ ವಿಚಾರವೂ ಪ್ರಸ್ತಾಪವಾದಾಗ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಶಾಸಕರು, ಸಂಸದರು ಎಲ್ಲರೂ ಸಮನ್ವಯ ಸಾಧಿಸಿ ಒಮ್ಮತ ತೀರ್ಮಾನಕ್ಕೆ ಬಂದರೆ ಅದನ್ನು ಕಾರ್ಯಗತಗೊಳಿಸುವುದಾಗಿಯೂ ತಿಳಿಸಿದರು ಎನ್ನಲಾಗಿದೆ.

ಸಾಲ ಆದರೂ ಮಾಡಿ ಕ್ಷೇತ್ರಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನಕೊಡಿ. ನಮ್ಮ ಸರ್ಕಾರವೇ ಇದ್ದಾಗ ಅನುದಾನ ಕೊಡದಿದ್ದರೆ ಹೇಗೆ ಎಂದು ಕೆಲವು ಶಾಸಕರು ಪ್ರಶ್ನಿಸಿದರು. ಇದಕ್ಕೂ ಮುಖ್ಯಮಂತ್ರಿ ಯಡಿಯೂರಪ್ಪ ಸಕಾರಾತ್ಮಕವಾಗಿ ಸ್ಪಂದಿಸಿದರು ಎಂದು ಹೇಳಲಾಗಿದೆ.

ಕ್ಷೇತ್ರದ ಅನುದಾನ ವಿಚಾರದಲ್ಲಿ ಪ್ರತಿಪಕ್ಷಗಳ ಸದಸ್ಯರು ದನಿ ಎತ್ತಿದಾಗ ಆಡಳಿತ ಪಕ್ಷದವರಾದ ನಾವು ನಮಗೂ ನೀಡಿಲ್ಲ.ನೆರೆ,ಕೋವಿಡ್‌  ಕಾರಣಕ್ಕೆಹಿನ್ನಡೆಯಾಗಿರುವ ವಿಚಾರವನ್ನು ತಿಳಿಸಬೇಕು ಎಂದು ಹೇಳಿದರು.

ಸಭೆಯಲ್ಲಿ ಅಪಸ್ವರ :  ಶಾಸಕಾಂಗ ಪಕ್ಷದ ಸಭೆ ಕರೆದಿರುವ ಬಗ್ಗೆ ಹಲವು ಶಾಸಕರಿಂದ ಸಭೆಯಲ್ಲಿ ಅಪಸ್ವರ ವ್ಯಕ್ತವಾಗಿದೆ ಎನ್ನಲಾಗಿದೆ. ಅಧಿವೇಶನ ಆರಂಭಕ್ಕೂ ಮೊದಲೇ ಸಭೆ ಕರೆದಿದ್ದರೆ ಮಂಡನೆಯಾಗಲಿರುವ ವಿಧೇಯಕರಗಳು, ಸರ್ಕಾರದ ನಿಲುವು, ಚರ್ಚೆ ಸಾಧ್ಯವಾಗುತ್ತಿತ್ತು. ಆದರೆ ಆ ರೀತಿ ನಡೆಯದ ಕಾರಣ ಭಿನ್ನಅಭಿಪ್ರಾಯಕ್ಕೆ ಎಡೆಯಾಗಿದೆ. ಮೊದಲು ಶಾಸಕರ ಅಹವಾಲು, ಅಭಿಪ್ರಾಯ ಆಲಿಸಲು ಆದ್ಯತೆ ನೀಡಬೇಕೆಂದು ಒತ್ತಾಯಿಸಿದರು ಎನ್ನಲಾಗಿದೆ.

Advertisement

ಗೈರು :  ಶಾಸಕಾಂಗ ಪಕ್ಷದ ಸಭೆಗೆ 116 ಶಾಸಕರಲ್ಲಿ 91 ಶಾಸಕರು ಹಾಜರಾಗಿದ್ದರು. ವಿಧಾನಪರಿಷತ್‌ ಸದಸ್ಯರಾದ ಎಚ್‌.ವಿಶ್ವನಾಥ್‌,  ಎಂ.ಟಿ.ಬಿ.ನಾಗರಾಜ್‌, ಆರ್‌.ಶಂಕರ್‌ ಹಾಗೂ ಸಿ.ಪಿ.ಯೋಗೇಶ್ವರ್‌ ಸಹ ಗೈರು ಹಾಜರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next