Advertisement
ಈ ಸಂಬಂಧ ವಿಶಿಷ್ಟ ಮಾದರಿಯ ಅಂದರೆಐಎಸ್‌ಒ ಮಾದರಿಯ 12ಕಂಟೈನರ್‌ಗಳಿಗಾಗಿ ಕೇಂದ್ರಕ್ಕೆ ಬೇಡಿಕೆ ಸಲ್ಲಿಸಿದ್ದು,ಮಂಜೂರು ಮಾಡುವ ನಿರೀಕ್ಷೆ ಇದೆ.ಒಂದು ವೇಳೆ ಈ ಐಎಸ್‌ಒ ಟ್ಯಾಂಕರ್‌ಗಳುಮಂಜೂರಾದರೆ, ಈಗ ಸರಬರಾಜು ಆಗುತ್ತಿರುವಸಮಯಕ್ಕಿಂತ ದುಪ್ಪಟ್ಟು ವೇಗದಲ್ಲಿ ಆಮ್ಲಜನಕಸಾಗಿಸಲು ಸಾಧ್ಯವಾಗಲಿದೆ. ಉದಾಹರಣೆಗೆಕಳಿಂಗದಿಂದ ನಿತ್ಯ ಸುಮಾರು 60 ಟನ್ ಆಮ್ಲಜನಕ ರಾಜ್ಯಕ್ಕೆ ಮಂಜೂರಾಗಿದೆ.
Related Articles
Advertisement
ಸಾಮಾನ್ಯವಾಗಿ ರಸ್ತೆ ಮೂಲಕ ಪೂರೈಸ ಲಾಗುವ ಆಮ್ಲಜನಕ ಟ್ಯಾಂಕರ್‌ಗಳು ಸುರಕ್ಷತೆ ದೃಷ್ಟಿಯಿಂದ ಗಂಟೆಗೆ ಗರಿಷ್ಠ 50 ಕಿ.ಮೀ. ವೇಗದಲ್ಲಿ ಸಂಚರಿಸುತ್ತವೆ. ಅಲ್ಲದೆ,ರಾತ್ರಿ 11ರಿಂದ ಬೆಳಗಿನಜಾವ 5ರವರೆಗೆ ಕಡ್ಡಾಯವಾಗಿ ಕಾರ್ಯಾಚರಣೆ ನಿಷಿದ್ಧ. ಯಾಕೆಂದರೆ, ಅದು ಮಲಗುವ ಸಮಯ.ಆದರೆ, ಐಎಸ್‌ಒ ಟ್ಯಾಂಕರ್‌ಗಳು ರೈಲು ಎಂಜಿನ್‌ಗೆ ಜೋಡಣೆ ಮಾಡಲಾಗಿರುತ್ತದೆ. ಗಂಟೆಗೆ ಸರಾಸರಿ 100 ಕಿ.ಮೀ. ವೇಗದಲ್ಲಿ ಪೂರೈಕೆ ಆಗುತ್ತವೆ. ಈ ವೇಗದಲ್ಲಿ ಕಂಟೈನರ್‌ಗಳು ಬರುವುದರಿಂದ ಹೆಚ್ಚು ಒತ್ತಡ ಉಂಟಾಗುತ್ತದೆ. ಪರಿಣಾಮ ಆಮ್ಲಜನಕ ಗುಣಮಟ್ಟವೂ ಉತ್ತಮವಾಗಿರುತ್ತದೆ ಎಂದು ತಜ್ಞರು ಹೇಳುತ್ತಾರೆ.
ಜತೆಗೆ ಹೆಚ್ಚಿನ ಪ್ರಮಾಣದಲ್ಲಿ ಕಡಿಮೆ ಅವಧಿಯಲ್ಲಿ ಸರಬರಾಜು ಆಗುತ್ತದೆ. ಸದ್ಯ ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಹಾಹಾಕಾರ ಉಂಟಾಗಿರುವುದರಿಂದ ಹೆಚ್ಚು ಉಪಯುಕ್ತ ಆಗಲಿದೆ ಎಂದೂ ತಜ್ಞರು ತಿಳಿಸಿದರು.
ಈಚೆಗೆ ಬಹ್ರೆನ್‌ನಿಂದ 80 ಮೆಟ್ರಿಕ್ ಟನ್ ಆಮ್ಲಜನಕ ರಾಜ್ಯದ ಕರಾವಳಿ ಮೂಲಕ ಬಂದಿಳಿಯಿತು. ಇಲ್ಲಿ ಆಮ್ಲಜನಕಕ್ಕಿಂತ ಹೆಚ್ಚಾಗಿ ನಾಲ್ಕು ಕಂಟೈನರ್‌ಗಳು ಬಂದಿವೆ. ಇದು ನಮಗೆ ಪ್ರಸ್ತುತ ಸಂದರ್ಭದಲ್ಲಿ ಅತಿ ಮುಖ್ಯವಾಗಿದೆ.ಇದರೊಂದಿಗೆ ಕೇಂದ್ರದಿಂದಲೂ 12 ಕಂಟೈನರ್‌ಗಳು ಮಂಜೂರಾದರೆ ಇನ್ನಷ್ಟು ಅನುಕೂಲ ಆಗಲಿದೆ ಎಂದು ಅಧಿಕಾರಿಗಳು ವಿವರಿಸಿದರು.
ವಿಜಯಕುಮಾರ್ ಚಂದರಗಿ