Advertisement

Delhi: ಮಾನವೀಯತೆಯಿಂದ ನೀರು ಬಿಡಲು ಹರಿಯಾಣಕ್ಕೆ ಎಎಪಿ ಸರಕಾರ ಒತ್ತಾಯ

07:02 PM Jun 15, 2024 | Team Udayavani |

ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯಲ್ಲಿನ ನೀರಿನ ಕೊರತೆಯನ್ನು ಗಮನದಲ್ಲಿಟ್ಟುಕೊಂಡು, ಮಾನವೀಯ ಆಧಾರದ ಮೇಲೆ ಯಮುನಾ ನದಿಗೆ ಹೆಚ್ಚುವರಿ ನೀರನ್ನು ಹರಿಸುವಂತೆ ದೆಹಲಿ ಸರಕಾರವು ಹರಿಯಾಣಕ್ಕೆ ಮನವಿ ಮಾಡಿದೆ ಎಂದು ಎಎಪಿ ನಾಯಕಿ ಮತ್ತು ಸಚಿವೆ ಅತಿಶಿ ಶನಿವಾರ ಹೇಳಿದ್ದಾರೆ.

Advertisement

ಮುನಕ್ ಕಾಲುವೆ ಮತ್ತು ವಜೀರಾಬಾದ್ ಜಲಾಶಯದಲ್ಲಿ ಕಚ್ಚಾ ನೀರಿನ ಕೊರತೆಯಿಂದಾಗಿ ರಾಜಧಾನಿಯು ಉತ್ಪಾದನೆಯಲ್ಲಿ ದಿನಕ್ಕೆ 70 ಮಿಲಿಯನ್ ಗ್ಯಾಲನ್ (MGD) ಕೊರತೆಯನ್ನು ಎದುರಿಸುತ್ತಿದೆ ಎಂದು ದೆಹಲಿಯ ಜಲ ಸಚಿವೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕಚ್ಚಾ ನೀರಿನ ಕೊರತೆಯಿಂದಾಗಿ ದೆಹಲಿಯಲ್ಲಿ ಸುಮಾರು 1,002 MGD ಯ ಸಾಮಾನ್ಯ ನೀರಿನ ಉತ್ಪಾದನೆಯು ಶುಕ್ರವಾರ 932 MGD ಗೆ ಇಳಿದಿದೆ ಎಂದು ಹೇಳಿದರು.

“ಮಾನವೀಯ ಆಧಾರದ ಮೇಲೆ ನಗರದ ಜನರಿಗೆ ಹೆಚ್ಚುವರಿ ನೀರನ್ನು ಬಿಡುಗಡೆ ಮಾಡಲು ದೆಹಲಿ ಸರಕಾರವು ಹರಿಯಾಣಕ್ಕೆ ಮನವಿ ಮಾಡಿದೆ. ಶಾಖದ ಪರಿಸ್ಥಿತಿಗಳು ಕಡಿಮೆಯಾದ ನಂತರ ಯಮುನಾ ನೀರಿನ ಹಂಚಿಕೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಚರ್ಚಿಸಬಹುದು ಎಂದರು.

” ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದೇನೆ ಮತ್ತು ಅವರು ನನಗೆ ಸಹಕಾರದ ಭರವಸೆ ನೀಡಿದರು” ಎಂದು ಸಚಿವೆ ಹೇಳಿದ್ದಾರೆ.

Advertisement

ಮಟ್ಕಾ ಫೋಡ್ ಅಭಿಯಾನ ನಡೆಸಿದ ಕಾಂಗ್ರೆಸ್

ರಾಷ್ಟ್ರ ರಾಜಧಾನಿಯಲ್ಲಿ ನೀರಿನ ಬಿಕ್ಕಟ್ಟಿನ ಮಧ್ಯೆ, ದೆಹಲಿ ಕಾಂಗ್ರೆಸ್ ಘಟಕ ಶನಿವಾರ ನಗರದಾದ್ಯಂತ ‘ಮಟ್ಕಾ ಫೋಡ್’ ಪ್ರತಿಭಟನೆಗಳನ್ನು ನಡೆಸಿತು ಮತ್ತು ಅದರ ಸದಸ್ಯರು ಮಣ್ಣಿನ ಮಡಕೆಗಳನ್ನು ನೆಲಕ್ಕೆ ಒಡೆದು ಹಾಕಿದರು. ದೆಹಲಿಯ ಎಲ್ಲಾ 280 ಬ್ಲಾಕ್‌ಗಳಲ್ಲಿ ಬೆಳಗ್ಗೆ 10 ಗಂಟೆ ಸುಮಾರಿಗೆ ಪ್ರತಿಭಟನೆ ನಡೆಯಿತು.

ತಲೆಯ ಮೇಲೆ ಮಣ್ಣಿನ ಮಡಿಕೆಗಳನ್ನು ಮತ್ತು ಕಾಂಗ್ರೆಸ್ ಧ್ವಜಗಳನ್ನು ಹಿಡಿದುಕೊಂಡು ಪ್ರತಿಭಟನಾಕಾರರು ದೆಹಲಿ ಸರಕಾರ ಮತ್ತು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಘೋಷಣೆಗಳನ್ನು ಕೂಗಿದರು. ನಂತರ, ಅವರು ಮಡಕೆಗಳನ್ನು ನೆಲದ ಮೇಲೆ ಎಸೆದರು.
ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ ದೇವೇಂದ್ರ ಯಾದವ್, ಈ ವಿಷಯವನ್ನು ಚರ್ಚಿಸಲು ವಿಧಾನಸಭೆಯ ವಿಶೇಷ ಅಧಿವೇಶನವನ್ನು ನಡೆಸಬೇಕೆಂದು ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next