ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಸಂಸದರು ಮತ ಹಾಕಿದ್ದಾರೆ. ಇದರಿಂದಾಗಿ ದಿಲ್ಲಿ ವ್ಯಾಪ್ತಿಯಲ್ಲಿ ಹಿರಿಯ ಅಧಿಕಾರಿಗಳ ನೇಮಕ ಮತ್ತು ಅವರ ಸೇವೆಗೆ ಸಂಬಂಧಿಸಿದ ವಿಚಾರದಲ್ಲಿ ಕೇಂದ್ರ ಸರಕಾರದ ಮಾತು ಅಂತಿಮವಾಗಲಿದೆ.
Advertisement
ಮಸೂದೆಯ ಬಗ್ಗೆ ವಿಪಕ್ಷಗಳ ನಾಯಕರು ವಿವಿಧ ಅಂಶಗಳನ್ನು ಮುಂದಿಟ್ಟುಕೊಂಡು ಕೇಂದ್ರ ಸರಕಾರದ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ. ಉತ್ತರಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಉದ್ದೇಶಿತ ಮಸೂದೆ ಸುಪ್ರೀಂ ಕೋರ್ಟ್‌ನ ಆದೇಶವನ್ನು ಉಲ್ಲಂ ಸುವುದಿಲ್ಲ ಎಂದರು.“ಆಮ್ ಆದ್ಮಿ ಪಕ್ಷವನ್ನು ಓಲೈಸುವ ನಿಟ್ಟಿನಲ್ಲಿ ಕಾಂಗ್ರೆಸ್‌ಮಸೂದೆಯನ್ನು ವಿರೋಧಿಸುತ್ತಿದೆ. ಆ ಪಕ್ಷ ಈಗ ಆಪ್‌ನ ತೊಡೆಯಲ್ಲಿ ಕುಳಿತಿದೆ’ ಎಂದು ಲೇವಡಿ ಮಾಡಿದರು.
ಮಸೂದೆಯನ್ನು ಪ್ರಬಲವಾಗಿ ಸಮರ್ಥಿಸಿಕೊಂಡ ಅಮಿತ್ ಶಾ, ದಿಲ್ಲಿಯ ಜನರಿಗೆ ಭ್ರಷ್ಟಾಚಾರ ರಹಿತ ಸೇವೆ ನೀಡಲು ಇದು ನೆರವಾಗಲಿದೆ ಎಂದರು. ಐ.ಎನ್.ಡಿ.ಐ.ಎ. ಮೈತ್ರಿಕೂಟವನ್ನು ಉಳಿಸುವ ನಿಟ್ಟಿನಲ್ಲಿ ದಿಲ್ಲಿ ಸೇವೆಗಳ ಮಸೂದೆಗೆ ವಿರೋಧ ವ್ಯಕ್ತಪಡಿಸುತ್ತಿವೆ. ಸದನದಲ್ಲಿ ಮಸೂದೆ ಅಂಗೀಕಾರವಾದ ಕೂಡಲೇ ಆಪ್ ವಿಪಕ್ಷಗಳ ಮೈತ್ರಿಕೂಟ ತೊರೆಯಲಿದೆ ಎಂದು ಲೇವಡಿ ಮಾಡಿದ್ದಾರೆ. ವಿಪಕ್ಷಗಳ ಒಕ್ಕೂಟಕ್ಕೆ ಯಾರೇ ಸೇರಿಕೊಳ್ಳಲಿ ಮುಂದಿನ ಚುನಾವಣೆಯಲ್ಲಿ ಎನ್‌ಡಿಎ ಜಯ ಗಳಿಸಲಿದೆ ಎಂದರು.
Related Articles
ಮಸೂದೆ ವಿರುದ್ಧ ಮತ ಚಲಾಯಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಮಾಜಿ ಪ್ರಧಾನಿ ಡಾ| ಮನಮೋಹನ್ ಸಿಂಗ್ ಅವರನ್ನು ಸದನಕ್ಕೆ ಕರೆ ತಂದಿತ್ತು. ಜತೆಗೆ ಜೆಎಂಎಂ ಮುಖಂಡ, ಅನಾರೋಗ್ಯ ಪೀಡಿತರಾಗಿರುವ ಶಿಬು ಸೊರೇನ್ ಕೂಡ ಇದ್ದರು. ಇದೇ ವೇಳೆ ಮಸೂದೆ ಅಂಗೀಕಾರದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್, ಪ್ರಧಾನಿ ಮೋದಿ ಅವರು ಸುಪ್ರೀಂ ಕೋರ್ಟ್ ತೀರ್ಪನ್ನು ಪಾಲಿಸುತ್ತಿಲ್ಲ ಎಂದು ದೂರಿದ್ದಾರೆ.
Advertisement
ವೈಯಕ್ತಿಕ ಮಾಹಿತಿ ಸೋರಿಕೆಗೆ ಭಾರೀ ದಂಡಲೋಕಸಭೆಯಲ್ಲಿ ಸೋಮವಾರ ಧ್ವನಿ ಮತದ ಮೂಲಕ ಡಿಜಿಟಲ್ ವೈಯಕ್ತಿಕ ಮಾಹಿತಿ ರಕ್ಷಣ ಮಸೂದೆಯನ್ನು ಅಂಗೀಕರಿಸ ಲಾಯಿತು. ಮಾಹಿತಿ ಸೋರಿಕೆಯಾದರೆ ಕಂಪೆನಿ ಗಳಿಗೆ 250 ಕೋಟಿ ರೂ. ದಂಡ ವಿಧಿಸುವ ಅಧಿಕಾರ ಸರಕಾರಕ್ಕಿದೆ. ನೂತನ ಮಸೂದೆಯ ಪ್ರಕಾರ, ಕೇಂದ್ರ ಸರಕಾರಕ್ಕೆ ವರ್ಚುವಲ್ ಸೆನ್ಸಾರ್‌ಶಿಪ್‌ನ ಅಧಿಕಾರವಿರಲಿದೆ. ಬಳಕೆದಾರರ ಡೇಟಾದೊಂದಿಗೆ ವ್ಯವಹರಿಸುವ ಸಂಸ್ಥೆಗಳು, ಅದನ್ನು ಮೂರನೇ ವ್ಯಕ್ತಿಯ ಡೇಟಾ ಪ್ರೊಸೆಸರ್‌ಗಳೊಂದಿಗೆ ಸಂಗ್ರಹಿಸಿದ್ದರೂ ಸಹ ವೈಯಕ್ತಿಕ ಮಾಹಿತಿಯ ರಕ್ಷಣೆಯನ್ನು ಖಚಿತಪಡಿಸಿಕೊಳ್ಳುವುದು ಅಗತ್ಯ ಎಂಬ ಅಂಶ ಮಸೂದೆಯಲ್ಲಿದೆ.