Advertisement
ಕಿಸಾನ್ ಮಜ್ದೂರ್ ಸಂಘರ್ಷ್ ಸಮಿತಿ ಪತ್ರಿಕಾ ಹೇಳಿಕೆ ಪ್ರಕಾರ, ಕೆಂದ್ರ ಸರ್ಕಾರದೊಂದಿಗೆ ಮಾತುಕತೆಗೂ ಮುನ್ನ ದೆಹಲಿ ಪೊಲೀಸರು ಸಿಂಘು ಗಡಿಯಲ್ಲಿ ಬಳಸುತ್ತಿರುವ ಲೌಡ್ ಸ್ಪೀಕರ್ ಗಳನ್ನು ಬಂದ್ ಮಾಡಬೇಕು ಎಂದು ಆಗ್ರಹಿಸಿವೆ.
Related Articles
Advertisement
ಮಾತ್ರವಲ್ಲದೆ ರೈತ ಸಂಘಟನೆಗಳು ಗಣರಾಜ್ಯೋತ್ಸವ ದಿನದಂದು ನಡೆದ ಹಿಂಸಾಚಾರದ ನಂತರ ಬಂಧಿಸಲ್ಪಟ್ಟವರನ್ನು ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದ್ದಾರೆ.ಜೊತೆಗೆ ಪ್ರತಿಭಟನಾ ಸ್ಥಳದಲ್ಲಿ ನೀರು, ಶೌಚಾಲಯ, ಇಂಟರ್ ನೆಟ್ ವ್ಯವಸ್ಥೆಯನ್ನೂ ಕಲ್ಪಿಸಬೇಕೆಂದು ಬೇಡಿಕೆಯಿರಿಸಿವೆ.
ಜನವರಿ 26 ರಂದು ಹಿಂಸಾಚಾರ ನಡೆದ ಬಳಿಕ ದೆಹಲಿಯ ಸಿಂಘು ಗಡಿಯಲ್ಲಿ ಅತೀ ಹೆಚ್ಚು ಪೊಲೀಸರನ್ನು ಹಾಗೂ ಭದ್ರತಾಪಡೆಗಳನ್ನು ನಿಯೋಜಿಸಲಾಗಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ: ಹಿಮಪಾತದಿಂದ ರಸ್ತೆ ಬಂದ್; ಸೇನಾ ವಾಹನದಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ