ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಳೆದ 24 ಗಂಟೆಯಲ್ಲಿ ಸುರಿದ ಧಾರಾಕಾರ ಮಳೆಗೆ ಜನಜೀವನ ತತ್ತರಿಸಿ ಹೋಗಿದ್ದು, ಹಲವೆಡೆ ಜಲಾವೃತಗೊಂಡಿದ್ದು, ಭಾರೀ ಪ್ರಮಾಣದಲ್ಲಿ ಟ್ರಾಫಿಕ್ ಜಾಮ್ ಗೆ ಕಾರಣವಾಗಿದೆ. ಅಲ್ಲದೇ ದೆಹಲಿ-ಎನ್ ಸಿಆರ್ ನಲ್ಲಿ ಸುರಿದ ಮಳೆ ಕಳೆದ 88 ವರ್ಷಗಳ ಹಿಂದಿನ ದಾಖಲೆಯನ್ನು ಮುರಿದಿದೆ!
ಇದನ್ನೂ ಓದಿ:Byadagi incident: ವಿಧಿಯಾಟಕ್ಕೆ ಬಲಿಯಾಯ್ತು ಐಎಎಸ್ ಕನಸು; ಫುಟ್ ಬಾಲ್ ಕ್ಯಾಪ್ಟನ್ ದುರ್ಮರಣ
ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ, ಗುರುವಾರ ಬೆಳಗ್ಗೆ 8.30ರಿಂದ ಶುಕ್ರವಾರ (ಜೂನ್ 28) ಬೆಳಗ್ಗೆ 8.30ರವರೆಗೆ ದಾಖಲೆ ಪ್ರಮಾಣದ 228 ಮಿಲಿ ಮೀಟರ್ ಮಳೆಯಾಗಿದೆ. 1936ರಲ್ಲಿ 24ಗಂಟೆಯಲ್ಲಿ 235 ಮಿಲಿ ಮೀಟರ್ ಮಳೆಯಾಗಿ ದಾಖಲೆ ಬರೆದಿತ್ತು.
ವಾಡಿಕೆಯಂತೆ ದೆಹಲಿಯಲ್ಲಿ ಜೂನ್ ತಿಂಗಳಿನಲ್ಲಿ 80.6 ಮಿಲಿ ಮೀಟರ್ ಮಳೆಯಾಗುತ್ತದೆ. ಧಾರಾಕಾರ ಮಳೆಯಿಂದಾಗಿ ದೆಹಲಿ-ಎನ್ ಸಿಆರ್ ನ ಜನಜೀವನದ ಮೇಲೆ ಪರಿಣಾಮ ಬೀರಿದ್ದು, ಪ್ರವಾಹದಂತಹ ನೀರಿನಿಂದಾಗಿ ವಾಹನ ಸವಾರರು ಪರದಾಡುವಂತಾಗಿತ್ತು.
ಕಳೆದ ಎರಡು ತಿಂಗಳಿನಿಂದ ದೆಹಲಿಯ ಜನರು ಬಿಸಿಲ ತಾಪದಿಂದ ತತ್ತರಿಸಿ ಹೋಗಿದ್ದು, ಇದೀಗ ಮಳೆಯಿಂದಾಗಿ ವಾತಾವರಣ ತಂಪಾಗಿದ್ದು, ಇಂದು ದೆಹಲಿಯಲ್ಲಿ 24.7 ಡಿಗ್ರಿ ಸೆಲ್ಸಿಯಸ್ ತಾಪಮಾನವಿದೆ.