Advertisement

ದೆಹಲಿ ಕರ್ನಾಟಕ ಸಂಘ: ಕರ್ನಾಟಕದ ಬಯಲು ಚಿತ್ರಾಲಯ ಕಾರ್ಯಾಗಾರ

04:04 PM Aug 08, 2017 | Team Udayavani |

ಮುಂಬಯಿ: ದೆಹಲಿಯ ಪ್ರದೂಷಣದಿಂದ ದುರ್ಗಂಧಮಯವಾಗಿರುವ ವಾತಾವರಣವನ್ನು ನೀವು ರಚಿಸಲಿರುವ ಕಲಾಕೃತಿಗಳು ಸುಗಂಧಮಯವಾಗಿಸಲಿ ಎಂದು ದೆಹಲಿ ಜವಾಹರ್‌ಲಾಲ್‌ ನೆಹರೂ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ| ಎಚ್‌. ಎಸ್‌. ಶಿವಪ್ರಕಾಶ್‌ ನುಡಿದರು.

Advertisement

ಆ. 2ರಂದು ದೆಹಲಿ ಕರ್ನಾಟಕ ಸಂಘದ ಆವರಣದಲ್ಲಿ ಆಯೋಜಿಸಲಾದ ದೆಹಲಿಯಲ್ಲಿ ಕರ್ನಾಟಕದ ಬಯಲು ಚಿತ್ರಾಲಯ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ ಶುಭ ಹಾರೈಸಿದರು. ಕನ್ನಡ  ಅಧ್ಯಯನ ಪೀಠದ ಪ್ರಾಧ್ಯಾಪಕರಾದ ಡಾ| ಪುರುಷೋತ್ತಮ ಬಿಳಿಮಲೆ ಅವರು ಬಯಲು ಚಿತ್ರಾಲಯವು ಯಶಸ್ವಿಯಾಗಿ ನಡೆದು ಕರ್ನಾಟಕದ ಕಲೆ ಮತ್ತು ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಅತ್ಯುತ್ತಮ ಕಲಾಕೃತಿಗಳು ಮೂಡಿ ಬರಲಿ ಎಂದು ಆಶಿಸಿದರು.

ದೆಹಲಿ ಕರ್ನಾಟಕ ಸಂಘ ಮತ್ತು ಕರ್ನಾಟಕ ಲಲಿತ ಕಲಾ ಅಕಾಡೆಮಿ  ಬೆಂಗಳೂರು ಜಂಟಿಯಾಗಿ ಆಯೋಜಿಸಿರುವ ಈ ಚಿತ್ರಕಲಾ ಕಾರ್ಯಾಗಾರದಲ್ಲಿ ಕರ್ನಾಟಕದಿಂದ ಆಗಮಿಸಿದ 15 ಜನ ಪ್ರಸಿದ್ಧ ಕಲಾವಿದರು ಭಾಗವಹಿಸಿದ್ದು, ಅ.  6 ರವರೆಗೆ ನಡೆಯಿತು.

ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷರಾದ ವಸಂತ ಶೆಟ್ಟಿ ಬೆಳ್ಳಾರೆ ಹಾಗೂ ಕರ್ನಾಟಕ ಲಲಿತ ಕಲಾ ಅಕಾಡೆಮಿಯ ಅಧ್ಯಕ್ಷರಾದ ಡಾ| ಎಂ. ಎಸ್‌. ಮೂರ್ತಿ ಅವರ ನೇತೃತ್ವದಲ್ಲಿ ಕಾರ್ಯಕ್ರಮವು ಜರಗಿತು.

 ದೆಹಲಿಯ ಕನ್ನಡ ಮತ್ತುಕನ್ನಡೇತರ ಸಾಮಾನ್ಯ ಜನರು, ಸಂಸದರು, ಉನ್ನತ ಅಧಿಕಾರಿಗಳಿಗೆ ಕರ್ನಾಟಕದ ಕಲಾವಿದರು ಹಾಗೂ ಕಲೆಯನ್ನು ಪರಿಚುಸುವುದು ಈ ಆಯೋಜನೆಯ  ಮೂಲ
ಉದ್ದೇಶವಾಗಿದೆ ಎಂದು ವಸಂತ ಶೆಟ್ಟಿ ಬೆಳ್ಳಾರೆ ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ನುಡಿದರು.

Advertisement

ಡಾ| ಎಂ. ಎಸ್‌. ಮೂರ್ತಿ ಅವರು ದೆಹಲಿ ಕರ್ನಾಟಕ ಸಂಘವು ನೀಡುತ್ತಿರುವ ಈ ಆತಿಥ್ಯಕ್ಕೆ ನಾವು ಚಿರಋಣಿ. ಸಂಘವು ದೆಹಲಿಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಕರ್ನಾಟಕದ ಕಲಾವಿದರನ್ನು ಜಗತ್ತಿಗೆ ಪರಿಚಯಿಸುವಲ್ಲಿ ಸಹಕಾರಿಯಾಗಿದೆ ಎಂದರು.

ಸಂಘದ ಪ್ರಧಾನ ಕಾರ್ಯದರ್ಶಿ  ಸಿ. ಎಂ. ನಾಗರಾಜ ಅವರು 15 ಜನ ಕಲಾವಿದರನ್ನು ಪರಿಚಯಿಸಿ ಸ್ವಾಗತಿಸುತ್ತ ಸಂಘದ ವತಿಯಿಂದ ಎಲ್ಲ ಕಲಾವಿದರಿಗೂ ಹಾಗೂ ಮುಖ್ಯ ಅತಿಥಿಗಳಿಗೆ ಪುಷ್ಪಗುತ್ಛವನ್ನಿತ್ತು ಅಭಿನಂದಿಸಿದರು. ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಹಿರಿಯಕಲಾವಿದ ಭೀಮರಾವ್‌ ಮುರಗೋಡ ದಂಪತಿ ಸೇರಿದಂತೆ ಹಲವಾರು ಮಂದಿ ಸ್ಥಳೀಯ ಕಲಾವಿದರು ಮತ್ತು ಕಲಾರಸಿಕರು ಉಪಸ್ಥಿತರಿದ್ದರು. ಸಂಘದ ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷ ಸಖಾರಾಮ ಉಪ್ಪೂರು ವಂದಿಸಿದರು.
ದೆಹಲಿ ಕರ್ನಾಟಕ ಸಂಘದ ಜತೆ ಕಾರ್ಯದರ್ಶಿ ಜಮುನಾ ಸಿ. ಮಠದ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯೆ  ಸುಮಿತಾ ಮುರಗೋಡ ಕಾರ್ಯಕ್ರಮದ ಸಂಚಾಲಕರಾಗಿದ್ದು,ಹಿರಿಯ ಚಿತ್ರಕಲಾವಿದರಾದ ಚೆನ್ನು ಎಸ್‌. ಮಠದ ಮತ್ತು ಕಲಾವಿದ ಸುಧೀರ್‌ ಫಡ್ನಿàಸ್‌ ಅವರು ಕಾರ್ಯಕ್ರಮದ ಸಂಯೋಜನೆಗೆ ಸಹಕರಿಸಿದರು.

ವೀರೇಶ್‌ ಎಂ. ರುದ್ರಸ್ವಾಮಿ, ಸಿದ್ದಣ್ಣ ಎಸ್‌. ಮರಗೋಳ, ಡಾ| ಅಶೋಕ ಎಸ್‌. ಶಟ್ಕಾರ್‌, ಜಿ. ಎಸ್‌. ಪಾಟೀಲ,  ಮಂಜುನಾಥ ಎನ್‌. ವಾಲಿ, ನಿಹಾಲ್‌ ವಿಕ್ರಂರಾಜು, ಜಿ.ಎಲ್‌. ಬಾಬು ರಾಜೇಂದ್ರ ಪ್ರಸಾದ್‌, ರಚಪ್ಪಾಜಿ, ಉದಯ್‌ ಡಿ. ಜೈನ್‌, ರಾಣಿರೇಖಾ, ವಿ. ಅಂಜಲಿ, ಡಾ| ಸುಶೀಲಾ ಹೂಗಾರ, ಅನುರಾಧಾ ಎಸ್‌., ಕಾವೇರಿ ಎಚ್‌. ಪೂಜಾರ, ಪೂರ್ಣಿಮಾ ಎನ್‌. ಮೊದಲಾದ ಕಲಾವಿದರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next