Advertisement

20 ಸ್ಥಾನಗಳ ದಿಲ್ಲಿ ಉಪಚುನಾವಣೆಗೆ ಬಿಜೆಪಿ ಗಂಭೀರ ಚರ್ಚೆ

04:41 PM Jan 20, 2018 | udayavani editorial |

ಹೊಸದಿಲ್ಲಿ : ಲಾಭದಾಯಕ ಹೊಂದಿರುವ ಕಾರಣಕ್ಕೆ ಆಮ್‌ ಆದ್ಮಿ ಪಕ್ಷದ 20 ಮಂದಿ ಶಾಸಕರ ಅನರ್ಹತೆಗೆ ಚುನಾವವಣಾ ಆಯುಕ್ತರು ಶಿಫಾರಸು ಮಾಡಿರುವ ಹಿನ್ನೆಲೆಯಲ್ಲಿ 20 ಸ್ಥಾನಗಳಿಗೆ ನಡೆಯಬೇಕಿರುವ ಉಪ ಚುನಾವಣೆಯ ಬಗ್ಗೆ ದಿಲ್ಲಿ ಬಿಜೆಪಿ ಗಂಭೀರ ಚರ್ಚೆಯನ್ನು ಆರಂಭಿಸಿದೆ.

Advertisement

ಬಿಜೆಪಿಯ ಕೋರ್‌ ಕಮಿಟಿ ಸದಸ್ಯರು ನಿನ್ನೆ ಶುಕ್ರವಾರ ರಾತ್ರಿ ಸಂಭವನೀಯ ದಿಲ್ಲಿ ಉಪಚುನಾವಣೆಯ ಬಗ್ಗೆ ವಿಸ್ತೃತ ಚರ್ಚೆ ನಡೆಸಿದರೆಂದು ಮೂಲಗಳು ತಿಳಿಸಿವೆ. 

70 ಸದಸ್ಯ ಬಲದ ದಿಲ್ಲಿ ವಿಧಾನಸಭೆಗೆ 2015ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಆಪ್‌ 67 ಸ್ಥಾನಗಳನ್ನು ಗೆದ್ದು ವಿಪಕ್ಷಗಳನ್ನು ನಿರ್ನಾಮ ಮಾಡಿತ್ತು. ಅನಂತರದಲ್ಲಿ ನಡೆದಿದ 2 ಉಪಚುನಾವಣೆಗಳಲ್ಲಿ  ಆಪ್‌ ಮತ್ತು  ಬಿಜೆಪಿ ತಲಾ ಒಂದು ಸ್ಥಾನ ಗೆದ್ದಿದ್ದವು. 

Advertisement

Udayavani is now on Telegram. Click here to join our channel and stay updated with the latest news.

Next