Advertisement

Western Ghats: ಅರಣ್ಯ ನಾಶ ಅಬಾಧಿತ, ತಾಪ ಏರಿಕೆಗೆ ಇಲ್ಲ ಅಂಕುಶ

01:44 AM Sep 25, 2024 | Team Udayavani |

ಮಂಗಳೂರು: ವರ್ಷದಿಂದ ವರ್ಷಕ್ಕೆ ಹವಾಮಾನ ವೈಪರೀತ್ಯ ಹೆಚ್ಚುತ್ತಿರುವುದು, ಮಳೆ- ಚಳಿ- ಬೇಸಗೆ ಕಾಲಗಳ ವಿನ್ಯಾಸದಲ್ಲಿ ಬದಲಾವಣೆ ಆಗುತ್ತಿರುವುದು ಸದ್ಯ ಬಹುಚರ್ಚಿತ ವಿಷಯ. ಇದರ ನಡುವೆ ಮಾನವನ ಹಸ್ತಕ್ಷೇಪ, ಆರ್ಥಿಕ ಸುಧಾರಣ ಕಾರ್ಯ ಗಳಿಂದಾಗಿ ಜಾಗತಿಕವಾಗಿ ಅತೀ ಸೂಕ್ಷ್ಮ ಪ್ರದೇಶ ಎಂದೇ ಪರಿಗಣಿತವಾದ ಪಶ್ಚಿಮ ಘಟ್ಟ ಪ್ರದೇಶಗಳಲ್ಲೂ ತಾಪಮಾನ ಬದ ಲಾವಣೆ ಕಂಡುಬಂದಿದೆ.

Advertisement

ಈ ಕುರಿತು ಅಧ್ಯಯನ ನಡೆ ಸಿರುವ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ)ಯ ವಿಜ್ಞಾನಿ ಗಳು ಪಶ್ಚಿಮ ಘಟ್ಟದ ಅರಣ್ಯ ಪ್ರದೇಶದಲ್ಲಿ ಆಗುತ್ತಿರುವ ಬದಲಾವಣೆ, ತಾಪಮಾನ ಏರಿಳಿತ ಇತ್ಯಾದಿ ವಿಷಯಗಳನ್ನು ದಾಖಲಿಸಿದ್ದಾರೆ.

ಐಐಎಸ್‌ಸಿಯ ಪರಿಸರ ವಿಜ್ಞಾನ ಕೇಂದ್ರದ ಪ್ರೊ| ಟಿ.ವಿ. ರಾಮಚಂದ್ರ, ಭರತ್‌, ಎಸ್‌. ವಿನಯ್‌ ಮತ್ತಿತರರ ತಂಡ ಈ ಮಾಹಿತಿಯನ್ನು ಅಂತಾರಾಷ್ಟ್ರೀಯ ವಿಜ್ಞಾನ ನಿಯತಕಾಲಿಕ “ಸ್ಟ್ರಿಂಗರ್‌’ನಲ್ಲಿ ಪ್ರಕಟಿಸಿದೆ.

ಕಾಡು ಕಳೆದುಕೊಂಡದ್ದೇ ಕಾರಣ
2005ರಿಂದ 2019ರ ವರೆಗಿನ ದೂರ ಸಂವೇದಿ ದತ್ತಾಂಶ ಆಧರಿಸಿ ಭೂಮಟ್ಟದ ಗುಣ ಲಕ್ಷಣಗಳ ಅಧ್ಯಯನ ನಡೆಸ ಲಾಗಿದೆ (ಫ್ರಾಗೆ¾ಂಟೇಶನ್‌ ವಿಶ್ಲೇಷಣೆ). ಅದರಂತೆ ರಾಜ್ಯದಲ್ಲಿ ಇರುವ ಅಬಾಧಿತ ಅರಣ್ಯ ಕೇವಲ 11,335 ಚ.ಕಿ.ಮೀ. (ಶೇ 5.91). ಅಧ್ಯಯನ ಪ್ರಕಾರ ರಾಜ್ಯವು 1985ರಿಂದ 2019ರ ವರೆಗೆ ಒಟ್ಟು ಶೇ 63.7ರಷ್ಟು ಅಬಾಧಿತ ಆಂತರಿಕ ಕಾಡನ್ನು ಕಳೆದುಕೊಂಡಿದೆ.

ಅತೀ ದಟ್ಟ ಅರಣ್ಯ 11,335 (ಶೇ. 5.91), ಮಧ್ಯಮ ದಟ್ಟ ಅರಣ್ಯ 12,869 ಚದರ ಕಿ.ಮೀ. (6.71) ಇದೆ. ಅರಣ್ಯ ಹರಡಿರುವ ಕುರಿತಾದ ಅಧ್ಯಯನವನ್ನು ಗಮನಿಸಿದರೆ ಪಶ್ಚಿಮ ಘಟ್ಟದತೆಕ್ಕೆಯಲ್ಲಿರುವ ಜಿಲ್ಲೆಗಳಲ್ಲೂ ಅಬಾಧಿತ ಅರಣ್ಯ ಪ್ರಮಾಣ ತೀವ್ರ
ವಾಗಿ ಕುಸಿತ ಕಾಣುತ್ತಿರುವ ಗಂಭೀರತೆಯನ್ನೂ ಅಧ್ಯಯನ ಎತ್ತಿತೋರಿಸಿದೆ. ಚಿಕ್ಕಮಗಳೂರಿನಲ್ಲಿ ಶೇ. 54 ರಷ್ಟು, ದಕ್ಷಿಣ ಕನ್ನಡದಲ್ಲಿ ಶೇ. 57.6ರಷ್ಟು, ಉಡುಪಿಯಲ್ಲಿ ಶೇ. 44ರಷ್ಟು, ಉತ್ತರಕನ್ನಡದಲ್ಲಿ ಶೇ. 41ರಷ್ಟು ಹಾಗೂ ಶಿವಮೊಗ್ಗದಲ್ಲಿ ಶೇ. 35ರಷ್ಟು ದಟ್ಟಾರಣ್ಯ 2005-2019ರ ಅವಧಿಯಲ್ಲಿ ನಾಶವಾಗಿದೆ.

Advertisement

ಏರುತ್ತಿದೆ ತಾಪಮಾನ: ಅಧ್ಯಯನದಲ್ಲಿ ಥರ್ಮಲ್‌ ಬ್ಯಾಂಡ್‌ ರಿಮೋಟ್‌ ಸೆನ್ಸಿಂಗ್‌ ಡಾಟಾ ಅಧ್ಯಯನದ ಪ್ರಕಾರ 2005ರಿಂದ 2019ರ ಅವಧಿಯನ್ನು ವಿಶ್ಲೇಷಿಸಲಾಗಿದೆ. ಅದರಂತೆ ತಾಪಮಾನ ದಲ್ಲಿ ತೀವ್ರ ಏರಿಕೆ ದಾಖಲಾಗಿದೆ. ಪ್ರದೇಶದಲ್ಲಿ ಭೂಮಿಯ ಮೇಲ್‌ಸ್ತರದಲ್ಲಿ ಆಗಿರುವ ಬದಲಾವಣೆಗಳು, ಮುಖ್ಯವಾಗಿ ಹಸುರು ಪ್ರಮಾಣದಲ್ಲಿ ಇಳಿಕೆ ಇದಕ್ಕೆಕಾರಣ. ಅರಣ್ಯೇತರ ಭಾಗದಲ್ಲಂತೂ ನಿರ್ಮಾಣ ಸಂಬಂಧಿ ಚಟುವಟಿಕೆಗಳಿಂದಾಗಿ ವಾತಾವರಣದ ಉಷ್ಣತೆಯಲ್ಲಿ ಗಣನೀಯ ಏರಿಕೆಯಾಗಿದೆ. ಕೈಗಾರಿಕೆಗಳ ಏರಿಕೆ, ಅನಿರ್ಬಂಧಿತ ನಗರೀಕರಣ ಇದಕ್ಕೆ ಕಾರಣವೆನ್ನುವುದು ತಜ್ಞರ ಅಭಿಮತ.

ಭೂ ಮೇಲ್‌ಸ್ತರದ ತಾಪಮಾನದ ವಿಶ್ಲೇಷಣೆಯ ಪ್ರಕಾರ ರಾಜ್ಯದಲ್ಲಿ 8,21,600 ಹೆಕ್ಟೇರ್‌ ಪ್ರದೇಶದಲ್ಲಿ 2005ರಲ್ಲಿ ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ಇತ್ತು. ಈ ವಿಸ್ತೀರ್ಣ 2019ರಲ್ಲಿ 4,85,566 ಹೆಕ್ಟೇರ್‌ಗೆ ಕುಸಿದಿದೆ. 30ರಿಂದ 35 ಡಿಗ್ರಿ ಸೆಲ್ಸಿಯಸ್‌ ತಾಪ ಇರುವ ಪ್ರದೇಶ 2005ರಲ್ಲಿ ಕೇವಲ 2,898 ಚದರ ಕಿ.ಮೀ. ಇದ್ದುದು 2019ರಲ್ಲಿ 3,666 ಚದರ ಕಿ.ಮೀ.ಗೆ ವಿಸ್ತರಣೆಯಾಗಿದೆ.

ಸಸ್ಯ-ಪ್ರಾಣಿ ಪ್ರಭೇದಕ್ಕೂ ಪರಿಣಾಮ: ಅಧ್ಯಯನದಲ್ಲಿ ಕಂಡುಕೊಂಡ ಇನ್ನೊಂದು ವಿಚಾರ ಎಂದರೆ ಕಳೆದ ದಶಕವೊಂದರಲ್ಲಿ ಅಳಿವಿನಂಚಿನಲ್ಲಿರುವ ಸೂಕ್ಷ್ಮ ಸಸ್ಯ, ಪ್ರಾಣಿ ಪ್ರಭೇದಗಳ ಸಂಖ್ಯೆಯೂ ಕಡಿಮೆಯಾಗಿರುವುದು. ಅಂದರೆ ಈ ಜೀವಸಂಕುಲ ನಾಶವಾಗಿದೆ ಎಂದರ್ಥ.

2005ರಲ್ಲಿ ಅತೀ ಸೂಕ್ಷ್ಮ, ಅಳಿವಿನಂಚಿನ, ಇನ್ನಿಲ್ಲವಾಗುತ್ತಿರುವ 3,615 ಸಸ್ಯ ಪ್ರಭೇದಗಳಿದ್ದರೆ, 2019ರಲ್ಲಿ ಇದು 3,374ಕ್ಕೆ ಇಳಿಕೆಯಾಗಿದೆ. ಪ್ರಾಣಿಗಳಲ್ಲೂ ಈ ಸಂಖ್ಯೆ 2005ರಲ್ಲಿ 4,243ರಿಂದ 3,923ಕ್ಕೆ ಇಳಿಕೆಯಾಗಿದೆ.

ಪರಿಸರ ವ್ಯವಸ್ಥೆಯಲ್ಲಿ ಅಸಮ ತೋಲನ ಈ ರೀತಿಯ ತಾಪ ಮಾನ ವೈಪರೀತ್ಯಕ್ಕೆ ಕಾರಣ. ಭೂಮಿಯ ಸದ್ಬಳಕೆ, ಹಾಳಾದ ಭೂಮಿ ಯಲ್ಲಿ ಸಮರ್ಪಕ ವಾಗಿ ಸ್ಥಳೀಯ ಗಿಡಮರ ಬೆಳೆಸುವ ಮೂಲಕ ಹೆಚ್ಚು ತ್ತಿರುವ ತಾಪ ಮಾನ ವನ್ನು ನಿಯಂತ್ರಿಸಬಹುದು.
-ಡಾ| ಟಿ.ಎನ್‌. ರಾಮಚಂದ್ರ,
ವಿಜ್ಞಾನಿ, ಬೆಂಗಳೂರು

-ವೇಣು ವಿನೋದ್‌ ಕೆ.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next