Advertisement
ಹೌದು ಬೆಳ್ಳಂಬೆಳಗ್ಗೆ ಮುಂಜಾವು ಹೇಗಿರುತ್ತೆ ಎಂದರೆ ಅಬ್ಟಾ ಹೇಳಲು ಕೂಡ ಆಗದು. ಮುಂಜಾವಿನಲ್ಲಿ ಜನರಿಗೆ ಹಾಸಿಗೆ ಬಿಟ್ಟು ಹೇಳಲು ಕೂಡ ಆಗುವುದಿಲ್ಲ ಅಷ್ಟೊಂದು ತಂಪಾದ ವಾತಾವರಣ ಇರುತ್ತದೆ ಇನ್ನು ಏನೇ ಕೆಲಸ ಮಾಡಬೇಕು ಎಂದರು ನೀರು ಬಳಸಲೇಬೇಕು ನೀರು ಕೂಡ ಅತಿಯಾಗಿ ತಂಪಾಗಿರುವುದರಿಂದ ಯಾವುದೇ ಕೆಲಸ ಮಾಡಲು ಮನಸಾಗುವುದಿಲ್ಲ. ಹಾಗೆ ಹೊರಗಡೆ ಬಂದು ನೋಡಿದರೆ ಒಬ್ಬರ ಮುಖವು ಇನ್ನೊಬ್ಬರಿಗೆ ಕೂಡ ಕಾಣುವುದಿಲ್ಲ. ಮಧ್ಯಾಹ್ನ ತಲೆ ಕಾಯುವಷ್ಟು ಬಿಸಿಲಿದ್ದರೂ ಕೂಡ ಮತ್ತೆ ಸಂಜೆ 7ರ ನಂತರ ತಂಪಾದ ಹವಾಮಾನ ಬೀಸಲು ಶುರುವಾಗುತ್ತದೆ. ಈ ವೇಳೆಯಲ್ಲಿ ಯಾರೂ ಕೂಡ ಹೊರಬರಲು ಬಯಸುವುದಿಲ್ಲ.
Related Articles
Advertisement
ಅವುಗಳೆಂದರೆ…? ಒಂದು ನೆಗಡಿ, ಸ್ರವಿಸುವ ಮೂಗು, ಗಂಟಲು ನೋವು, ಕೆಮ್ಮು, ಹೀಗೆ ಹಲವಾರು ವಿವಿಧ ರೀತಿಯ ವೈರಸ್ ಶೀತ ವಾತಾವರಣದಲ್ಲಿ ಹೆಚ್ಚು ಹೆಚ್ಚು ಸುಲಭವಾಗಿ ಹರಡುತ್ತವೆ. ಇದರಿಂದ ಜ್ವರ, ದೇಹದ ನೋವು, ಆಯಾಸ, ಜಠರುಗಳಿಂದ ಸಮಸ್ಯೆ ಹೀಗೆ ಹಲವಾರು ಕಾಯಿಲೆಗಳು ಹರಡಲು ಶುರುವಾಗುತ್ತದೆ.
ಅಲರ್ಜಿಯೂ ಸಹ ಈ ಹವಾಮಾನದ ಬದಲಾವಣೆಯಿಂದ ಸೊಳ್ಳೆ ಹೆಚ್ಚಾಗಿ ಡೆಂಗಿ ಅಥವಾ ಚಿಕನ್ ಗುನ್ಯಾ ದಂತಹ ರೋಗಗಳು ಹೆಚ್ಚಾಗಿ ಅಲರ್ಜಿಯು ಹೆಚ್ಚು ಪ್ರಮಾಣದಲ್ಲಿ ಕಂಡುಬರುತ್ತದೆ.
ಚಳಿ ಅಂತೂ ಶುರುವಾಗಿಯೇ ಬಿಟ್ಟಿತ್ತು ಎಲ್ಲರೂ ತಮ್ಮ ತಮ್ಮ ಆರೋಗ್ಯದ ಕಡೆಗೆ ಗಮನವಿರಲಿ.
ಪ್ರೀತಿ ಮಾಳವದೆ
ಬೆಂಗಳೂರು