Advertisement

ಜೆಡಿಎಸ್‌ಗೆ ಪಕ್ಷಾಂತರದ ಬಲ; ಜೆಡಿಎಸ್‌ ತೆಕ್ಕೆಗೆ ಜಾರಿ ಕೈ-ಕಮಲದ 25 ನಾಯಕರು

10:15 PM Apr 18, 2023 | Team Udayavani |

ಬೆಂಗಳೂರು: ಕಾಂಗ್ರೆಸ್‌ ಮತ್ತು ಬಿಜೆಪಿಯಲ್ಲಿ ಟಿಕೆಟ್‌ ಸಿಗದ ಒಂಬತ್ತು ಮಾಜಿ ಶಾಸಕರು ಸೇರಿ 25 ಕ್ಷೇತ್ರಗಳ ಪ್ರಮುಖ ನಾಯಕರು ಜೆಡಿಎಸ್‌ ತೆಕ್ಕೆಗೆ ಬಿದ್ದಿದ್ದಾರೆ.

Advertisement

ಎರಡೂ ಪಕ್ಷಗಳಲ್ಲಿ ಕಾಣಿಸಿಕೊಂಡ ಬಂಡಾಯ ಜೆಡಿಎಸ್‌ ಪಾಲಿಗೆ ವರದಾನವಾಗಿದ್ದು, ಕೆಲವು ಕ್ಷೇತ್ರಗಳ ಅಭ್ಯರ್ಥಿಗಳ ಕೊರತೆಯನ್ನೂ ನೀಗಿಸಿದೆ. ಐವರು ಮಾಜಿ ಶಾಸಕರು, ಇಬ್ಬರು ವಿಧಾನಪರಿಷತ್‌ನ ಮಾಜಿ ಸದಸ್ಯರಷ್ಟೇ ಅಲ್ಲದೆ ಮೂವರು ಮಾಜಿ ಸಚಿವರು ಸಹ ಕಾಂಗ್ರೆಸ್‌ ಮತ್ತು ಬಿಜೆಪಿ ತೊರೆದು ಜೆಡಿಎಸ್‌ ಸೇರ್ಪಡೆಯಾಗಿದ್ದು, ಪಕ್ಷಕ್ಕೂ ಕೆಲವೆಡೆ ಬಲ ಬಂದಂತಾಗಿದೆ.

ಪ್ರಮುಖವಾಗಿ ಕಿತ್ತೂರು ಕರ್ನಾಟಕದ ಸವದತ್ತಿ, ರಾಯಭಾಗ, ಕುಡಚಿ, ಕಲ್ಯಾಣ ಕರ್ನಾಟಕ ಭಾಗದ ಜೇವರ್ಗಿ, ಶಹಪುರ, ಯಾದಗಿರಿ, ಬೀದರ್‌, ಬಳ್ಳಾರಿ, ಕೊಪ್ಪಳ, ಹಳೇ ಮೈಸೂರಿನ ಅರಕಲಗೂಡು, ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ, ಮಧ್ಯ ಕರ್ನಾಟಕದ ಚಿತ್ರದುರ್ಗ, ಮಾಯಕೊಂಡ, ಮಲೆನಾಡು ಭಾಗದ ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿಯಿಂದ ನಾಯಕರು ಜೆಡಿಎಸ್‌ನತ್ತ ವಲಸೆ ಬಂದಿದ್ದು, ಎರಡೂ ಪಕ್ಷಗಳ ಬಂಡಾಯ ಜೆಡಿಎಸ್‌ಗೆ ಶಕ್ತಿ ತುಂಬಿದಂತಾಗಿದೆ.

ಅರಕಲಗೂಡು, ಅರಸೀಕೆರೆ ಕ್ಷೇತ್ರಗಳಲ್ಲಿ ಜೆಡಿಎಸ್‌ನ ಹಾಲಿ ಶಾಸಕರು ಪಕ್ಷಾಂತರ ಮಾಡಿದರೂ ಪ್ರಬಲ ಅಭ್ಯರ್ಥಿಗಳು ಸಿಕ್ಕಂತಾಗಿದೆ. ಹಾಲಿ ಶಾಸಕರು ಬಿಟ್ಟು ಹೋದ ಕೋಲಾರ ಮತ್ತು ಗುಬ್ಬಿ ಕ್ಷೇತ್ರಗಳಿಗೂ ಸಮರ್ಥ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ.

ಕಲ್ಯಾಣ ಕರ್ನಾಟಕ ಹಾಗೂ ಕಿತ್ತೂರು ಕರ್ನಾಟಕ ಭಾಗದಲ್ಲಿ ಕೆಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಕೊರತೆ ಇತ್ತಾದರೂ ಎರಡೂ ಪಕ್ಷಗಳಿಂದ ಟಿಕೆಟ್‌ ವಂಚಿತರು ಬಂದಿದ್ದರಿಂದ ಗೆಲುವಿನ ಜತೆಗೆ ಪಕ್ಷದ ಮತಗಳಿಕೆಗೂ ಅನುಕೂಲವಾಗಲಿದೆ. ಜೆಡಿಎಸ್‌ ಮೊದಲ ಪಟ್ಟಿ ಬಿಡುಗಡೆ ನಂತರ ಕಾದು ನೋಡುವ ತಂತ್ರ ಅನುಸರಿಸಿದ್ದರಿಂದ ಪಕ್ಷಕ್ಕೆ ಲಾಭವಾಗಿದೆ ಎಂಬ ವ್ಯಾಖ್ಯಾನಗಳೂ ಕೇಳಿಬರುತ್ತಿವೆ.

Advertisement

ಕಾಂಗ್ರೆಸ್‌ ಮತ್ತು ಬಿಜೆಪಿಯಿಂದ ಟಿಕೆಟ್‌ ವಂಚಿತರು ಜೆಡಿಎಸ್‌ನತ್ತ ಬಂದಿರುವುದರಿಂದ ಆಯಾ ಕ್ಷೇತ್ರಗಳ ಫ‌ಲಿತಾಂದ ಮೇಲೂ ಪರಿಣಾಮ ಬೀರಲಿದ್ದು, ಕಾಂಗ್ರೆಸ್‌ ಮತ್ತು ಬಿಜೆಪಿಗೆ ಎಷ್ಟರ ಮಟ್ಟಿಗೆ ಹೊಡೆದ ನೀಡಲಿದೆ ಎಂಬುದು ಕಾದು ನೋಡಬೇಕಾಗಿದೆ.

ಯಾರ್ಯಾರು ಎಲ್ಲಿಂದ
– ಎ.ಮಂಜು- ಬಿಜೆಪಿ (ಅರಕಲಗೂಡು)
– ಮನೋಹರ ತಹಸೀಲ್ದಾರ್‌- ಕಾಂಗ್ರೆಸ್‌ (ಹಾನಗಲ್‌)
– ಎ.ಬಿ.ಮಾಲಕರೆಡ್ಡಿ-ಬಿಜೆಪಿ (ಯಾದಗಿರಿ)
– ಎಂ.ಪಿ.ಕುಮಾರಸ್ವಾಮಿ-ಬಿಜೆಪಿ (ಮೂಡಿಗೆರೆ)
– ದೊಡ್ಡಪ್ಪಗೌಡ ಪಾಟೀಲ್‌ ನರಿಬೋಳ್‌ – ಬಿಜೆಪಿ (ಜೇವರ್ಗಿ)
– ಗುರುಪಾಟೀಲ್‌ ಶಿರವಾಳ್‌- ಬಿಜೆಪಿ (ಶಹಪುರ)
– ರಘು ಆಚಾರ್‌- ಕಾಂಗ್ರೆಸ್‌ (ಚಿತ್ರದುರ್ಗ)
– ಸೂರ್ಯಕಾಂತ ನಾಗಮಾರಪಲ್ಲಿ -ಬಿಜೆಪಿ (ಬೀದರ್‌)
– ಘೋಕ್ಲೃಕರ್‌ – ಕಾಂಗ್ರೆಸ್‌ (ಹಳಿಯಾಳ)
– ಎಚ್‌.ಪಿ.ರಾಜೇಶ್‌- ಕಾಂಗ್ರೆಸ್‌ (ಜಗಳೂರು)
– ಭಾರತಿ ಶಂಕರ್‌ – ಬಿಜೆಪಿ (ವರುಣಾ)
– ಸಿ.ವಿ.ಚಂದ್ರಶೇಖರ್‌- ಬಿಜೆಪಿ (ಕೊಪ್ಪಳ)
– ದೇವರಾಜ ಪಾಟೀಲ್‌- ಕಾಂಗ್ರೆಸ್‌ (ಬಾಗಲಕೋಟೆ)
– ರಾಜಗೋಪಾಲರೆಡ್ಡಿ- ಕಾಂಗ್ರೆಸ್‌ ( ಬೆಂಗಳೂರು ದಕ್ಷಿಣ)
– ತೇಜಸ್ವಿ ಪಟೇಲ್‌- ಕಾಂಗ್ರೆಸ್‌ (ಚನ್ನಗಿರಿ)
– ಚೈತ್ರಾ ಕೋಠಾರ್‌ಕರ್‌- ಕಾಂಗ್ರೆಸ್‌ (ಕಾರವಾರ)
– ಶಶಿಕಾರ್‌ ಪಡಲಗಾ- ಕಾಂಗ್ರೆಸ್‌ (ಅಥಣಿ)
– ಆನಂದ ಮಾಳಗ- ಬಿಜೆಪಿ(ಕುಡಚಿ)
– ಪ್ರದೀಪ ಮಾಳಗಿ- ಬಿಜೆಪಿ (ರಾಯಭಾಗ)
– ಆನಂದಪ್ಪ-ಕಾಂಗ್ರೆಸ್‌ (ಮಾಯಕೊಂಡ)
– ನಾಗರಾಜ ಗೌಡ- ಕಾಂಗ್ರೆಸ್‌ (ಶಿಕಾರಿಪುರ)
– ಅಪ್ಪುಗೌಡ ಪಾಟೀಲ್‌- ಬಿಜೆಪಿ (ಬಸವನಬಾಗೇವಾಡಿ)
– ಎನ್‌.ಆರ್‌.ಸಂತೋಷ್‌- ಬಿಜೆಪಿ (ಅರಸೀಕರೆ)
– ರಾಜು ನಾಯಕ-ಕಾಂಗ್ರೆಸ್‌ (ಕಂಪ್ಲಿ)

ನಿರೀಕ್ಷಿತ
– ನೆಹರು ಓಲೆಕಾರ್‌ – ಬಿಜೆಪಿ (ಹಾವೇರಿ)
– ಪ್ರಸನ್ನಕುಮಾರ್‌ -ಕಾಂಗ್ರೆಸ್‌ ಅಥವಾ ಆಯನೂರು ಮಂಜುನಾಥ್‌- ಬಿಜೆಪಿ (ಶಿವಮೊಗ್ಗ)
– ಅನಿಲ್‌ ಲಾಡ್‌ -ಕಾಂಗ್ರೆಸ್‌ (ಬಳ್ಳಾರಿ)

Advertisement

Udayavani is now on Telegram. Click here to join our channel and stay updated with the latest news.

Next