Advertisement
ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯತ್ ಗಳಲ್ಲಿ ಆಡಳಿತಾರೂಢ ಬಿಜೆಪಿ ಹಿನ್ನಡೆ ಅನುಭವಿಸಿದೆ. ಕಾಂಗ್ರೆಸ್ ಹೆಚ್ಚಿನ ಸ್ಥಾನಗಳನ್ನು ಗಳಿಸಿ ಸಂಭ್ರಮಿಸಿದೆ. ಹಲವೆಡೆ ಪಕ್ಷೇತರರೇ ನಿರ್ಣಾಯಕರಾಗಿದ್ದಾರೆ.
Related Articles
Advertisement
2015ರಲ್ಲಿ 48 ಸ್ಥಳೀಯ ಸಂಸ್ಥೆಗಳಲ್ಲಿ ಗೆದ್ದಿದ್ದ ಪಕ್ಷ 2021ರಲ್ಲಿ 71ರಲ್ಲಿ ಗೆಲುವು ಸಾಧಿಸಿ 23 ಹೆಚ್ಚುವರಿ ಸ್ಥಳೀಯ ಸಂಸ್ಥೆಗಳನ್ನು ಗೆದ್ದಿದೆ ಎಂದು ಬಿಜೆಪಿ ಹೇಳಿಕೊಂಡಿದೆ.
ಕಳೆದ 2 ವರ್ಷಗಳಲ್ಲಿ ನಡೆದ ಚುನಾವಣೆಗಳಲ್ಲಿ ಬಿಜೆಪಿ ನಿರಂತರವಾಗಿ ಜಯ ಸಾಧಿಸಿದ್ದು, ಒಂದೆರಡು ನಗರಸಭೆ, ಪಟ್ಟಣ ಪಂಚಾಯತಿಯ ಸೋಲು ಪಕ್ಷಕ್ಕೆ ಹಿನ್ನಡೆ ಎಂದು ವಿಶ್ಲೇಷಿಸಲಾಗದು. ಹಿನ್ನಡೆ ಆದಲ್ಲಿ ಪಕ್ಷ ಇನ್ನಷ್ಟು ಸಂಘಟನಾತ್ಮಕ ಕೆಲಸಕ್ಕೆ ಒಟ್ಟು ಕೊಡಲಿದ್ದು, ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಶಾಸಕರೇ ಆಯ್ಕೆಯಾಗುವಂತೆ ನೋಡಿಕೊಳ್ಳಲಿದ್ದೇವೆ ಎಂದು ಪ್ರಕಟಣೆಯಲ್ಲಿ ಹೇಳಿದೆ.
ಈ ಫಲಿತಾಂಶ ಮುಂಬರುವ ತಾ.ಪಂ, ಜಿ.ಪಂ. ಚುನಾವಣೆಯ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ ಮತ್ತು ಇದು ಮಾನದಂಡವೂ ಅಲ್ಲ. ಹಿನ್ನಡೆಯಾದಲ್ಲಿ ಅವಲೋಕನ ಸಭೆ ನಡೆಸಿ ಮುಂಬರುವ ಚುನಾವಣೆಗೆ ಪಕ್ಷವನ್ನು ಸನ್ನದ್ಧ ಗೊಳಿಸುತ್ತೇವೆ ಎಂದು ಬಿಜೆಪಿ ಹೇಳಿದೆ.