Advertisement

Deepfake ರತನ್‌ ಟಾಟಾ ಫೋಟೋ ಬಳಕೆ

12:41 AM Dec 08, 2023 | Team Udayavani |

ಹೊಸದಿಲ್ಲಿ: ಡೀಪ್‌ಫೇಕ್‌ ಜಾಲಕ್ಕೆ ಚಲನಚಿತ್ರ ನಟಿಯರು ಸಿಲುಕಿದ್ದ ಬೆನ್ನಲ್ಲೇ ಇದೀಗ ಖ್ಯಾತ ಉದ್ಯಮಿ ರತನ್‌ ಟಾಟಾ ಅವರ ಫೋಟೋಗಳನ್ನೂ ಡೀಪ್‌ಫೇಕ್‌ ಮಾಡಿ ನಕಲಿ ವೀಡಿಯೋಗಳನ್ನು ಸೃಷ್ಟಿಸಲಾಗಿದೆ. ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ವೀಡಿಯೋ ಗಳಲ್ಲಿ ಜನರಿಗೆ ಹೂಡಿಕೆ ಐಡಿಯಾಗಳನ್ನು ರತನ್‌ ನೀಡುವಂತೆ ಚಿತ್ರಿಸ ಲಾಗಿದ್ದು, ಈ ವೀಡಿಯೋಗಳು ನಕಲಿ ಎಂದು ಅವರು ಸ್ಪಷ್ಟ ಪಡಿಸಿದ್ದಾರೆ.

Advertisement

ಸೋನಾ ಅಗರ್‌ವಾಲ್‌ ಎಂಬವರು ಹಂಚಿಕೊಂಡಿದ್ದ ವೀಡಿಯೋಗಳ ಸ್ಕ್ರೀನ್‌ಶಾಟ್‌ಗಳನ್ನು ರತನ್‌ಟಾಟಾ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇಲ್ಲಿ ಹಂಚಿಕೊಂಡಿರುವ ವೀಡಿಯೋ ಮತ್ತು ಅದರಲ್ಲಿರುವ ಕ್ಯಾಪ್ಶನ್‌ ಎರಡೂ ನಕಲಿ ಎಂದು ಸ್ಪಷ್ಟಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next